More

    ಅಣ್ಣೋ….. ಇನ್ನೊಂದು ಕ್ವಾರ್ಟರ್ ಕೊಡಣ್ಣಾ…..

    ರಾಮನಗರ: ಕಿಲೋಮೀಟರ್ ಉದ್ದದ ಸಾಲು, ಬಿಸಿಲ ಝಳ ತಾಳಲಾರದೆ ಸರತಿ ಸಾಲಿಗೆ ಚಪ್ಪಲಿ ಬಿಟ್ಟು ಕಾಯುತ್ತಾ ಕುಳಿತ ಜನ, ಬಾಗಿಲು ತೆರೆಯಲು ಸಾಕಷ್ಟು ಸಮಯವಿದ್ದರೂ ತಾವೇ ಮೊದಲಿಗರಾಗಬೇಕು ಎನ್ನುವ ಹಂಬಲದೊಂದಿಗೆ ಮುಂಜಾನೆಯಿಂದಲೇ ಸಾಲಿನಲ್ಲಿ ನಿಂತ ಪಾಗಲ್ ಪ್ರೇಮಿಗಳು… ಅಬ್ಬಾ ಎಂಥ ಅದ್ಭುತ ದೃಶ್ಯಗಳು. ಇವು ಕಂಡು ಬಂದಿದ್ದು, ಸುಮಾರು ಒಂದೂವರೆ ತಿಂಗಳ ನಂತರ ಆರಂಭಗೊಂಡ ಮದ್ಯದಂಗಡಿಗಳ ಎದುರು.

    ಹಸಿರು ವಲಯದಲ್ಲಿ ಗುರ್ತಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, 74 ವೈನ್ ಶಾಪ್‌ಗಳು ಮತ್ತು 14 ಎಂಎಸ್‌ಐಎಲ್ ಮಳಿಗೆಗಳಲ್ಲಿ ಸೋಮವಾರದಿಂದ ಮದ್ಯ ಮಾರಾಟ ಮಾಡಲಾಗುತ್ತಿದೆ. ಆದರೆ, ಬಹುತೇಕ ಯಾವುದೇ ಅಂಗಡಿಗಳಲ್ಲೂ ಖಾಲಿ ಎನ್ನುವ ಪದಕ್ಕೆ ಅರ್ಥವಿಲ್ಲದಂತಾಗಿದ್ದು, ಮದ್ಯ ಪ್ರಿಯರಿಂದ ತುಂಬಿ ತುಳುಕುತ್ತಿದ್ದವು.

    ಸಾಲು ಸಾಲು: ಮದ್ಯ ಸಿಗುವುದೋ ಇಲ್ಲವೋ ಎನ್ನುವ ಆತಂಕಕ್ಕೆ ಒಳಗಾಗಿದ್ದ ಪಾನ ಪ್ರಿಯರು ಮುಂಜಾನೆಯಿಂದಲೇ ತಮ್ಮ ಹತ್ತಿರದ ವೈಶ್‌ಶಾಪ್‌ಗಳ ಮುಂದೆ ಕಾಯುತ್ತಾ ಕುಳಿತಿದ್ದರು. ಬ್ಯಾರಿಕೇಡ್‌ಗಳನ್ನು ಹಾಕಿದ್ದ ಕಾರಣ, ಎಲ್ಲಿ ನಮಗೆ ಅವಕಾಶ ತಪ್ಪುತ್ತದೋ ಎಂಬ ಕಾರಣಕ್ಕೆ ಮೊದಲು ತಾವೇ ನಿಲ್ಲಬೇಕು ಎಂದು ಬಂದವರಿಗೇನು ಕಡಿಮೆ ಇಲ್ಲ. ಇದರಿಂದಾಗಿ ರಾಮನಗರದ ಬ್ರಿಟಿಷ್ ಲಿಕ್ಕರ್ ಮಳಿಗೆ ಸಮೀಪ ಸುಮಾರು ಒಂದು ಕಿ.ಮೀ.ಗೂ ಹೆಚ್ಚು ಉದ್ದದ ಸಾಲು ನಿರ್ಮಾಣವಾಗಿತ್ತು. ಇನ್ನು ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ಮಳಿಗೆಯೊಂದರ ಮುಂದೆ ಚಪ್ಪಲಿಯನ್ನು ಸರತಿ ಸಾಲಿನಲ್ಲಿ ಬಿಟ್ಟು ಜನ ತಮ್ಮ ಇರುವಿಕೆಯನ್ನು ಪ್ರದರ್ಶನ ಮಾಡಿದ್ದರು.

    ಬೇಕಾದಷ್ಟು ಮದ್ಯ: ಒಬ್ಬರಿಗೆ ಇಂತಿಷ್ಟೇ ಮದ್ಯ ನೀಡುತ್ತಾರೆ ಎನ್ನುವ ಸುದ್ದಿಯೂ ಪಾನಪ್ರಿಯರ ಚಿಂತೆಗೆ ಕಾರಣವಾಗಿತ್ತು. ಆದರೆ, ಬಹುತೇಕ ಎಲ್ಲ ಅಂಗಡಿಗಳಲ್ಲೂ ಗ್ರಾಹಕರು ಕೇಳಿದಷ್ಟು ಮದ್ಯ ನೀಡಲಾಗುತ್ತಿತ್ತು. ಹೆಚ್ಚು ಮದ್ಯ ನೀಡದ ಅಂಗಡಿಗಳಲ್ಲಿ ಅಣ್ಣೋ.. ಇನ್ನೊಂದು ಕ್ವಾರ್ಟರ್ ಕೊಡಣ್ಣಾ.. ಎಂದು ಗೋಗರೆಯುತ್ತಿದ್ದುದು ಕಂಡುಬಂತು.

    ಮರೀಚಿಕೆ: ಮದ್ಯ ಖರೀದಿ ಆತುರದಲ್ಲಿ ಬಹುತೇಕ ಕಡೆ ಸಾಮಾಜಿಕ ಅಂತರ ಎನ್ನುವುದು ಮರೀಚಿಕೆ ಯಾಗಿತ್ತು. ಪ್ರತಿ ಮದ್ಯದಂಗಡಿಗಳ ಬಳಿ ಅಬಕಾರಿ ಮತ್ತು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ ಅಂಗಡಿಗಳ ಬಳಿ ಬಂದಾಗಷ್ಟೇ ಕಾಣುತ್ತಿದ್ದ ಸಾಮಾಜಿಕ ಅಂತರ, ಸಾಲಿನಲ್ಲಿ ನಿಂತಾಗ ಕಾಣುತ್ತಿರಲಿಲ್ಲ. ಬಹುತೇಕರು ಮಾಸ್ಕ್ ಇಲ್ಲದೆ ಎಣ್ಣೆ ಖರೀದಿಗೆ ಬಂದಿದ್ದು ಸಹ ಕಂಡು ಬಂತು.

    ಬೇಕಾದಷ್ಟು ಮದ್ಯ: ಒಬ್ಬರಿಗೆ ಇಂತಿಷ್ಟೇ ಮದ್ಯ ನೀಡುತ್ತಾರೆ ಎನ್ನುವ ಸುದ್ದಿಯೂ ಪಾನಪ್ರಿಯರ ಚಿಂತೆಗೆ ಕಾರಣವಾಗಿತ್ತು. ಆದರೆ, ಬಹುತೇಕ ಎಲ್ಲ ಅಂಗಡಿಗಳಲ್ಲೂ ಗ್ರಾಹಕರು ಕೇಳಿದಷ್ಟು ಮದ್ಯವನ್ನು ನೀಡಲಾಗುತ್ತಿತ್ತು. ಹೆಚ್ಚು ಮದ್ಯ ನೀಡದ ಅಂಗಡಿಗಳಲ್ಲಿ ಅಣ್ಣೋ…. ಇನ್ನೊಂದು ಕ್ವಾರ್ಟರ್ ಕೊಡಣ್ಣಾ… ಎಂದು ಗೋಗರೆಯುವವರ ಸಂಖ್ಯೆಯೂ ಕಡಿಮೆಯಿರಲಿಲ್ಲ.

    ಮಾಸ್ಕ್ ಆದ ಕೈಚೀಲ: ಮದ್ಯ ಖರೀದಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿದ್ದರೆ ಮಾತ್ರ ಮದ್ಯ ನೀಡುತ್ತೇವೆ ಎಂದು ಮಾರಾಟಗಾರರು ತಿಳಿಸಿದ್ದರಿಂದ, ವ್ಯಕ್ತಿಯೊಬ್ಬ ಮಾಸ್ಕ್ ಇಲ್ಲದೆ ಮದ್ಯ ಕೊಂಡೊಯ್ಯಲು ತಂದಿದ್ದ ಕೈಚೀಲವನ್ನೇ ಮಾಸ್ಕ್ ಮಾಡಿಕೊಂಡ ದೃಶ್ಯ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದ ಖಾಸಗಿ ವೈನ್ ಸ್ಟೋರ್ ಬಳಿ ಕಂಡುಬಂತು.

    ಸರದಿ ಸಾಲಿನಲ್ಲಿ ಚಪ್ಪಲಿ…: ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ನೇತ್ರ ವೈನ್ಸ್ ಬಳಿ ಸಾಮಾಜಿಕ ಅಂತರಕ್ಕಾಗಿ ಹಾಕಿದ್ದ ವೃತ್ತಗಳಲ್ಲಿ ಗ್ರಾಹಕರು ಚಪ್ಪಲಿಗಳನ್ನು ಇಟ್ಟು ಜಾಗ ಕಾಯ್ದಿರಿಸಿಕೊಂಡಿದ್ದು ವಿಶೇಷವಾಗಿತ್ತು. ಅಂಗಡಿ ಬಾಗಿಲು ತೆರೆಯುವುದು ಕೊಂಚ ವಿಳಂಬವಾದ ಕಾರಣ ಬಿಸಿಲಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಅಂಗಡಿಗಳ ಮುಂದೆ ಹಾಕಿದ್ದ ಗುರುತುಗಳ ಬಳಿ ಸರದಿ ಸಾಲಿನಲ್ಲಿ ತಮ್ಮ ಚಪ್ಪಲಿಗಳನ್ನು ಬಿಟ್ಟು, ನೆರಳಿನಲ್ಲಿ ಕಾಯುತ್ತ ಕುಳಿತ್ತಿದ್ದರು. ಅಂಗಡಿ ಬಾಗಿಲು ತೆರೆಯುತ್ತಲೆ ತಮ್ಮ ಜಾಗಗಳನ್ನು ಆಕ್ರಮಿಸಿಕೊಂಡು ಖರೀದಿಯಲ್ಲಿ ತೊಡಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts