More

    ವಡ್ಡಗೆರೆ ಕೆರೆಗೆ ಬಾಗಿನ ಅರ್ಪಣೆ

    ಗುಂಡ್ಲುಪೇಟೆ: ನದಿಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಸಂಪೂರ್ಣ ಅನುಷ್ಠಾನ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.

    ತಾಲೂಕಿನ ವಡ್ಡಗೆರೆ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಬಹಳ ವರ್ಷಗಳಿಂದ ವಿಳಂಬವಾಗಿದ್ದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜಾರಿ ಬಗ್ಗೆ ಹಲವರಿಗೆ ಅನುಮಾನವಿತ್ತು. ಹುತ್ತೂರಿನಿಂದ ವಡ್ಡಗೆರೆ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ 15 ದಿನದಲ್ಲಿ ಕೋಡಿ ಬಿದ್ದು ಮುಂದಿನ ಕೆರೆಗಳಿಗೂ ಹರಿಯುತ್ತಿದೆ. ಇದರಿಂದ ರೈತರ ಮುಖದಲ್ಲಿ ಸಂಭ್ರಮ ಕಾಣುತ್ತಿದೆ. ಗ್ರಾಮಸ್ಥರ ಬಯಕೆಯಂತೆ ಗಂಗಾಪೂಜೆ ನೆರವೇರಿಸಿ ಬಾಗಿನ ಸಲ್ಲಿಸಲಾಗಿದೆ ಎಂದರು.

    ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ 212 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಹುತ್ತೂರು ಕೆರೆಯೂ ಸೇರಿತ್ತು. ನಂತರ ಮುಂದುವರಿದ ಯೋಜನೆಯಲ್ಲಿ 11 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಮಾರ್ಗದಲ್ಲಿ ಬರುವ ಸೋಮನಪುರ, ದೇಪಾಪುರ, ಕುಂದಕೆರೆ, ಚಿರಕನಹಳ್ಳಿ ಮುಂತಾದ ಕೆರೆಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸುವಂತೆ ರೈತರಿಂದ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕೆರೆಗಳನ್ನೂ ವ್ಯಾಪ್ತಿಗೆ ಸೇರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

    ದೇಪಾಪುರ ಮಠಾಧ್ಯಕ್ಷರಾದ ಬಸವಣ್ಣಸ್ವಾಮೀಜಿ, ತಾಪಂ ಸದಸ್ಯ ಕೆ.ಎನ್.ಮಹದೇವಸ್ವಾಮಿ, ಬಿಜೆಪಿ ಮಂಡಲಾಧ್ಯಕ್ಷ ದೊಡ್ಡಹುಂಡಿ ಜಗದೀಶ್, ಕಿಸಾನ್ ಮೋರ್ಚಾ ಅಧ್ಯಕ್ಷ ಕುಂದಕೆರೆ ನಾಗಮಲ್ಲಪ್ಪ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ಮಾಡ್ರಹಳ್ಳಿ ನಾಗೇಂದ್ರ, ಹಾಪ್ಕಾಮ್ಸ್ ಜಿಲ್ಲಾಧ್ಯಕ್ಷ ಶಾಂತಪ್ಪ, ಗ್ರಾಪಂ ಸದಸ್ಯ ಚನ್ನಬಸವರಾಜು, ಸಂಪತ್ತು, ಅಭಿಷೇಕ್ ಗುಡಿಮನೆ, ವೃಷಭೇಂದ್ರ, ನಾಗಪ್ಪ, ಮಹದೇವಸ್ವಾಮಿ ಇದ್ದರು.

    ಶಾಸಕರಿಗೆ ಸಂಭ್ರಮದ ಸ್ವಾಗತ: ವಡ್ಡಗೆರೆ ಕೆರೆ ತುಂಬಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಡಗರ ಸಂಭ್ರಮ ಮನೆಮಾಡಿತ್ತು. ಯೋಜನೆಯ ಜಾರಿಗೆ ಶ್ರಮಿಸಿದ ಶಾಸಕ ನಿರಂಜನಕುಮಾರ್ ಅವರನ್ನು ಗ್ರಾಮದ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರು. ಅಕ್ಕಪಕ್ಕದ ಗ್ರಾಮಗಳ ರೈತರು ಹಾಗೂ ಯೋಜನೆಯ ವ್ಯಾಪ್ತಿಯ ಗ್ರಾಮಸ್ಥರ ಜತೆಗೂಡಿದ ಗ್ರಾಮಸ್ಥರು ಮಂಗಳವಾದ್ಯದೊಂದಿಗೆ ಶಾಸಕರನ್ನು ಕೋಡಿ ಬಳಿಗೆ ಕರೆದೋಯ್ದ ಬಾಗಿನ ಅರ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts