More

    ಕಾಲುವೆ ನಿರ್ಮಾಣಕ್ಕೆ ಮತ್ತೇ 800 ಕೋಟಿ ಮಂಜೂರು

    ತಾಳಿಕೋಟೆ: ವಿಜಯಪುರ- ಚಿಮ್ಮಲಗಿ ಮುಖ್ಯ ಕಾಲುವೆಗೆ ಉಪಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡರೆ ಇಡಿ ದೇವರಹಿಪ್ಪರಗಿ ಮತಕ್ಷೇತ್ರ ನೀರಾವರಿಗೊಳಪಡಲಿದೆ ಎಂದು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು.

    ತಾಲೂಕಿನ ಮಸ್ಕಾನಾಳ, ಗುಂಡಕನಾಳ, ಮೈಲೇಶ್ವರ ಗ್ರಾಮದಲ್ಲಿ ವಿವಿಧ ಯೋಜನೆಯಡಿ ಸೋಮವಾರ ಹಮ್ಮಿಕೊಂಡಿದ್ದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಪೀರಾಪುರ-ಬೂದಿಹಾಳ ಕಾಮಗಾರಿಗೆ 800 ಕೋಟಿ ರೂ. ನೀಡಿದ್ದು, ಈಗ ಮತ್ತೇ ವಿಜಯಪುರ-ಚಿಮ್ಮಲಗಿ ಮುಖ್ಯ ಕಾಲುವೆಯ ಉಪ ಕಾಲುವೆ ನಿರ್ಮಾಣಕ್ಕೆ 800 ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ. ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು.

    ಪ್ರತಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು 1250 ಕೋಟಿ ರೂ. ಮಂಜೂರಾಗಿದೆ. ನಾರಾಯಣಪುರ ಹಿನ್ನೀರಿನಿಂದ ಕುಡಿಯುವ ನೀರು ಪೂರೈಕೆ, ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ, ಮಸ್ಕಾನಾಳ ಕೆರೆ ಹೂಳೆತ್ತುವ ಕಾರ್ಯ ಸೇರಿ ಗ್ರಾಮಗಳಲ್ಲಿ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ ಎಂದು ತಿಳಿಸಿದರು.

    ಇದೇ ವೇಳೆ ವಿವಿಧ ಗ್ರಾಮಸ್ಥರು ಶಾಸಕ ಸೋಮನಗೌಡ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಿದರು.

    ಮುಖಂಡರಾದ ಸಂಗನಗೌಡ ಹೆಗರಡ್ಡಿ, ಸಾಹೇಬಗೌಡ ರಾರಡ್ಡಿ, ಗುರನಗೌಡ ಗುರಡ್ಡಿ, ಸಾಯಬಣ್ಣ ಆಲ್ಯಾಳ, ಸೋಮನಗೌಡ ಹಾದಿಮನಿ, ಮುತ್ತುಗೌಡ ಮಾಳಿ, ಪ್ರಶಾಂತ ಹಾವರಗಿ, ಸಿದ್ರಾಮಪ್ಪ ಚೌದ್ರಿ, ಶಿವಲಿಂಗ ಕುಳಗೇರಿ, ಪರಸಯ್ಯ ಹಿರೇಮಠ, ಪಂಚಯ್ಯ ಹಿರೇಮಠ, ಬಾಳಾಸಾಹೇಬ ಕೋರಿ, ಸಂಗಮೇಶ ಕಲ್ಬುರ್ಗಿ, ಶಂಕರಲಿಂಗ ಚೌದ್ರಿ, ದೇವೇಂದ್ರ ಕುಳಗೇರಿ, ಪಿಡಿಒ ನಿಂಗನಗೌಡ ದೊಡಮನಿ ಮತ್ತಿತರರಿದ್ದರು.

    ನಂತರ ಗುಂಡಕನಾಳದ ಬೃಹನ್ಮಠಕ್ಕೆ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಭೇಟಿ ನೀಡಿ ಶ್ರೀಮಠದ ಗುರುಲಿಂಗ ಶಿವಾಚಾರ್ಯರಿಂದ ಆಶೀರ್ವಾದ ಪಡೆದುಕೊಂಡರು. ಮಠದ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಗ್ರಾಮಗಳಲ್ಲಿ ಮೂಲ ಸೌಕರ್ಯಗಳ ಸಮಸ್ಯೆಗಳಿದ್ದಲ್ಲಿ ನೇರವಾಗಿ ಸಂಪರ್ಕಿಸಿದರೆ ಶೀಘ್ರ ಸರಿಪಡಿಸುವೆ. ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡಿಕೊಟ್ಟರೆ ಅಂತ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ.
    ಸೋಮನಗೌಡ ಪಾಟೀಲ(ಸಾಸನೂರ) ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts