More

    ಬಿಡುಗಡೆಗೆ ಸನಿಹ ಬಂದ ‘ಅರ್ಜುನ್​ ಗೌಡ’; ರೀ- ರೆಕಾರ್ಡಿಂಗ್ ಮುಕ್ತಾಯ

    ಬೆಂಗಳೂರು: ರಾಮು ಫಿಲಂಸ್ ಲಾಂಛನದಲ್ಲಿ ರಾಮು ಅವರು ನಿರ್ಮಿಸುತ್ತಿರುವ ಮತ್ತೊಂದು ಅಪಾರ ವೆಚ್ಚದ, ಅದ್ದೂರಿ ಸಿನಿಮಾ ಅರ್ಜುನ್ ಗೌಡ. ಡೈನಾಮಿಕ್ ಪ್ರಿನ್ಸ್‌ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ ಈ ಚಿತ್ರದ ರೀ-ರೆಕಾರ್ಡಿಂಗ್ ಪೂರ್ಣಗೊಂಡಿದೆ. ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಕೊಲ್ಕತ್ತ ನಗರಗಳಲ್ಲಿನ ಸ್ಟುಡಿಯೋಗಳಲ್ಲಿ ಈ ಚಿತ್ರದ ರೀ-ರೆಕಾರ್ಡಿಂಗ್ ನಡೆದಿರುವುದು ವಿಶೇಷ.

    200ಕ್ಕೂ ಹೆಚ್ಚು ತಂತ್ರಜ್ಞರ ಪಾಲ್ಗೊಳುವಿಕೆಯಲ್ಲಿ ರೀ- ರೆಕಾರ್ಡಿಂಗ್ ನಡೆದಿದೆ. ಧರ್ಮವಿಶ್ ಈ ಚಿತ್ರದ ಸಂಗೀತ ನಿರ್ದೇಶಕರು. ಸಿ.ಜಿ‌ ಕೆಲಸ ಕೂಡ ಮುಕ್ತಾಯವಾಗಿದ್ದು, ಬೆಂಗಳೂರಿನ ಖ್ಯಾತ ಅನಿಮಂತ್ರ ಸಂಸ್ಥೆ ಯವರು‌ ಸಿ.ಜೆ ವರ್ಕ್ ನ ಉಸ್ತುವಾರಿ ವಹಿಸಿದ್ದರು. 80ಕ್ಕೂ ಹೆಚ್ಚು ನುರಿತ ತಂತ್ರಜ್ಞರು ಸಿ ಜಿ ವರ್ಕ್ ನಲ್ಲಿ ಭಾಗವಹಿಸಿದ್ದರು.

    ಇದನ್ನೂ ಓದಿ: 50 ರೂ ಸಂಭಾವನೆ ಪಡೆಯುತ್ತಿದ್ದ ಶಾರುಖ್​ ಖಾನ್ ಕಡೆಯಿರುವ ಈ ನಾಲ್ಕು ಪ್ರಾಪರ್ಟಿ ಬೆಲೆ ಈಗ ಸಾವಿರ ಕೋಟಿ!?

    ದಕ್ಷಿಣ ಭಾರತದ ಖ್ಯಾತ ಕಲಾವಿದರ ಚಿತ್ರಗಳಿಗೆ ಡಿ ಐ ಕೆಲಸ ಮಾಡಿರುವ ಚೆನ್ನೈನ i-gene ಸಂಸ್ಥೆಯವರು ಅರ್ಜುನ್ ಗೌಡ ಚಿತ್ರಕ್ಕೂ ‌ಡಿ ಐ ಮಾಡಿದ್ದಾರೆ. ಸದ್ಯದಲ್ಲೇ ಸೆನ್ಸಾರ್ ಮುಂದೆ ಹಾಜರಾಗಲಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಸಿಂಗಾಪುರದಲ್ಲಿ ನಡೆದಿದೆ.

    ಲಕ್ಕಿ ಶಂಕರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಏಳು ಸಾಹಸ ಸನ್ನಿವೇಶಗಳಿದೆ. ಮಾಸ್ ಮಾದ ಮೂಡಿ ಬಂದಿರುವ ಈ ಆಕ್ಷನ್ ಸನ್ನಿವೇಶಗಳು. ನೋಡುಗರ ಮೈ ಜುಂ ಎನಿಸುತ್ತದೆ. ಈಗಾಗಲೇ ಈ ಚಿತ್ರದ ಆಕ್ಷನ್ ಟ್ರೇಲರ್ ಬಿಡುಗಡೆಯಾಗಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

    ಇದನ್ನೂ ಓದಿ: ಆಚಾರ್ಯ ರಾಮ್​ಚರಣ್​ಗೆ ಕಿಯಾರಾನಾ ರಶ್ಮಿಕಾನಾ?

    ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಅಭಿನಯಿಸಿದ್ದಾರೆ. ಬಾಲಿವುಡ್ ನ ರಾಹುಲ್ ದೇವ್, ಸ್ಪರ್ಶ ರೇಖ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಕವಿರಾಜ್, ರಾಘವೇಂದ್ರ ಕಾಮತ್, ಶಂಕರ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ , ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ಮೋಹನ್, ಕಂಬಿ‌ರಾಜು ಅವರ ನೃತ್ಯ ನಿರ್ದೇಶನ ಅರ್ಜುನ್ ಗೌಡ ಚಿತ್ರಕ್ಕಿದೆ.

    ಹೈದರಾಬಾದ್​ನಲ್ಲಿ ಆರ್​ಆರ್​ಆರ್ ಶೂಟಿಂಗ್; ಶೀಘ್ರವೇ ತಂಡ ಸೇರಿಕೊಳ್ಳಲಿದ್ದಾರೆ ಆಲಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts