More

    ಮತ್ತೊಬ್ಬ ಎಐಎಡಿಎಂಕೆ ನಾಯಕನ ವಿರುದ್ಧ ಅಸಮಾನ ಆಸ್ತಿ ಪ್ರಕರಣ

    ಚೆನ್ನೈ: ತಮಿಳುನಾಡಿನ ಮಾಜಿ ಆರೋಗ್ಯ ಮಂತ್ರಿ ಹಾಗೂ ಎಐಎಡಿಎಂಕೆ ಶಾಸಕ ಸಿ.ವಿಜಯಭಾಸ್ಕರ್​ ಮತ್ತು ಅವರ ಪತ್ನಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ(ಡಿವಿಎಸಿ)ವು ಅಸಮಾನ ಆಸ್ತಿ ಪ್ರಕರಣ ದಾಖಲಿಸಿದೆ. 2016 ರಿಂದ 2021 ರವರೆಗಿನ ವೀರಲಿಮಲೈನ ಶಾಸಕರಾಗಿದ್ದ ಅವಧಿಯಲ್ಲಿ 27 ಕೋಟಿ ರೂಪಾಯಿಗೂ ಮೀರಿದ ಆಸ್ತಿಗಳನ್ನು ವಿಜಯಭಾಸ್ಕರ್​ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಚೆನ್ನೈ, ಚೆಂಗಲ್ಪಟ್ಟು, ಕೊಯಮತ್ತೂರು, ತಿರುಚ್ಚಿ, ಪುದುಕೊಟ್ಟೈ ಮತ್ತು ಕಾಂಚೀಪುರಂನಲ್ಲಿರುವ ವಿಜಯಭಾಸ್ಕರ್​ ಮತ್ತು ಅವರ ಕುಟುಂಬಕ್ಕೆ ಸೇರಿದ 43 ಸ್ಥಳಗಳಲ್ಲಿ ಇಂದು ಡಿವಿಎಸಿ ಅಧಿಕಾರಿಗಳು ದಾಳಿ ನಡೆಸಿದರು. ದಾಳಿಯ ವೇಳೆ, ಅವರು ತಮ್ಮ ಆದಾಯ ಮೂಲಗಳಿಗೆ ವಿಪರೀತವಾಗಿ ಸುಮಾರು ₹27,22,56,736 ಮೌಲ್ಯದ ಆಸ್ತಿಗಳನ್ನು ಗಳಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

    ಇದನ್ನೂ ಓದಿ: ಲವ್‌ ಮಾಡಲು ತಿಂಗಳಿಗೊಂದು ರಜೆ- ಇದು ಅವಿವಾಹಿತೆಯರಿಗೆ ಮಾತ್ರ! ಎಲ್ಲಿ ಗೊತ್ತಾ?

    ಎಐಎಡಿಎಂಕೆಯ ಮಾಜಿ ಸಚಿವರಾದ ಎಂ.ಆರ್​.ವಿಜಯಭಾಸ್ಕರ್​, ಎಸ್.ಪಿ,ವೇಲುಮಣಿ ಮತ್ತು ಕೆ.ಸಿ.ವೀರಮಣಿ ಅವರ ವಿರುದ್ಧವೂ, ಡಿವಿಎಸಿ, ಈ ಮುನ್ನ ಇದೇ ತೆರನ ದಾಳಿಗಳನ್ನು ನಡೆಸಿ, ಭಷ್ಟಾಚಾರದ ಆರೋಪಗಳನ್ನು ದಾಖಲಿಸಿದೆ.  (ಏಜೆನ್ಸೀಸ್)

    VIDEO| ಸ್ಕೂಟರಲ್ಲಿ ಹೋಗುತ್ತಿದ್ದ ಹುಡುಗಿಯನ್ನು ನಿಲ್ಲಿಸಿ ಬುರ್ಖಾ ತೆಗೆಸಿದರು! ವೈರಲ್​ ಆಯ್ತು ವಿಡಿಯೋ

    ಅಪ್ಪನಾಗುವ ಆಸೆ ಬಿಚ್ಚಿಟ್ಟ ರಣವೀರ್​ ಸಿಂಗ್; ದೀಪಿಕಾರಂತೆ ಕ್ಯೂಟ್​ ಮಗು ಬೇಕಂತೆ!

    ಏಳು ದಿನದಲ್ಲಿ ಆರೋಪ ಸಾಬೀತುಪಡಿಸಿ, ಇಲ್ಲ ಕ್ಷಮೆ ಕೇಳಿ: ಎಚ್​ಡಿಕೆಗೆ ಸಿಂಡಿಕೇಟ್​ ಸದಸ್ಯರ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts