More

    2 ಕೋಟಿಗೂ ಹೆಚ್ಚು ಷೇರು ಮಾರಾಟಕ್ಕೆ: 3 ತಿಂಗಳಲ್ಲಿ 3 ಪಟ್ಟು ಲಾಭ ನೀಡಿದ ಕಂಪನಿಯ ಷೇರು ಖರೀದಿಸುವವರೇ ಇಲ್ಲದಂತಾಗಿರುವುದು ಏಕೆ?

    ಮುಂಬೈ: ಇಂಡಿಯನ್ ರಿನ್ಯೂವಬಲ್ ಎನರ್ಜಿ ಡೆವಲೆಪ್​ಮೆಂಟ್​ ಏಜೆನ್ಸಿ ಲಿಮಿಟೆಡ್ (ಇರೇಡಾ- ಐಆರ್‌ಇಡಿಎ- Indian Renewable Energy Development Agency Ltd.) ಷೇರುಗಳು ಕೆಲ ದಿನಗಳಿಂದ ದೊಡ್ಡ ಪ್ರಮಾಣದಲ್ಲಿ ಕುಸಿತ ಕಾಣುತ್ತಿವೆ. ಒಂದೇ ವಾರದಲ್ಲಿ ಶೇ. 16ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಷೇರಿನ ಬೆಲೆ ಇಳಿಕೆಯಾಗಿದೆ. ಅಚ್ಚರಿಯ ಸಂಗತಿ ಎಂದರೆ, ಕಳೆದೊಂದು ತಿಂಗಳಲ್ಲಿ ಈ ಷೇರಿನ ಬೆಲೆ ಶೇಕಡಾ 60ರಷ್ಟು ಹೆಚ್ಚಳ ಕಂಡಿತ್ತು.

    ಇದಕ್ಕೂ ಮೊದಲು ಸ್ಟಾಕ್ ಸತತವಾಗಿ 52 ವಾರಗಳ ಗರಿಷ್ಠ ಬೆಲೆಯನ್ನು ತಲುಪಿತ್ತು. ಈಗ 2 ಕೋಟಿಗೂ ಹೆಚ್ಚು ಷೇರುಗಳನ್ನು ಮಾರಾಟಕ್ಕೆ ಇಡಲಾಗಿದೆ. ಕಳೆದ ಶುಕ್ರವಾರದ ವಹಿವಾಟಿನಲ್ಲಿ ಈ ಷೇರುಗಳ ಬೆಲೆ ಶೇ. 5ರ ಲೋವರ್​ ಸರ್ಕ್ಯೂಟ್​ (ಒಂದು ದಿನಕ್ಕೆ ನಿಗದಿಪಡಿಸಿದ ಗರಿಷ್ಠ ಬೆಲೆ ಕುಸಿತ) ತಲುಪಿತ್ತು. ಸೋಮವಾರ ಕೂಡ ಮತ್ತೆ ಶೇ. 5ರ ಲೋವರ್​ ಸರ್ಕ್ಯೂಟ್​ ಹಿಟ್​ ಆಗುವ ಮೂಲಕ 170.65 ರೂಪಾಯಿಗೆ ತಲುಪಿವೆ. ಕಳೆದ ಮೂರು ದಿನಗಳಲ್ಲಿ ಇದರ ಷೇರುಗಳು ಅಂದಾಜು 18 ಪ್ರತಿಶತದಷ್ಟು ಕುಸಿದಿದೆ. ಈ ಷೇರುಗಳ 52 ವಾರಗಳ ಗರಿಷ್ಠ ಬೆಲೆ 214.80 ರೂಪಾಯಿ ಆಗಿದ್ದರೆ ಕನಿಷ್ಠ ಬೆಲೆ 50 ರೂಪಾಯಿ ಇದೆ.

    ಕಂಪನಿಯು ಕಳೆದ ವರ್ಷ ನವೆಂಬರ್‌ನಲ್ಲಿ ತನ್ನ ಐಪಿಒ ಮೂಲಕ ಸಾರ್ವಜನಿಕವಾಗಿ ಷೇರುಗಳ ವಿತರಣೆ ಮಾಡಿತು. ಈ ಈ ಐಪಿಒ ಬೆಲೆ ಪ್ರತಿ ಷೇರಿಗೆ 30 ರಿಂದ 32 ರೂಪಾಯಿ ಇತ್ತು. ನವೆಂಬರ್ 29 ರಂದು, ಈ ಕಂಪನಿಯ ಷೇರುಗಳ ಬೆಲೆ 60 ರೂ. ಇತ್ತು. ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಹೂಡಿಕೆದಾರರಿಗೆ ಮೂರು ಪಟ್ಟು ಲಾಭವನ್ನು ಈ ಷೇರುಗಳು ನೀಡಿವೆ. 60ರ ಆರಂಭಿಕ ಬೆಲೆಯಿಂದ ಕೇವಲ ಎರಡು ತಿಂಗಳಲ್ಲಿ 214 ರೂಪಾಯಿ ಬೆಲೆಯನ್ನು ಈ ಷೇರುಗಳು ತಲುಪಿ, ಅಂದಾಜು 250 ಪ್ರತಿಶತದಷ್ಟು ಆದಾಯವನ್ನು ನೀಡಿದ್ದವು.

    ಲಾಭ ಗಳಿಕೆಯ ಉದ್ದೇಶದಿಂದ ಸಾಕಷ್ಟು ಹೂಡಿಕೆದಾರರು ಈಗ ತಮ್ಮ ಷೇರುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ, ಆದರೆ, ಯಾವುದೇ ಖರೀದಿದಾರರು ಸಿಗುತ್ತಿಲ್ಲ. ಹೀಗಾಗಿ, ಎರಡು ಕೋಟಿಗೂ ಹೆಚ್ಚು ಷೇರುಗಳು ಮಾರಾಟಕ್ಕೆ ಕಾಯುತ್ತಿವೆ.

    ಈಗ 200 ರೂ. ಆಸುಪಾಸಿನ ಬೆಲೆಯಲ್ಲಿ ಷೇರುಗಳನ್ನು ಖರೀದಿಸಿದರೆ ಹೂಡಿಕೆದಾರರು ಗಮನಾರ್ಹ ನಷ್ಟ ಅನುಭವಿಸಬೇಕಾಗಬಹುದು.

    ಭಾರತ ಸರ್ಕಾರದ ಕಂಪನಿಯಾಗಿರುವ ಐಆರ್‌ಇಡಿಎ ಅಗ್ರ ಐದು ವಿದ್ಯುತ್ ವಲಯದ ಹಣಕಾಸು ಒದಗಿಸುವ ಸಂಸ್ಥೆಯಾಗಿದೆ. ನವೀಕರಿಸಬಹುದಾದ ಇಂಧನ ಹಣಕಾಸು ಕ್ಷೇತ್ರದಲ್ಲಿ ಪರಿಣತಿ ಹೊಂದಿದೆ.
    IREDA ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ಮೇಲ್ವಿಚಾರಣೆಯಡಿಯಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ, ಇದು ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಹಣಕಾಸು ಒದಗಿಸಲು ನವೀನ ಮಾರ್ಗಗಳು, ಹಾಗೆಯೇ ಸಂರಕ್ಷಣೆ ಮತ್ತು ಶಕ್ತಿ ದಕ್ಷತೆಯ ಉಪಕ್ರಮಗಳಿಗೆ ಪ್ರವರ್ತಕವಾಗಿದೆ.

    ಸೌರ ಶಕ್ತಿ, ಪವನ ಶಕ್ತಿ, ಬಯೋಮಾಸ್ ಪವರ್ ಮತ್ತು ಜಲವಿದ್ಯುತ್ ಉತ್ಪಾದನೆಯನ್ನು ಒಳಗೊಂಡಿರುವ ಸಾಲದ ಬಂಡವಾಳದೊಂದಿಗೆ ಭಾರತದ ಮೊದಲ ಮೀಸಲಾದ ಬ್ಯಾಂಕಿಂಗ್ ಅಲ್ಲದ ಹಸಿರು ಹಣಕಾಸು ಕಂಪನಿಯಾಗಿದೆ.

    ಪರಾದೀಪ್ ಫಾಸ್ಫೇಟ್ಸ್​ನಲ್ಲಿ ವಿಲೀನವಾಗಲಿದೆ ಮಂಗಳೂರು ಕೆಮಿಕಲ್: ರಸಗೊಬ್ಬರ ಕಂಪನಿ ಷೇರು ಖರೀದಿಸಿದರೆ ಲಾಭ ಎನ್ನುತ್ತಿದೆ ಬ್ರೋಕರೇಜ್​ ಸಂಸ್ಥೆ

    ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ: ಮಿಡ್​ ಕ್ಯಾಪ್​; ಸ್ಮಾಲ್​ ಕ್ಯಾಪ್​ ಸೂಚ್ಯಂಕಗಳಲ್ಲಿ ರಕ್ತಪಾತ

    ಸೋಮವಾರ 20% ಬಂಪರ್​ ಏರಿಕೆ ಕಂಡ ಷೇರುಗಳು: ಮಂಗಳವಾರ ಈ 5 ಸ್ಟಾಕ್​ಗಳಲ್ಲಿ ಲಾಭ ದೊರೆಯಲಿದೆ ಎನ್ನುತ್ತಾರೆ ತಜ್ಞರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts