More

    ಅಯೋಧ್ಯೆಯಲ್ಲಿ 5 ಸ್ಟಾರ್​ ಹೋಟೆಲ್​ ನಿರ್ಮಾಣ ಘೋಷಣೆ: ಈ ಕಂಪನಿಯ ಷೇರು ಬೆಲೆ ದುಪ್ಪಟ್ಟಾಗಬಹುದು ಎಂಬುದು ಲೆಕ್ಕಾಚಾರ

    ಮುಂಬೈ: ಈಸಿ ಟ್ರಿಪ್ ಪ್ಲಾನರ್ಸ್ ಲಿಮಿಟೆಡ್ (Easy Trip Planners Ltd.) ಕಂಪನಿಯ ಪ್ರತಿ ಷೇರಿನ ಬೆಲೆ ಈಗ 48.90 ರೂಪಾಯಿ ಇದೆ. ಮುಂಬರುವ ದಿನಗಳಲ್ಲಿ ಈ ಷೇರಿನ ಬೆಲೆ ಸಾಕಷ್ಟು ಹೆಚ್ಚಳವಾಗಬಹುದು. ಮುಂಬರುವ ದಿನಗಳಲ್ಲಿ ದುಪ್ಟಟ್ಟಾಗಬಹುದು ಎಂಬುದು ಕೆಲ ಮಾರುಕಟ್ಟೆ ವಿಶ್ಲೇಷಕರ ಲೆಕ್ಕಾಚಾರ.

    ಏಕೆಂದರೆ, ಈ ಕಂಪನಿಯು ಅಯೋಧ್ಯೆಯಲ್ಲಿ 5 ಸ್ಟಾರ್ ಹೋಟೆಲ್​ ನಿರ್ಮಾಣಕ್ಕೆ ಮುಂದಾಗಿದೆ.ಅಯೋಧ್ಯೆಯಲ್ಲಿ 5 ಸ್ಟಾರ್ ಹೋಟೆಲ್ ನಿರ್ಮಿಸಲು ಮಂಡಳಿಯಿಂದ ಅನುಮತಿ ಪಡೆದಿದೆ ಎಂದು ಷೇರು ವಿನಿಮಯ ಕೇಂದ್ರಕ್ಕೆ ನೀಡಿದ ಘೋಷಣೆಯಲ್ಲಿ ತಿಳಿಸಿದೆ. ಈ ಹೋಟೆಲ್​ ನಿರ್ಮಾಣಕ್ಕೆ 100 ಕೋಟಿ ರೂಪಾಯಿ ಹೂಡಿಕೆ ಮಾಡುವ ನಿರೀಕ್ಷೆಯಿದೆ.

    ಈ ಕುರಿತಂತೆ ತನ್ನ ಮಂಡಳಿಯ ಸಭೆಯು ಫೆಬ್ರವರಿ 11, 2024 ರಂದು ನಡೆದಿದೆ ಎಂದು ಷೇರು ವಿನಿಮಯ ಕೇಂದ್ರಕ್ಕೆ ಕಂಪನಿ ತಿಳಿಸಿದೆ. ಈ ಸಭೆಯಲ್ಲಿ ಅಯೋಧ್ಯೆಯಲ್ಲಿ ಪಂಚತಾರಾ ಹೋಟೆಲ್ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.

    ಈ ಹೋಟೆಲನ್ನು ಶ್ರೀರಾಮ ಜನ್ಮಭೂಮಿಯಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿ ನಿರ್ಮಿಸಲು ಕಂಪನಿ ಉದ್ದೇಶಿಸಿದೆ. ಇದಕ್ಕೆ ಕಂಪನಿ ಮಂಡಳಿಯಿಂದ ಅನುಮೋದನೆ ಸಿಕ್ಕಿದೆ. ಸಂಸ್ಥೆಯಿಂದ ಇದಕ್ಕಾಗಿ 100 ಕೋಟಿ ರೂಪಾಯಿಯ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ.

    ಈ ಕಂಪನಿಯ ಷೇರಿನ 52 ವಾರದ ಗರಿಷ್ಠ ಬೆಲೆ 54 ರೂಪಾಯಿ ಇದೆ. ಕಳೆದ ಆರು ತಿಂಗಳಲ್ಲಿ, ಕಂಪನಿಯ ಷೇರುಗಳ ಬೆಲೆ 20 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಕಂಪನಿಯ ಷೇರಿನ 52 ವಾರದ ಕನಿಷ್ಠ ಬೆಲೆ 37 ರೂಪಾಯಿ ಇದೆ. ಕಂಪನಿಯ ಮಾರುಕಟ್ಟೆ ಬಂಡವಾಳೀಕರಣವು ಸುಮಾರು 8639 ಕೋಟಿ ರೂ. ಇದೆ.

    ಈಸಿ ಟ್ರಿಪ್ ಪ್ಲಾನರ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು 2008 ರಲ್ಲಿ ಸ್ಥಾಪಿಸಲಾಯಿತು. ಇದು ಈಸ್ ಮೈ ಟ್ರಿಪ್ ಪೋರ್ಟಲ್, ಈಸ್ ಮೈ ಟ್ರಿಪ್ ಆಪ್ ಅಥವಾ ಇನ್-ಹೌಸ್ ಕಾಲ್ ಸೆಂಟರ್ ಮೂಲಕ ಪ್ರವಾಸೋದ್ಯಮ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಮೀಸಲಾತಿ ಮತ್ತು ಬುಕಿಂಗ್ ಸೇವೆಗಳನ್ನು ನೀಡುತ್ತದೆ.

    ಇದು ಅಗ್ಗದ ವಿಮಾನಗಳ ಹೋಟೆಲ್‌ಗಳು, ಬಸ್ ಟಿಕೆಟ್‌ಗಳು, ಹೋಟೆಲ್ ಕಾಯ್ದಿರಿಸುವಿಕೆಗಳು ಮತ್ತು ರಜಾದಿನದ ಪ್ಯಾಕೇಜ್‌ಗಳನ್ನು ನೀಡುತ್ತದೆ. ಇದರ ಪ್ರಧಾನ ಕಚೇರಿಯು ದೆಹಲಿಯಲ್ಲಿದೆ.

    2 ಕೋಟಿಗೂ ಹೆಚ್ಚು ಷೇರು ಮಾರಾಟಕ್ಕೆ: 3 ತಿಂಗಳಲ್ಲಿ 3 ಪಟ್ಟು ಲಾಭ ನೀಡಿದ ಕಂಪನಿಯ ಷೇರು ಖರೀದಿಸುವವರೇ ಇಲ್ಲದಂತಾಗಿರುವುದು ಏಕೆ?

    ಪರಾದೀಪ್ ಫಾಸ್ಫೇಟ್ಸ್​ನಲ್ಲಿ ವಿಲೀನವಾಗಲಿದೆ ಮಂಗಳೂರು ಕೆಮಿಕಲ್: ರಸಗೊಬ್ಬರ ಕಂಪನಿ ಷೇರು ಖರೀದಿಸಿದರೆ ಲಾಭ ಎನ್ನುತ್ತಿದೆ ಬ್ರೋಕರೇಜ್​ ಸಂಸ್ಥೆ

    ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ: ಮಿಡ್​ ಕ್ಯಾಪ್​; ಸ್ಮಾಲ್​ ಕ್ಯಾಪ್​ ಸೂಚ್ಯಂಕಗಳಲ್ಲಿ ರಕ್ತಪಾತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts