More

    ಅನುಷ್ಕಾ ಶೆಟ್ಟಿ ಕಮ್​ಬ್ಯಾಕ್: ಸ್ಟಾರ್ ನಟನ ಜತೆ ನಾಯಕಿಯಾಗಿ ದೇವಸೇನಾ… ಯಾರದು?

    ಹೈದರಾಬಾದ್: 17 ವರ್ಷಗಳಿಂದ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಒಬ್ಬ ಸ್ಟಾರ್ ನಟನಿಗೆ ಇರುವಷ್ಟು ಅಭಿಮಾನಿಗಳನ್ನು ಸೌತ್​ನಲ್ಲಿ ಪಡೆದುಕೊಂಡ ಏಕೈಕ ಸ್ಟಾರ್ ನಟಿ ಅಂದರೆ ಅದು ಅನುಷ್ಕಾ ಶೆಟ್ಟಿ ಅಕಾ ಸ್ವೀಟಿ ಶೆಟ್ಟಿ. 2020ರಲ್ಲಿ ತೆರೆಕಂಡ ನಿಶ್ಯಬ್ಧಂಸಿನಿಮಾ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ ನಟಿ ಅನುಷ್ಕಾ ಶೆಟ್ಟಿ. ಅದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಇತ್ತೀಚೆಗೆ, ಅನುಷ್ಕಾ ಅವರು ನಟಿಸುತ್ತಿರುವ ಸಿನಿಮಾಗಳ ಸಂಖ್ಯೆ ಕೂಡ ಕಡಿಮೆಯಾಗಿದೆ. ಇದಕ್ಕೆ ಕಾರಣ, ನಟಿಯ ವಯಸ್ಸು ಎಂದು ಹೇಳಲಾಗುತ್ತಿತು. ಆದರೆ, ಇದೀಗ ಅದೇ 39 ವರ್ಷದ ದೇವಸೇನಾ ಸೌತ್ ಸಿನಿರಂಗಕ್ಕೆ ಭರ್ಜರಿ ಕಮ್​ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ.
    ಹೌದು, ತೆಲುಗಿನ ಖ್ಯಾತ ಮೆಗಾ ಕುಟುಂಬದ ಮುಖ್ಯಸ್ಥ ಸೂಪರ್ ಸ್ಟಾರ್ ನಟ ಚಿರಂಜೀವಿ ಅವರ ಜತೆ ಒಂದು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರಂತೆ ಅನುಷ್ಕಾ. ಈ ಸುದ್ದಿ ಸದ್ಯ ಸ್ವೀಟಿ ಅಭಿಮಾನಿಗಳಿಗೆ ಒಳ್ಳೆಯ ಸ್ವೀಟ್ ತಿಂದಂತೆ. ನಟ ಚಿರಂಜೀವಿ ಮತ್ತು ಅನುಷ್ಕಾ ಈ ಮುಂಚೆ ಅವರ ಜತೆ ತೆರೆ ಹಂಚಿಕೊಂಡಿದ್ದರೂ ಸಹ ಇದೇ ಮೊದಲ ಬಾರಿ ನಾಯಕನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 2006ರಲ್ಲಿ ಮೆಗಾಸ್ಟಾರ್ ನಟಿಸಿದ್ದ ಸ್ಟಾಲಿನ್ಚಿತ್ರದಲ್ಲಿ ಅನುಷ್ಕಾ ಸ್ಪೇಷಲ್ ಹಾಡೊಂದರಲ್ಲಿ ಹೆಜ್ಜೆಹಾಕಿದ್ದರು. ನಂತರ, ಅನುಷ್ಕಾ ಅವರ 2015ರಲ್ಲಿ ತೆರೆಕಂಡ ರುದ್ರಮ್ಮ ದೇವಿಸಿನಿಮಾಗೆ ಚಿರಂಜೀವಿ ಧ್ವನಿ ನೀಡಿದ್ದರು. ಬಳಿಕ 2019ರಲ್ಲಿ ಚಿರಂಜೀವಿ ಅವರ ನಟನೆಯ ಸೈರಾ ನರಸಿಂಹಾ ರೆಡ್ಡಿಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ರಾಣಿ ಲಕ್ಷ್ಮೀಭಾಯ್ ಪಾತ್ರದಲ್ಲಿ ಸಿನಿ ಪ್ರೇಕ್ಷಕರ ನಿದ್ದೆ ಗೆಡಿಸಿದರು

    ಅನುಷ್ಕಾ ಶೆಟ್ಟಿ ಕಮ್​ಬ್ಯಾಕ್: ಸ್ಟಾರ್ ನಟನ ಜತೆ ನಾಯಕಿಯಾಗಿ ದೇವಸೇನಾ... ಯಾರದು?

    ಹೀಗಿರುವಾಗ, ನಟಿ ಮತ್ತು ಚಿರಂಜೀವಿ ಈಗ ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ ಒಂದು ಸಿನಿಮಾದಲ್ಲಿ ನಾಯಕನಾಯಕಿಯಾಗಿ ತೆರೆ ಹಂಚಿಕೊಂಡರೆ, ಅಭಿಮಾನಿಗಳ ಸಂತಸಕ್ಕೆ ಕೊನೆಯೆ ಇರಲ್ಲ ಎಂದು ಹೇಳಬಹುದು. ನಟ ಚಿರಂಜೀವಿ ಆಚಾರ್ಯಚಿತ್ರದಲ್ಲಿ ನಟಿ ಕಾಜಲ್ ಜತೆ ನಟಿಸಿದ್ದು, ಆ ಸಿನಿಮ ಬಿಡುಗಡೆಗೆ ರೆಡಿಯಾಗಿದೆ. ಆ ಬಳಿಕ ನಟಿಸಲಿರುವ ಎರಡು ಸಿನಿಮಾಗಳು ಅಂದರೆ, ಒಂದು ಗಾಡ್ ಫಾದರ್ಮತ್ತು ಭೊಲಾ ಶಂಕರ್‘. ‘ಗಾಡ್ ಫಾದರ್ಚಿತ್ರದಲ್ಲಿ ನಟಿ ನಯನತಾರಾ ಚಿರಂಜೀವಿಗೆ ನಾಯಕಿಯಾಗಿ ನಟಿಸಲಿದ್ದಾರೆ. ‘ಭೊಲಾ ಶಂಕರ್ಚಿತ್ರದಲ್ಲಿ ನಟಿ ತಮನ್ನಾ ಚಿರಂಜೀವಿ ಜತೆ ನಾಯಕಿಯಾಗಿ ತೆರೆ ಹಂಚಿಕೊಳ್ಳಲಿದ್ದಾರೆ.
    ಇದಲ್ಲದೇ, ನಟ ಚಿರಂಜೀವಿ ಬೇರೆ ಹೆಸರಿಡದ ಎರಡು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ ಎಂಬ ಮಾಹಿತಿ ಇದೆ. ಈ ಎರಡು ಸಿನಿಮಾಗಳಲ್ಲಿ ಒಂದಕ್ಕೆ ಬಾಬಿ ಅವರು ನಿರ್ದೇಶಕರು ಆದರೆ, ಮತ್ತೊಂದಕ್ಕೆ ವೆಂಕಿ ಕುಡುಮುಲ ನಿರ್ದೇಶಕರು ಎನ್ನಲಾಗಿದೆ. ಚಿರಂಜೀವಿ ಅವರ ಜತೆ ಬಾಬಿ ನಿರ್ದೇಶ ಮಾಡುತ್ತಿರುವ ಸಿನಿಮಾಗೆ ನಟಿ ಶ್ರುತಿ ಹಾಸನ್ ನಾಯಕಿಯಂತೆ. ಹಾಗಾಗಿ, ಉಳಿದ ಚಿರಂಜೀವಿ ಮತ್ತು ವೆಂಕಿ ಕುಡುಮುಲ ನಿರ್ದೇಶನದ ಚಿತ್ರದಲ್ಲಿ ನಟಿ ಅನುಷ್ಕಾ ನಾಯಕಿಯಾಗಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ, ನಟಿ ಅನುಷ್ಕಾ ಅವರು ನಾಲ್ಕು ಬೇರೆ ಸಿನಿಮಾಗಳ ಕೆಲಸದಲ್ಲಿ ಸದ್ಯ ಬ್ಯೂಸಿಯಾಗಿದ್ದಾರೆ. ಇದರಿಂದ, ಅನುಷ್ಕಾ ಭರ್ಜರಿ ಕಮ್​​ಬ್ಯಾಕ್​ಗೆ ಸಜ್ಜಾಗಿದ್ದಾರೆ ಎಂದು ತಿಳಿಯುತ್ತಿದೆ. ನಟಿ ಅನುಷ್ಕಾ ಅಭಿಮಾನಿಗಳು ಕೂಡ ತಮ್ಮ ದೇವಸೇನಾಳನ್ನು ಮತ್ತೆ ಆಧರಿಸಲು ಸಿದ್ಧರಾಗಿದ್ದಾರೆ ಎಂದೇ ಹೇಳಬೇಕು.

    ತಮಿಳಿನ ಬ್ಯಾಡ್​ಬಾಯ್​​ಗೆ ಡಾಕ್ಟರೇಟ್ ಗೌರವ! ‘ಸಿಂಬು’ದು 39 ವರ್ಷದ ಸಿನಿ ಜರ್ನಿ…

    ವಿಚ್ಛೇದನವಾದ ಕೇವಲ 3 ತಿಂಗಳಿಗೆ ಹೊಸ ಲವ್ ಸ್ಟೋರಿ ಆರಂಭಿಸಿದ ಸಮಂತಾ ಮಾಜಿ ಪತಿ ನಾಗಚೈತನ್ಯ… ವಿಡಿಯೋ ವೈರಲ್!

    ರಶ್ಮಿಕಾಗೆ ವಿಜಯ್ ಮೇಲೆ ಏಷ್ಟು ಪ್ರೀತಿ ಗೊತ್ತಾ? ಗೋವಾ ವಿಡಿಯೋಸ್ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts