More

    ಮನೆಗೆಲಸ ಮಾಡಿ ಗಂಡಸರಿಗೆ ಸವಾಲು ಹಾಕಿದ ಉಪೇಂದ್ರ!

    ಬೆಂಗಳೂರು: ಕರೊನಾದಿಂದಾಗಿ ವರ್ಕ್​ ಫ್ರಂ ಹೋಮ್ ಜಾರಿ ಆದಾಗಿನಿಂದ ಅದೆಷ್ಟೋ ಜನರ ಮನೆಯಲ್ಲಿ ಕೆಲವರದ್ದು ಮನೆಗೆಲಸ, ಇನ್ನು ಕೆಲವರದ್ದು ಮನೆಯಿಂದ ಕೆಲಸ. ಇನ್ನು ಕೆಲವರದ್ದು ಮನೆಯಿಂದ ಕೆಲಸ ಮಾಡುತ್ತಲೇ ಮನೆಗೆಲಸವನ್ನೂ ಮಾಡುವ ಪರಿಸ್ಥಿತಿ.

    ಈಗ ಕರೊನಾ ಕಡಿಮೆ ಆದಮೇಲೆ ಬಹಳಷ್ಟು ಮಂದಿ ವರ್ಕ್ ಫ್ರಂ ಹೋಮ್​ ಬದಲಿಗೆ ಕಚೇರಿಗೆ ಹೋಗಿ ಕೆಲಸ ಮಾಡಲಾರಂಭಿಸಿದ್ದಾರೆ. ಆದರೆ ರಿಯಲ್​ ಸ್ಟಾರ್ ಉಪೇಂದ್ರ ಇದೀಗ ಮನೆಯಿಂದ ಕೆಲಸವಲ್ಲ, ಮನೆಗೆಲಸವನ್ನೇ ಮಾಡಿದ್ದಾರೆ.

    ಕೈಯಲ್ಲಿ ಪೊರಕೆ ಹಿಡಿದು ಕಸಗುಡಿಸಿ, ಒರೆಸಿ ಮನೆ ಸ್ವಚ್ಛಗೊಳಿಸುವ ಜತೆಗೆ ಅಡುಗೆ ಮಾಡಿ ಪಾತ್ರೆ ತೊಳೆದು, ಬಟ್ಟೆ ಒಗೆದು ಒಣಗಿಸುವುದಷ್ಟೇ ಅಲ್ಲದೆ, ಪತ್ನಿ ಪ್ರಿಯಾಂಕಾ ತಲೆಗೆ ಮಸಾಜ್​ ಮಾಡಿ ಅವರು ಹೇಳಿದಂತೆ ಕೆಲಸ ಕೂಡ ಮಾಡಿದ್ದಾರೆ. ತಾವು ಇವೆಲ್ಲವನ್ನು ಮಾಡಿದ್ದಲ್ಲದೆ ಅವರು ವಿವಾಹಿತ ಪುರುಷರಿಗೂ ಇದನ್ನು ಮಾಡಬಲ್ಲಿರಾ? ಎಂದು ಸವಾಲು ಕೂಡ ಹಾಕಿದ್ದಾರೆ.

    ಓ ಗಂಡಸರೇ, ನಿಮ್ಮ ಹೋಂ ಮಿನಿಸ್ಟರ್ ಜೊತೆ ಈ ಸವಾಲನ್ನು ನೀವು ಒಪ್ಪುವಿರಾ? ಎಂದು ಸವಾಲೆಸೆದಿರುವ ಅವರು ವಿವಾಹಿತರು ಪತ್ನಿಯ ಸೇವೆ, ಮನೆಗೆಲಸ ಮಾಡುವಿರಾ? ಎಂದು ಚಾಲೆಂಜ್ ಹಾಕಿದ್ದಾರೆ. ಇದನ್ನು ಗಂಡಸರು ಸವಾಲಾಗಿ ತೆಗೆದುಕೊಂಡಿದ್ದಾರೋ ಇಲ್ಲವೋ, ಆದರೆ ವಿವಾಹಿತ ಮಹಿಳೆಯರಂತೂ ಈ ವಿಡಿಯೋ ತಂತಮ್ಮ ಯಜಮಾನರಿಗೆ ಫಾರ್ವರ್ಡ್ ಮಾಡುತ್ತಿರುವುದಂತೂ ನಡೆಯಲಾರಂಭಿಸಿದೆ.

    ಅಷ್ಟಕ್ಕೂ ಉಪೇಂದ್ರ ಇಷ್ಟೆಲ್ಲ ಮಾಡಿರುವುದು ಹೋಮ್ ಮಿನಿಸ್ಟರ್​ಗಾಗಿ. ಅಂದರೆ ಏ. 1ರಂದು ಬಿಡುಗಡೆ ಆಗಲಿರುವ ಅವರ ಹೋಮ್​ ಮಿನಿಸ್ಟರ್ ಚಿತ್ರದ ಪ್ರಚಾರಕ್ಕಾಗಿ. ಈ ಚಿತ್ರದಲ್ಲಿ ಉಪೇಂದ್ರ ಈ ಕೆಲಸಗಳನ್ನೆಲ್ಲ ಮಾಡುವ ಜತೆಗೆ ಮಹಿಳೆಯ ಪಾತ್ರಧಾರಿಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts