More

    ವ್ಯವಸಾಯ ಮಾಡುತ್ತಿರುವವರು ಯಾರೂ ಕಾಂಗ್ರೆಸ್, ಜೆಡಿಎಸ್​ಗೆ ಮತ ನೀಡಬೇಡಿ; ಅಣ್ಣಾಮಲೈ

    ಕೋಲಾರ: ರಾಜ್ಯದ ಜನತೆ 2018ರಲ್ಲಿ ಸಿದ್ದರಾಮಯ್ಯ ಅವರು ನಮಗೆ ಬೇಡ. ಯಡಿಯೂರಪ್ಪ ಅವರು ಬೇಕು ಎಂದು ತೀರ್ಮಾನ ಮಾಡಿದ್ರು. ಅದಕ್ಕಾಗಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಕೊಟ್ಟಿದ್ದರು. ಆದರೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅಸಹಜ ಹೊಂದಾಣಿಕೆ ಮಾಡಿಕೊಂಡರು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ಇದನ್ನೂ ಓದಿ: ದ್ವೇಷ ರಾಜಕಾರಣದಿಂದ ಮುಸ್ಲಿಮರಿಗಿದ್ದ ಮೀಸಲಾತಿ ತೆಗೆದಿದ್ದಾರೆ; ಸಿದ್ದರಾಮಯ್ಯ ಆರೋಪ

    ಕೆಜಿಎಫ್​ನಲ್ಲಿ ನಡೆಯುತ್ತಿರುವ ಯುವ ಸಮಾವೇಶದಲ್ಲಿ ಅಣ್ಣಾಮಲೈ ಮಾತನಾಡುತ್ತಾ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಹೊಂದಾಣಿಕೆ ಸರ್ಕಾರದ ಆಡಳಿತಾವಧಿಯಲ್ಲಿ ಕರೊನಾ ಸಾಂಕ್ರಾಮಿಕ ರೋಗ ಎಲ್ಲೆಡೆ ಹಬ್ಬಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿಗೆ ಬಂದು ಬೆಂಬಲ ನೀಡಿದರು. ಕರೊನಾ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದ್ದರಿಂದಾಗಿ ದೇಶದಲ್ಲಿ ಯಡಿಯೂರಪ್ಪ ಅವರ ಸರ್ಕಾರ ಬೆಸ್ಟ್ ಮ್ಯಾನೇಜ್ ದಿ ಸ್ಟೇಟ್ ಆಗಿ ಹೆಸರು ಮಾಡಿತು ಎಂದು ಹೇಳಿದರು.

    ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಕಿಸಾನ್ ಸಮ್ಮಾನ್ ಯೋಜನೆಯಡಿ 17 ಜನರ ರೈತರ ಹೆಸರನ್ನು ಮಾತ್ರ ಮೋದಿ ಅವರಿಗೆ ಕಳಿಸಿದ್ದರು. ಆದರೆ ಯಡಿಯೂರಪ್ಪ ಅವರು ಸಿಎಂ ಆದಾಗ 45 ಲಕ್ಷ ರೈತರ ಹೆಸರನ್ನು ಪ್ರಧಾನಿ ಮೋದಿ ಅವರಿಗೆ ಕಳಿಸಿದ್ದಾರೆ. ಇಲ್ಲಿ ಯಾರು ವ್ಯವಸಾಯ ಮಾಡುತ್ತಿದ್ದಿರೋ ಅವರು ಒಂದು ಮತವೂ ಸಹ ಕಾಂಗ್ರೆಸ್, ಜೆಡಿಎಸ್​ಗೆ ಹಾಕಬಾರದು. ಬಿಜೆಪಿಗೆ ಮತ ಹಾಕಬೇಕು‌ ಎಂದು ಹೇಳಿದರು. ಇದನ್ನೂ ಓದಿ: ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರು 4% ಮೀಸಲಾತಿ ಪಡೆದುಕೊಂಡಿದ್ದರು! ಪ್ರತಾಪ್ ಸಿಂಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts