More

    ಪಾಠ ಬೋಧನೆ ಮಾಡುವುದು ಒಂದು ಕಲೆ


    ಯಾದಗಿರಿ: ಶಿಕ್ಷಕರು ಮಕ್ಕಳಲ್ಲಿನ ಸೃಜನಶೀಲತೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಸಲಹೆ ನೀಡಿದರು.

    ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಹಾಗೂ ಜಿಲ್ಲಾ ಮಟ್ಟದ ಮಾರ್ಗದರ್ಶಿ ಶಿಕ್ಷಕರ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪಾಠ ಬೋಧನೆ ಮಾಡುವುದು ಒಂದು ಕಲೆ. ಅದನ್ನು ಶಿಕ್ಷಕರು ಮೊದಲು ಕರಗತ ಮಾಡಿಕೊಳ್ಳಬೇಕು ಎಂದರು.

    ವಿಷಯ ಪರಿವೀಕ್ಷಕ ಹಣಮಂತ ಮಾತನಾಡಿ, ವಿಜ್ಞಾನ ವಿಷಯ ಸಮುದ್ರವಿದ್ದಂತೆ. ನಾವು ಎಷ್ಟೇ ಕಲಿತರೂ ಅದರ ಆಳ ಇನ್ನೂ ವಿಶಾಲವಾಗಿದೆ. ಅಲ್ಲದೆ, ಹೆಚ್ಚುಹೆಚ್ಚು ಪ್ರಯೋಗಾತ್ಮಕತೆಯನ್ನೂ ಒಳಗೊಂಡಿದೆ. ಈ ತರಬೇತಿಯಲ್ಲಿ ಪಡೆದ ಮಾಹಿತಿಯನ್ನು ಶಿಕ್ಷಕರು ಮಕ್ಕಳೊಂದಿಗೆ ಹಂಚಿಕೊಂಡು ಉತ್ತಮ ಯೋಜನೆಯನ್ನು ತಯಾರಿಸಿ ಮಂಡಿಸಬೇಕು ಎಂದು ಕಿವಿಮಾತು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts