More

    12 ಸಲ ಹಿಮಾಲಯ ಚಾರಣ ಕೈಗೊಂಡಿದ್ದ ಮೈಸೂರಿನ ಅನ್ನಪೂರ್ಣ ಇನ್ನಿಲ್ಲ

    ಮೈಸೂರು: ಹನ್ನೆರಡು ಬಾರಿ ಹಿಮಾಲಯ ಚಾರಣ ಮಾಡಿದ್ದ ಅನ್ನಪೂರ್ಣ ಕುರುವಿನಕೊಪ್ಪ (69) ಭಾನುವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಹಿಮಾಲಯದ 17,700 ಅಡಿ ಎತ್ತರದಲ್ಲಿ ಧ್ವಜ ಹಾರಿಸಿದ್ದ ಅನ್ನಪೂರ್ಣ, ಮಹಾ ಪ್ರಪಾತ ಎನಿಸಿದ ನೈನಿತಾಲ್, ಡಾಲ್ ಹೌಸಿ, ಮಸ್ಸೂರಿಯಲ್ಲಿ ಚಾರಣ ಮಾಡಿ ಬಂದವರು. ಮೌಂಟ್ ಎವರೆಸ್ಟ್‌ ಬೇಸ್ ಕ್ಯಾಂಪ್‌ಗೂ ಹೋಗಿ ಬಂದಿದ್ದರು. ನೇಪಾಳದ ಅನ್ನಪೂರ್ಣ ಪರ್ವತಗಳ ಶ್ರೇಣಿಗೆ ಒಂದು ತಿಂಗಳ ಟ್ರೆಕಿಂಗ್ ಕೈಗೊಂಡಿದ್ದರು.

    ಇದನ್ನೂ ಓದಿ: ಗುರುಪೂರ್ಣಿಮೆ ಶುಭಾಶಯ ಕೋರಿದ ಪ್ರಧಾನಿ ಮೋದಿ

    ಅಂತಾರಾಷ್ಟ್ರೀಯ ಮ್ಯಾರಥಾನ್‌ನಲ್ಲಿ ಭಾಗವಹಿಸಿ, ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದರು. ರಾಜ್ಯಮಟ್ಟದ ಟ್ರ್ರೆಕಿಂಗ್‌ನಲ್ಲಿ ನಾಯಕತ್ವ ವಹಿಸಿದ ಪ್ರಥಮ ಮಹಿಳೆ ಇವರು. ಮೂರು ಬಾರಿ ಅಮರನಾಥ ಯಾತ್ರೆ, ನಾಲ್ಕು ಬಾರಿ ವೈಷ್ಣೋದೇವಿ ಯಾತ್ರೆ ಕೈಗೊಂಡು ಶಿಬಿರದ ನಾಯಕತ್ವ ವಹಿಸಿದ್ದರು.

    ಇವರು ಹಿರಿಯ ಪತ್ರಿಕೋದ್ಯಮಿ ದಿ. ರಾಜಶೇಖರ ಕೋಟಿ ಅವರ ಕಿರಿಯ ಸಹೋದರಿ. ಧಾರವಾಡ ಜಿಲ್ಲೆಯ ಹುಯಿಲಗೋಳ ಕಾಶಪ್ಪ ಕೋಟಿ ಮತ್ತು ಬಸಮ್ಮ ದಂಪತಿಯ ಪುತ್ರಿಯಾದ ಇವರಿಗೆ ಪತಿ, ಇಬ್ಬರು ಪುತ್ರರು, ಮೊಮ್ಮಕ್ಕಳು ಇದ್ದಾರೆ.

    ಬೇಕಿತ್ತಾ ಚೀನಾ ಇದೆಲ್ಲಾ? ಹೀರೋ ಸೈಕಲ್‌ನಿಂದ ಭಾರಿ ಗುದ್ದು- ಎಂ.ಡಿ.ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts