More

    ಬೇಕಿತ್ತಾ ಚೀನಾ ಇದೆಲ್ಲಾ? ಹೀರೋ ಸೈಕಲ್‌ನಿಂದ ಭಾರಿ ಗುದ್ದು- ಎಂ.ಡಿ.ಹೇಳಿದ್ದೇನು?

    ನವದೆಹಲಿ: ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವ ರೀತಿ ಚೀನಾದ ಸ್ಥಿತಿ ಈಗಾಗಿದೆ. ಭಾರತದ ಜತೆ ಲಕ್ಷಾಂತರ ಕೋಟಿ ರೂಪಾಯಿಗಳ ವ್ಯವಹಾರ ಹೊಂದಿರುವ ಚೀನಾ ಗಡಿ ಸಂಘರ್ಷಕ್ಕೆ ಇಳಿದು ಇದೀಗ ತನ್ನ ಒಂದೊಂದೇ ವ್ಯವಹಾರಕ್ಕೆ ಗುದ್ದು ತಿನ್ನುತ್ತಿದೆ.

    ಇದಾಗಲೇ ಆ್ಯಪ್‌ ರದ್ದು ಸೇರಿದಂತೆ ಹಲವಾರು ಕಂಪನಿಗಳು ಚೀನಾದ ಜತೆಗಿನ ತಮ್ಮ ವ್ಯವಹಾರವನ್ನು ಸಮಾಪ್ತಿಗೊಳಿಸಿರುವ ಬೆನ್ನಲ್ಲೇ ಇದೀಗ ಬೈಸಿಕಲ್ ತಯಾರಕ ಹೀರೋ ಸೈಕಲ್ ಚೀನಾದ ಕಂಪನಿಗಳೊಂದಿನ 900 ಕೋಟಿ ರೂ.ಗಳ ವ್ಯವಹಾರವನ್ನು ರದ್ದುಗೊಳಿಸಿದೆ.

    ಹರಿಯಾಣದ ಡೆಹ್ರಾಡೂನ್‌ನಲ್ಲಿ ಹೀರೋ ಸೈಕಲ್‌ ಕಂಪನಿ ಇದೆ. ಇದರ ಜಪಾನ್‌ ಕಂಪನಿಯಾಗಿರುವ ಹೋಂಡಾ ಜತೆ ಸಹಯೋಗದಲ್ಲಿ ಇದೆ. ಆದರೆ ತನ್ನ ಸೈಕಲ್‌ಗೆ ಬೇಕಾಗಿರುವ ಅನೇಕ ಬಿಡಿಭಾಗಗಳಿಗೆ ಚೀನಾವನ್ನು ಅವಲಂಬಿಸಿತ್ತು. ಆದರೆ ಇದೀಗ 900 ಕೋಟಿ ರೂಪಾಯಿಗಳಿಗೆ ನೀಡಿರುವ ಒಪ್ಪಂದವನ್ನು ಹಿಂದಕ್ಕೆ ಪಡೆದಿದೆ. ಮುಂಬರುವ 3 ತಿಂಗಳಲ್ಲಿ ಚೀನಾದೊಂದಿಗೆ 900 ಕೋಟಿ ವ್ಯವಹಾರ ಮಾಡಿಕೊಂಡಿತ್ತು.

    ಇದನ್ನೂ ಓದಿ: ಪೆಟ್ಟು ತಿಂದರೂ ಸುಮ್ಮನಾಗದ ಚೀನಾ, ಉತ್ತರಾಖಂಡ, ಹಿಮಾಚಲಕ್ಕೂ ವ್ಯಾಪಿಸಿದ ಡ್ರ್ಯಾಗನ್ ಕಬಂಧಬಾಹು

    ಪಂಜಾಬ್‌ನ ಲುಧಿಯಾನದಲ್ಲಿ ಅನೇಕ ಸಣ್ಣ ಕಂಪನಿಗಳು ಬೈಸಿಕಲ್ ಭಾಗಗಳನ್ನು ತಯಾರಿಸುತ್ತಿವೆ, ಅವರ ಸಹಾಯಕ್ಕಾಗಿ ಹೀರೋ ಸೈಕಲ್ ಈಗ ಮುಂದೆ ಬಂದಿದೆ. ಹೀರೋ ಸೈಕಲ್‌ಗಳ ಕಂಪನಿಯು ಈಗ ತಮ್ಮೊಂದಿಗೆ ವಿಲೀನಗೊಳ್ಳಲು ಸಣ್ಣ ಕಂಪನಿಗಳಿಗೆ ಆಫರ್ ನೀಡುತ್ತಿದೆ.

    ಬೈಕಾಟ್‌ ಚೀನಾದ ಭಾಗವಾಗಿ ಈ ಒಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀರೋ ಸೈಕಲ್ ಈಗ ತನ್ನ ಪ್ಲಾಂಟ್ ಅನ್ನು ಜರ್ಮನಿಯಲ್ಲಿ ಸ್ಥಾಪಿಸಲಿದೆ. ಈ ಸ್ಥಾವರದಿಂದ ಹೀರೋನ ಸೈಕಲ್‌ಗಳನ್ನು ಯುರೋಪಿನಾದ್ಯಂತ ಸರಬರಾಜು ಮಾಡಲಾಗುತ್ತದೆ. ಈ ಹಿಂದೆ ಬೈಸಿಕಲ್ ಬೇಡಿಕೆ ಹೆಚ್ಚಾಗಿದೆ ಮತ್ತು ಹೀರೋ ಸೈಕಲ್‌ನಿಂದ ಅದರ ಸಾಮರ್ಥ್ಯವನ್ನು ಕೂಡ ಹೆಚ್ಚಿಸಲಾಗಿದೆ ಎಂದು ಹೀರೋ ಸೈಕಲ್ಸ್ ಎಂಡಿ ಮತ್ತು ನಿರ್ದೇಶಕ ಪಂಕಜ್ ಮುಂಜಾಲ್ ಹೇಳಿದ್ದಾರೆ. (ಏಜೆನ್ಸೀಸ್‌)

    ವಿಡಿಯೋದಲ್ಲಿ ದಾಖಲಾಯ್ತು ಕೋತಿ ರಹಸ್ಯ… ಮಾಲ್‌ಗಳಲ್ಲಿ ತೆಂಗಿನಕಾಯಿ ಬಹಿಷ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts