ಲಾಕ್ಡೌನ್​​ನಿಂದ ತೂಕ ಹೆಚ್ಚಿಸಿಕೊಂಡರಾ ಅನುಷ್ಕಾ ಶೆಟ್ಟಿ?

ಹೈದರಾಬಾದ್​: ನಟಿ ಅನುಷ್ಕಾ ಶೆಟ್ಟಿ ಮೊದಲಿನಿಂದ ತಮ್ಮ ತೂಕದ ವಿಷಯವಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಅವರ ಹೊಸ ಫೋಟೋವೊಂದು ಬಿಡುಗಡೆಯಾಗಿದ್ದು, ಸಾಕಷ್ಟು ವೈರಲ್​ ಆಗಿದೆ. ಅದಕ್ಕೆ ಕಾರಣ, ಅನುಷ್ಕಾ ಇನ್ನಷ್ಟು ತೂಕ ಹೆಚ್ಚಿಸಿಕೊಂಡಂತೆ ಕಾಣುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರ ಇನ್ನಾದರೂ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು: ಅನುಪಮ್ ಖೇರ್

ಹೌದು, ಅನುಷ್ಕಾ ಶೆಟ್ಟಿ ಅವರ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಚಿತ್ರದಲ್ಲಿ ಟ್ರಾಕ್​ಸೂಟ್​ನಲ್ಲಿ ಕಾಣಿಸಿಕೊಂಡಿರುವ ಅನುಷ್ಕಾ ಸಾಕಷ್ಟು ದಪ್ಪಗಾದಂತೆ ಕಾಣುತ್ತಾರೆ. ಸಾಮಾನ್ಯವಾಗಿ, ನಟಿಯರು ತಮ್ಮ ತೂಕವನ್ನು ಹೆಚ್ಚಿಸಿಕೊಂಡರೆ ಸಾಕಷ್ಟು ಟ್ರೋಲ್​ಗೆ ಒಳಗಾಗಬೇಕಾಗುತ್ತದೆ. ಆದರೆ, ಪುಣ್ಯಕ್ಕೆ ಅನುಷ್ಕಾ ಬಗ್ಗೆ ಯಾರೂ ಟ್ರಾಲ್​ ಮಾಡುತ್ತಿಲ್ಲ. ಬಹುಶಃ ಬಹಳ ದಿನಗಳ ನಂತರ ಅವರ ಫೋಟೋವೊಂದು ಬಿಡುಗಡೆಯಾಗಿರುವುದರಿಂದ, ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆಯೇ ಹೊರತು, ಟ್ರೋಲ್​ ಮಾಡಿಲ್ಲ.

ಅನುಷ್ಕಾ ಅವರ ಈ ತೂಕ ಹೆಚ್ಚಳಕ್ಕೆ ಕಾರಣ ಲಾಕ್​ಡೌನ್ ಎಂದು ಹೇಳಲಾಗುತ್ತಿದೆ. ಕಳೆದ ಒಂದು ತಿಂಗಳನಿಂದ ಬಹಳಷ್ಟು ರಾಜ್ಯಗಳಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದು, ನಟ-ನಟಿಯರು ಮನೆಯಲ್ಲೇ ಉಳಿಯಬೇಕಾಗಿದೆ. ಬಹುಶಃ ವರ್ಕೌಟ್​ ಮಾಡದ ಕಾರಣ, ಹೀಗೆ ತೂಕ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ತಮನ್ನಾ ಅವರ ಹೊಸ ಫೋಟೋ ಬಿಡುಗಡೆಯಾಗಿದ್ದು, ಅವರು ಸ್ವಲ್ಪ ತೂಕ ಹೆಚ್ಚಿಸಿಕೊಂಡಿರುವಂತೆ ಕಾಣುತ್ತಿದೆ.

ಇದನ್ನೂ ಓದಿ: ಸಿನಿಮಾ ಕಾರ್ಮಿಕರಿಗೆ ರೇಷನ್ ಕಿಟ್ ವಿತರಿಸಿದ ಉಪೇಂದ್ರ

ಕಳೆದ ಲಾಕ್​ಡೌನ್​ ಸಮಯದಲ್ಲಿ ಅನುಷ್ಕಾ ಅವರ ನಿಶ್ಯಬ್ಧಂ ಎಂಬ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಇದಾದ ಮೇಲೆ ಯುವಿ ಕ್ರಿಯೇಷಣ್ಸ್​ ನಿರ್ಮಾಣದ ಮತ್ತು ಮಹೇಶ್​ ಪಿ ನಿರ್ದೇಶನದಲ್ಲಿ ಅನುಷ್ಕಾ ಒಂದು ಹೊಸ ಚಿತ್ರ ಒಪ್ಪಿಕೊಂಡಿದ್ದು, ಈ ಚಿತ್ರ ಇನ್ನಷ್ಟೇ ಶುರುವಾಗಬೇಕಿದೆ.

ನಟಿ ಸಂಜನಾ ಗಲ್ರಾನಿ ವಿರುದ್ಧ ಎಫ್ಐಆರ್; ವಿಸ್ಕಿ ಎರಚಿ ಹಲ್ಲೆ ನಡೆಸಿದ ಆರೋಪ!

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…