More

    ನಿಯಮ ಮೀರಿ ಜಲಸಾಹಸ ಕ್ರೀಡೆ

    ಜೊಯಿಡಾ: ಪ್ರವಾಸಿಗರು ಹಾಗೂ ಮಾರ್ಗದರ್ಶಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ತಾಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ಜಲ ಸಾಹಸ ಕ್ರೀಡೆಗಳಲ್ಲಿ ರಾಜಾರೋಷವಾಗಿ ಪಾಲ್ಗೊಳ್ಳುತ್ತಿದ್ದಾರೆ.
    ಈ ಹಿಂದೆ ಫೆಬ್ರವರಿಯಲ್ಲಿ ಜೊಯಿಡಾ ತಹಸೀಲ್ದಾರ್ ಕಚೇರಿಯಲ್ಲಿ ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರ ಸಭೆಯಲ್ಲಿ ರಾಪ್ಟಿಂಗ್ ಆಯೋಜಿಸುವವರು ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಸೂಚಿಸಲಾಗಿತ್ತು. ಆದರೆ, ಈವರೆಗೂ ತಹಸೀಲ್ದಾರರ ಆದೇಶ ಪಾಲಿಸಿಲ್ಲ.
    ಶನಿವಾರ ಮತ್ತು ಭಾನುವಾರ ಗಣೇಶಗುಡಿ ಸುಪಾ ಜಲಾಶಯದ ಕೆಳಗಿ ಸೇತುವೆ ಮೇಲೆ ನೂರಾರು ಪ್ರವಾಸಿಗರು ಮಾಸ್ಕ್ ಧರಿಸದೆ ಡ್ಯಾನ್ಸ್ ಮಾಡುತ್ತಿರುವುದು ಹಾಗೂ ಸೆಲ್ಪೀ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದೆ. ಸಂಬಂಧಿಸಿದ ಪೊಲೀಸ್ ಇಲಾಖೆ, ತಾಲೂಕಾಡಳಿತಕ್ಕೆ ಸಾರ್ವಜನಿಕರು ಈ ಬಗ್ಗೆ ಮಾಹಿತಿ ನೀಡಿದರೂ ಯಾವುದೆ ಕ್ರಮ ಕೈಗೊಂಡಿಲ್ಲ. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲ ರೆಸಾರ್ಟ್​ನವರು ಬೋಟ್​ಗಳಲ್ಲಿ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 8ರ ಬದಲು 16 ಜನ ಪ್ರವಾಸಿಗರನ್ನು ತುಂಬುತ್ತಿ್ತ್ದಾರೆ. ಸುರಕ್ಷತಾ ಸಾಧನಗಳನ್ನು ಬಳಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

    ತಾಲೂಕಿನ ಪ್ರವಾಸಿ ಚಟುವಟಿಕೆಗಳ ಕುರಿತು ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಬುಧವಾರ ಗಣೇಶಗುಡಿಯಲ್ಲಿ ಬುಧವಾರ ರೆಸಾರ್ಟ್ ಮತ್ತು ಹೋಂ ಸ್ಟೇಗಳ ಮಾಲೀಕರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಎಲ್ಲ ಪ್ರವಾಸೋದ್ಯಮದ ಚಟುವಟಿಕೆಗಳ ಕುರಿತು ರ್ಚಚಿಸಿ ನಿರ್ದೇಶನ ನೀಡಲಾಗುವುದು.
    | ಸಂಜಯ ಕಾಂಬಳೆ ತಹಸೀಲ್ದಾರ್ ಜೊಯಿಡಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts