More

    ಫೈಟರ್​ ಜೆಟ್​ ಮೇಲಿದ್ದ ಹನುಮಂತನ ಚಿತ್ರವನ್ನು ಎಚ್​ಎಎಲ್​ ತೆಗೆದಿದ್ದೇಕೆ?

    ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇಂದು ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2023 ರಲ್ಲಿ ತಮ್ಮ ವಿಮಾನವೊಂದರಲ್ಲಿ ಅಂಟಿಸಲಾಗಿದ್ದ ಹನುಮಂತನ ಸ್ಟಿಕ್ಕರ್​ಅನ್ನು ತೆಗೆದುಹಾಕಿದೆ.

    “ಆಂತರಿಕ ಚರ್ಚೆಯ ನಂತರ, ಹನುಮಂತನ ಚಿತ್ರವನ್ನು ಈಗ ಹಾಕುವುದು ಸೂಕ್ತವಲ್ಲದ ಕಾರಣ ನಾವು ತೆಗೆದುಹಾಕಲು ನಿರ್ಧರಿಸಿದ್ದೇವೆ” ಎಂದು ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿಬಿ ಅನಾಥಕೃಷ್ಣನ್ ಹೇಳಿಕೆ ನೀಡಿದ್ದಾರೆ.

    ಏರೋ ಇಂಡಿಯಾ 2023ರ ಮೊದಲ ದಿನದಂದು, HAL ತನ್ನ ಸೂಪರ್​ ಸಾನಿಕ್ ತರಬೇತುದಾರ ವಿಮಾನ HLFT-42 ನ ಪೂರ್ಣ ಪ್ರಮಾಣದ ಮಾದರಿಯನ್ನು ಪ್ರದರ್ಶಿಸಿತು. ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಮಾದರಿ ವಿಮಾನವು ಅದರ ಬಾಲದಲ್ಲಿ ಹನುಮಂತನ ಚಿತ್ರವನ್ನು ಒಳಗೊಂಡಿತ್ತು.

    ವಿಮಾನದ ಶಕ್ತಿಯನ್ನು ಪ್ರದರ್ಶಿಸಲು ಹನುಮಂತನ ಚಿತ್ರವನ್ನು ಬಳಸಲು ನಿರ್ಧರಿಸಿದ್ದೇವೆ ಎಂದು ಏರೋನಾಟಿಕ್ಸ್ ಸಂಸ್ಥೆ ತಿಳಿಸಿದೆ. ಏರೋ ಇಂಡಿಯಾ 2023, ಏಷ್ಯಾದ ಅತಿದೊಡ್ಡ ಏರೋ ಶೋ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಉದ್ಘಾಟಿಸಿದರು. ಐದು ದಿನಗಳ ಈವೆಂಟ್‌ನಲ್ಲಿ 809 ಕಂಪನಿಗಳು ಮತ್ತು ಸುಮಾರು 98 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

    ಏರೋ ಇಂಡಿಯಾದ 14 ನೇ ಆವೃತ್ತಿಯು ದೇಶವನ್ನು ಮಿಲಿಟರಿ ವಿಮಾನಗಳು, ಹೆಲಿಕಾಪ್ಟರ್‌ಗಳು, ಮಿಲಿಟರಿ ಉಪಕರಣಗಳು ಮತ್ತು ಹೊಸ-ಯುಗದ ಏವಿಯಾನಿಕ್ಸ್‌ಗಳನ್ನು ತಯಾರಿಸಲು ಉದಯೋನ್ಮುಖ ಕೇಂದ್ರವಾಗಿ ಪ್ರದರ್ಶಿಸುತ್ತಿದೆ.

    ಈ ಕಾರ್ಯಕ್ರಮವು ಭಾರತದ ಹೊಸ ಶಕ್ತಿ ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. “ಭಾರತದ ಯಶಸ್ಸುಗಳು ಅದರ ಸಾಧ್ಯತೆಗಳು ಮತ್ತು ಸಾಮರ್ಥ್ಯದ ಪುರಾವೆಗಳನ್ನು ನೀಡುತ್ತಿವೆ ಮತ್ತು ತೇಜಸ್ ವಿಮಾನವು ಆಕಾಶದಲ್ಲಿ ಘರ್ಜಿಸುತ್ತಿರುವುದು ‘ಮೇಕ್ ಇನ್ ಇಂಡಿಯಾ’ ಯಶಸ್ಸಿನ ಪುರಾವೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts