More

    ಇನ್ನೆಷ್ಟು ದಿನಗಳಲ್ಲಿ ಸಹಜ ಸ್ಥಿತಿಗೆ ಬರುತ್ತೆ ಕರ್ನಾಟಕ? ಕಾರ್ಮಿಕರಿಗೆ ಯಾವತ್ತಿನಿಂದ ಸಿಗುತ್ತೆ ಕೆಲಸ?

    ಬೆಂಗಳೂರು: ಈ ಕರೊನಾ ಲಾಕ್ ಡೌನ್ ಯಾವಾಗ ಮುಕ್ತಾಯವಾಗುತ್ತೆ, ನಮ್ಮ ಕೆಲಸ ಮತ್ತೆ ಯಾವಾಗ ಶುರುವಾಗುತ್ತೆ ಅನ್ನೋದು ಬಹುತೇಕ ಎಲ್ಲರ ತಲೆ ಕೊರೆಯುತ್ತಿರುವ ಪ್ರಶ್ನೆ. ಇದಕ್ಕೆ ಕೊನೆಗೂ ಉತ್ತರ ದೊರೆತಿದೆ.

    ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ವಿಜಯವಾಣಿ- ದಿಗ್ವಿಜಯ 24/7 ನ್ಯೂಸ್ ಗುರುವಾರ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಈ ಪ್ರಶ್ನೆಗೊಂದು ಸಮಾಧಾನಕರ ಉತ್ತರ ನೀಡಿದ್ದಾರೆ.

    “ಇನ್ನು 2-3 ದಿನಗಳಲ್ಲಿ ಇಡೀ ರಾಜ್ಯದ ಬಹುತೇಕ ಪ್ರದೇಶಗಳು ಮೊದಲಿನಂತೆ ಸಹಜ ಸ್ಥಿತಿಗೆ ಬರಲಿವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಮೇ 3ರ ನಂತರವಾದರೂ ಮದ್ಯದಂಗಡಿ ಓಪನ್​ ಆಗುತ್ತಾ? ಸಿಎಂ ಏನು ಹೇಳ್ತಾರೆ?

    ರಾಜ್ಯದ ನಾನಾ ಕಡೆಗಳಿಂದ ಬಂದ ನೂರಾರು ಕರೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, “ರಾಜ್ಯವನ್ನು ಆದಷ್ಟು ಬೇಗ ಸಹಜಸ್ಥಿತಿಗೆ ತರಲು ಸಂಪುಟ ಸಭೆಯಲ್ಲಿ ಕೂಡ ನಿರ್ಧಾರ ಕೈಗೊಳ್ಳಲಾಗಿದೆ” ಎಂದರು.

    ಟೇಲರ್ ಗಳು, ಡ್ರೈವರ್ ಗಳು, ವಿವಿಧ ಕಾರ್ಖಾನೆಗಳ ಕಾರ್ಮಿಕರು ಸೇರಿದಂತೆ ಅನೇಕರು ಸಚಿವರಿಗೆ ಕರೆ ಮಾಡಿ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದರು.

    ಸಂಪೂರ್ಣ ಪ್ರಶ್ನೋತ್ತರದ ಮಾಹಿತಿ ನಾಳೆಯ ‘ವಿಜಯವಾಣಿ’ಯಲ್ಲಿ ಪ್ರಕಟವಾಗಲಿದೆ.

    ಇದನ್ನೂ ಓದಿ: ಲಾಕ್​ಡೌನ್ ನಿಯಮಗಳನ್ನು ಗಾಳಿಗೆ ತೂರಿ ಪುತ್ರನ ವಿವಾಹ ನೆರವೇರಿಸಿದ ಮಾಜಿ ಶಾಸಕ; ಮಾಸ್ಕ್​ ಇರಲಿಲ್ಲ, ಸಾಮಾಜಿಕ ಅಂತರ ಪಾಲನೆಯಾಗಿಲ್ಲ…!

    ಮೇ 1ರ ಕಾರ್ಮಿಕ ದಿನದ ಹಿನ್ನೆಲೆಯಲ್ಲಿ ಅದರ ಮುನ್ನಾ ದಿನ ಈ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

    ವಿಜಯವಾಣಿ ಫೋನ್​ ಇನ್​ನಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್​….

    ವಿಜಯವಾಣಿ ಕಚೇರಿಯಲ್ಲಿ ನಡೆದ ಫೋನ್​ ಇನ್​ ಕಾರ್ಯಕ್ರಮದಲ್ಲಿ ಇಂದು ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​ ಅವರು ಪಾಲ್ಗೊಂಡು ಕಾರ್ಮಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಹಾಗೇ ಸಮಸ್ಯೆಗಳನ್ನು ಆಲಿಸಿದರು. ಮಹಿಳೆಯೋರ್ವರು ಕರೆ ಮಾಡಿ ತಮ್ಮ ಪತಿ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಅಟೆಂಡರ್ ಆಗಿದ್ದಾರೆ. ನಮಗೆ ಪಿಎಫ್​ ಸೌಲಭ್ಯ ಇಲ್ಲ. ಸಂಬಳವನ್ನೂ ಜಾಸ್ತಿ ಮಾಡುವುದಿಲ್ಲ. ಸ್ವಲ್ಪ ದಿನ ಕೆಲಸ ಮಾಡಿಸಿಕೊಂಡು, ಸಂಬಳ ಹೆಚ್ಚು ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಕೆಲಸದಿಂದಲೇ ತೆಗೆದುಬಿಡುತ್ತಾರೆ ಎಂದು ತಮ್ಮ ಕಷ್ಟ ಹೇಳಿಕೊಂಡರು.ಮಹಿಳೆಯ ಬಳಿ ಅವರ ಪತಿ ಕೆಲಸ ಮಾಡುವ ಸ್ಥಳದ ಬಗ್ಗೆ ವಿಚಾರಣೆ ಮಾಡಿದ ಶಿವರಾಮ್​ ಹೆಬ್ಬಾರ್​ ಅವರು ತಾವೇ ಸ್ವತಃ ಮಾತನಾಡುವುದಾಗಿ ಹೇಳಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಸಂಪೂರ್ಣ ವಿವರಗಳಿಗಾಗಿ ನಾಳಿನ (ಮೇ 1) ವಿಜಯವಾಣಿ ಓದಿ

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಏಪ್ರಿಲ್ 30, 2020

    ಮಾಸ್ಕ್​ ಧರಿಸದಿದ್ದರೆ ನೇರ ಜೈಲಿಗೆ, ಜತೆಗೆ ಭಾರಿ ದಂಡ! ಬಂದಿದೆ ಹೊಸ ನಿಯಮ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts