More

    ಶ್ರೇಯಸ್ ಅಯ್ಯರ್ ಬದಲಿಗೆ ಕರ್ನಾಟಕದ ಆಟಗಾರನಿಗೆ ಮಣೆ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್

    ಬೆಂಗಳೂರು: ಕರ್ನಾಟಕದ ಆಲ್ರೌಂಡರ್ ಅನಿರುದ್ಧ ಜೋಶಿ, ಶ್ರೇಯಸ್ ಅಯ್ಯರ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಿಕೊಳ್ಳಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಡೆಲ್ಲಿ ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಲೀಗ್‌ನಿಂದ ಹೊರಬಿದ್ದಿದ್ದರು. ಇದರೊಂದಿಗೆ ಲೀಗ್‌ನಲ್ಲಿ ಆಡುತ್ತಿರುವ ಕನ್ನಡಿಗರ ಸಂಖ್ಯೆ 14ಕ್ಕೇರಿದಂತಾಗಿದೆ. ಕೋವಿಡ್-19 ಪಾಸಿಟಿವ್‌ನಿಂದ ಬಳಲುತ್ತಿರುವ ಆಲ್ರೌಂಡರ್ ಅಕ್ಷರ್ ಪಟೇಲ್ ಗುಣಮುಖರಾಗುವವರೆಗೂ ಬದಲಿಗೆ ಶ್ಯಾಮ್ಸ್ ಮುಲಾನಿ ಡೆಲ್ಲಿ ತಂಡದ ಪರ ಆಡಲಿದ್ದಾರೆ.

    ಇದನ್ನೂ ಓದಿ: ಕ್ರಿಕೆಟ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಗೆ ಬಿಟ್ ಕಾಯಿನ್ ಹೊಸ ಅಸ್ತ್ರ..

    ಅಕ್ಷರ್ ಪಟೇಲ್ ಗುಣಮುಖರಾಗಿ ಬಯೋಬಬಲ್‌ಗೆ ಎಂಟ್ರಿ ಕೊಟ್ಟರೆ ಶ್ಯಾಮ್ಸ್ ಮುಲಾನಿ ತಂಡ ತ್ಯಜಿಸಲಿದ್ದಾರೆ. ಅಲ್ಲದೆ, ಐಪಿಎಲ್‌ನ ಇತರ ತಂಡಗಳಲ್ಲೂ ಅವರು ಆಡುವಂತಿಲ್ಲ. ಐಪಿಎಲ್ 6.1 (ಸಿ) ನಿಯಮದಡಿ ಶ್ಯಾಮ್ಸ್‌ಗೆ ಅವಕಾಶ ಕಲ್ಪಿಸಲಾಗಿದೆ. ಮುಂಬೈ ಮೂಲದ ಮುಲಾನಿ ಇದುವರೆಗೂ 10 ಪ್ರಥಮ ದರ್ಜೆ, 30 ಲಿಸ್ಟ್ ಎ ಹಾಗ 25 ಟಿ20 ಪಂದ್ಯಗಳನ್ನಾಡಿದ್ದಾರೆ. ಗದಗ ಮೂಲದ ಅನಿರುದ್ಧ ಜೋಶಿಗೆ ಇದು ಮೂರನೇ ಐಪಿಎಲ್ ತಂಡವಾಗಿದೆ. ಇದಕ್ಕೂ ಮೊದಲು ಆರ್‌ಸಿಬಿ ತಂಡದಲ್ಲಿದ್ದ ಜೋಶಿ, ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದರು. ಇದುವರೆಗೂ 17 ಲಿಸ್ಟ್ ಎ ಹಾಗೂ 22 ಟಿ20 ಪಂದ್ಯಗಳಿಂದ ಕ್ರಮವಾಗಿ 211 ಹಾಗೂ 420 ರನ್ ಪೇರಿಸಿದ್ದು, ತಲಾ 6 ವಿಕೆಟ್ ಕಬಳಿಸಿದ್ದಾರೆ.

    VIDEO | ಪ್ಲಾಸ್ಟಿಕ್ ಕುರ್ಚಿ ಮೇಲೆ ಕೋಪ ಪ್ರದರ್ಶಿಸಿದ ಕೊಹ್ಲಿ; ಐಪಿಎಲ್​ ನೀತಿ ಸಂಹಿತೆ ಉಲ್ಲಂಘನೆಗೆ ಛೀಮಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts