More

    ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ: ಮಿಡ್​ ಕ್ಯಾಪ್​; ಸ್ಮಾಲ್​ ಕ್ಯಾಪ್​ ಸೂಚ್ಯಂಕಗಳಲ್ಲಿ ರಕ್ತಪಾತ

    ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿನ ಮಿಶ್ರ ಪ್ರವೃತ್ತಿಗಳ ನಡುವೆಯೇ ಹೂಡಿಕೆದಾರರು ಲೋಹ ಮತ್ತು ಬ್ಯಾಂಕಿಂಗ್ ಷೇರುಗಳನ್ನು ಲಾಭಕ್ಕಾಗಿ ಮಾರಾಟ ಮಾಡಿದ ಪರಿಣಮವಾಗಿ ಬೆಂಚ್‌ಮಾರ್ಕ್ ಸೂಚ್ಯಂಕ ಸೋಮವಾರ 523 ಅಂಕಗಳಷ್ಟು ಕುಸಿಯಿತು. ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 3.16 ರಷ್ಟು ಕುಸಿದರೆ; ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 2.62 ರಷ್ಟು ನಷ್ಟ ಅನುಭವಿಸಿತು. ಲಾರ್ಜ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.90 ರಷ್ಟು ಕಡಿಮೆಯಾದವು. ಅಂದರೆ, ಮಧ್ಯಮ ಗಾತ್ರದ ಮತ್ತು ಸಣ್ಣ ಗಾತ್ರದ ಕಂಪನಿಗಳ ಷೇರುಗಳ ಬೆಲೆಗಳು ಅಪಾರ ಪ್ರಮಾಣದಲ್ಲಿ ಕುಸಿತ ಕಂಡವು.

    30-ಷೇರುಗಳ ಬಿಎಸ್‌ಇ ಸೂಚ್ಯಂಕ 523 ಅಂಕಗಳು ಅಥವಾ 0.73 ಶೇಕಡಾ ಕಡಿಮೆಯಾಗಿ 71,072.49 ಕ್ಕೆ ಸ್ಥಿರವಾಯಿತು 22 ಷೇರುಗಳು ನಷ್ಟ ಕಂಡರೆ, ಎಂಟು ಷೇರುಗಳು ಲಾಭ ಮಾಡಿದವು.

    ರಿಲಯನ್ಸ್ ಇಂಡಸ್ಟ್ರೀಸ್, ಬೃಹತ್​ ಮೆಟಲ್ ಕಂಪನಿಗಳು ಮತ್ತು ಬ್ಯಾಂಕಿಂಗ್ ವಲಯದ ಷೇರುಗಳನ್ನು ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮಾರಾಟ ಮಾಡುವುದಕ್ಕೆ ಒತ್ತು ನೀಡಿದ್ದರಿಂದ ಇಂಟ್ರಾ-ಡೇ ವಹಿವಾಟಿನಲ್ಲಿ ಸೂಚ್ಯಂಕವು 70,922.57 ಕ್ಕೆ ತಲುಪಿತ್ತು.

    ನಿಫ್ಟಿ ಸೂಚ್ಯಂಕ ಕೂಡ 166.45 ಅಂಕಗಳು ಅಥವಾ ಶೇಕಡಾ 0.76 ರಷ್ಟು ಕಡಿಮೆಯಾಗಿ 21,616.05 ಕ್ಕೆ ಮುಟ್ಟಿತು. ಈ ಸೂಚ್ಯಂಕದ 50 ಷೇರುಗಳ ಪೈಕಿ, 34 ಷೇರುಗಳು ನಷ್ಟ ಕಂಡವು.

    ಟಾಟಾ ಸ್ಟೀಲ್ ಷೇರುಗಳ ಬೆಲೆ ಶೇ. 2.76 ರಷ್ಟು ಹೆಚ್ಚು ಕುಸಿತ ದಾಖಲಿಸಿತು. ಎನ್‌ಟಿಪಿಸಿ (ಶೇ. 2.72) ಮತ್ತು ಎಸ್‌ಬಿಐ (ಶೇ. 2.26) ಕೂಡ ಹಿನ್ನಡೆ ಅನುಭವಿಸಿದವು. ಖಾಸಗಿ ಬ್ಯಾಂಕ್‌ಗಳಾದ ಇಂಡಸ್‌ಇಂಡ್, ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಸಹ ಹಿನ್ನಡೆ ಕಂಡವು. ಇದಕ್ಕೆ ವ್ಯತಿರಿಕ್ತವಾಗಿ, ವಿಪ್ರೋ, ಎಚ್‌ಸಿಎಲ್ ಟೆಕ್, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ನೆಸ್ಲೆ ಸೇರಿ ಒಂಬತ್ತು ಪ್ರಮುಖ ಷೇರುಗಳು ಹೆಚ್ಚಳ ಕಂಡವು.

    ವಲಯವಾರು ಸೂಚ್ಯಂಕಗಳಲ್ಲಿ, ಯುಟಿಲಿಟಿಸ್ ವಲಯದ ಷೇರುಗಳು​ 3.60 ಪ್ರತಿಶತದಷ್ಟು ಕಡಿದಾದ ಕುಸಿತವನ್ನು ಕಂಡವು. ನಂತರ ರಿಯಾಲ್ಟಿ 3.01 ರಷ್ಟು ಕುಸಿದರೆ. ಇಂಧನ ಶೇಕಡಾ 2.90 ರಷ್ಟು ಕಡಿಮೆಯಾಗಿದೆ. ಕೈಗಾರಿಕೆಗಳ ವಲಯದ ಷೇರುಗಳು ಶೇಕಡಾ 2.92 ರಷ್ಟು ಕುಸಿದವು. ಲೋಹ ವಲಯದ ಷೇರುಗಳು ಶೇಕಡಾ 2.73 ರಷ್ಟು ಮತ್ತು ತೈಲ ಮತ್ತು ಅನಿಲ ವಲಯದ ಷೇರುಗಳು ಶೇಕಡಾ 2.56 ರಷ್ಟು ಹಿನ್ನಡೆ ಕಂಡವು.

    ವಿಶಾಲ ಮಾರುಕಟ್ಟೆಯಲ್ಲಿ, ಡಿಸೆಂಬರ್ ತ್ರೈಮಾಸಿಕದಲ್ಲಿ ಲಾಭದಲ್ಲಿ 19 ಶೇಕಡಾ ಕುಸಿತವನ್ನು ವರದಿ ಮಾಡಿದ ನಂತರ ಎನ್​ಎಚ್​ಪಿಸಿ ಷೇರುಗಳ ಬೆಲೆ ಶೇಕಡಾ 15.81 ರಷ್ಟು ಕುಸಿಯಿತು. ಮತ್ತೊಂದು ಪವರ್ ಪಿಎಸ್‌ಯು ಎಸ್‌ಜೆವಿಎನ್ ಶೇಕಡಾ 20 ರಷ್ಟು ಕುಸಿದು ಲೋವರ್​ ಸರ್ಕ್ಯೂಟ್​ ತಲುಪಿತು. ಪ್ರಮುಖ ಫೋರ್ಜಿಂಗ್ ತಯಾರಕ ಕಂಪನಿಯು ಭಾರತ್ ಫೋರ್ಜ್ ತನ್ನ ತ್ರೈಮಾಸಿಕ ಫಲಿತಾಂಶಗಳ ಪ್ರಕಟಣೆಯ ನಂತರ 14.04 ಶೇಕಡಾ ಕುಸಿದಿದೆ.

    ಏಷ್ಯಾದಲ್ಲಿ, ಟೋಕಿಯೊದ ನಿಕ್ಕಿ 225 ಶೇಕಡಾ 0.9 ರಷ್ಟು ಮತ್ತು ಚೀನಾದ ಶಾಂಘೈ ಕಾಂಪೋಸಿಟ್ ಶೇಕಡಾ 1.28 ರಷ್ಟು ಏರಿಕೆ ಕಂಡಿವೆ. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಶೇ.0.83ರಷ್ಟು ಕುಸಿದಿದೆ. ಐರೋಪ್ಯ ಮಾರುಕಟ್ಟೆಗಳ ಪೈಕಿ ಫ್ರಾನ್ಸ್‌ನ CAC 40 ಮತ್ತು ಜರ್ಮನಿಯ DAX ಏರಿಕೆಯೊಂದಿಗೆ ವ್ಯಾಪಾರ ಮಾಡುತ್ತಿದ್ದರೆ, ಲಂಡನ್‌ನ FTSE 100 ನಷ್ಟದೊಂದಿಗೆ ವಹಿವಾಟು ನಡೆಸುತ್ತಿದೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 141.95 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ. ಶುಕ್ರವಾರದಂದು ಸೂಚ್ಯಂಕವು 167.06 ಅಂಕ ಅಥವಾ 0.23 ರಷ್ಟು ಏರಿಕೆಯಾಗಿ 71,595.49 ಅಂಕಗಳಿಗೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 64.55 ಅಂಕ ಅಥವಾ 0.30 ರಷ್ಟು ಏರಿಕೆಯಾಗಿ 21,782.50 ಅಂಕಗಳಿಗೆ ತಲುಪಿತ್ತು.

    ವಿವಿಧ ಸೂಚ್ಯಂಕಗಳು:

    ಎಸ್​ ಆ್ಯಂಡ್​ ಪಿ ಬಿಎಸ್​ಇ ಮಿಡ್​ ಕ್ಯಾಪ್​: 38,531.14 (1,038.43 ಅಂಕ ಅಥವಾ 2.62% ಕುಸಿತ)
    ಎಸ್​ ಆ್ಯಂಡ್​ ಪಿ ಬಿಎಸ್​ಇ ಸ್ಮಾಲ್​ ಕ್ಯಾಪ್:​ 44,206.78 (1,443.52 ಅಂಕ ಅಥವಾ 3.16% ಕುಸಿತ)
    ನಿಫ್ಟಿ ಮಿಡ್​ ಕ್ಯಾಪ್​ ಫಿಫ್ಟಿ: 13579.30 (261.60 ಅಂಕ ಅಥವಾ 1.80% ಕುಸಿತ)
    ನಿಫ್ಟಿ ಸ್ಮಾಲ್​ ಕ್ಯಾಪ್​ ಫಿಫ್ಟಿ: 7274.15 (267.75 ಅಂಕ ಅಥವಾ 3.55 ಕುಸಿತ)

    ಸೋಮವಾರ 20% ಬಂಪರ್​ ಏರಿಕೆ ಕಂಡ ಷೇರುಗಳು: ಮಂಗಳವಾರ ಈ 5 ಸ್ಟಾಕ್​ಗಳಲ್ಲಿ ಲಾಭ ದೊರೆಯಲಿದೆ ಎನ್ನುತ್ತಾರೆ ತಜ್ಞರು

    ಷೇರುಗಳ ಬೆಲೆ ಒಂದೇ ವರ್ಷದಲ್ಲಿ 1,437.61 % ಏರಿಕೆ, ಸತತ 2 ದಿನ ಅಪ್ಪರ್​ ಸರ್ಕ್ಯೂಟ್​: ಬೋನಸ್​ ಸ್ಟಾಕ್​ ಬಹುಮಾನ ಸಿಗಲಿರುವ ಷೇರಿಗೆ ಭರ್ಜರಿ ಡಿಮ್ಯಾಂಡು…

    ಶಾರ್ಕ್ ಟ್ಯಾಂಕ್​ನ ನ್ಯಾಯಾಧೀಶ ಅಮನ್ ಗುಪ್ತಾ ಹೂಡಿಕೆಗೆ ಅದ್ಭುತ ಲಾಭ: ಎರಡೇ ವರ್ಷಗಳಲ್ಲಿ 20 ಲಕ್ಷವಾಯ್ತು 6 ಕೋಟಿ ರೂಪಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts