More

    ಇದು ಬರೀ ಅಪಾರ್ಟ್​ಮೆಂಟ್​ ಕಥೆಯಲ್ಲ, ಬೆಂಗಳೂರಿನ ಕಥೆ …

    ಬೆಂಗಳೂರು: ಗುರುರಾಜ ಕುಲಕರ್ಣಿ ನಿರ್ದೇಶನದ ‘ಅಮೃತ್​ ಅಪಾರ್ಟ್​ಮೆಂಟ್ಸ್​’ ಚಿತ್ರವು ನ.26ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಮತ್ತು ಟ್ರೇಲರ್​ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಇದು ಪ್ರಸ್ತುತ ಬೆಂಗಳೂರಿನ ಕಥೆ ಎನ್ನುತ್ತಾರೆ ನಿರ್ಮಾಪಕ-ನಿರ್ದೇಶಕ ಗುರುರಾಜ ಕುಲಕರ್ಣಿ. ಇದಕ್ಕೂ ಮುನ್ನ, ‘ಆಕ್ಸಿಡೆಂಟ್​ ಮತ್ತು ‘ದಿ ಲಾಸ್ಟ್​ ಬಸ್​’ ಚಿತ್ರಗಳನ್ನು ಸ್ನೇಹಿತರ ಜತೆಗೆ ಸೇರಿ ನಿರ್ಮಿಸಿದ್ದ ಗುರುರಾಜ ಕುಲಕರ್ಣಿ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತಾವೇ ಕಥೆ-ಚಿತ್ರಕಥೆ ಬರೆದಿದ್ದಾರೆ.

    ಇದನ್ನೂ ಓದಿ: ಅವಳಿ ಮಕ್ಕಳ ಅಮ್ಮನಾದ ಬಾಲಿವುಡ್‌ ನಟಿ ಪ್ರೀತಿ ಜಿಂಟಾ- ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಖುಷಿಯ ಕ್ಷಣ

    ಈ ಚಿತ್ರದ ಕುರಿತು ಮಾತನಾಡುವ ಅವರು, ‘ಇದು ಪ್ರಸ್ತುತ ಬೆಂಗಳೂರಿನ ಕಥೆ, ಎಲ್ಲರ ಕಥೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆಧುನಿಕ ಸಂಬಂಧಗಳ ಕಥೆ. ಬೇಕೋ, ಬೇಡವೋ ಕೊನೆಗೆ ಉಳಿಯುವುದು ಸಂಬಂಧಗಳು ಮಾತ್ರ. ಒಂದು ಮನೆ ಅನಿಸಿಕೊಳ್ಳಬೇಕು ಅಂದರೆ, ಅಲ್ಲಿ ಟಿವಿ, ಫ್ರಿಡ್ಜ್​​ಗಿಂತ ಹೆಚ್ಚು ಗಂಡ-ಹೆಂಡತಿಯ ಸಂಬಂಧ. ಸುಖ, ಸಂತೋಷ, ನೋವು, ನಲಿವು, ಬೇಸರ ಎಲ್ಲವೂ ಇದ್ದರೆ ಅದು ಮನೆ. ಇದೊಂದು ಥ್ರಿಲ್ಲರ್​ ಜಾನರ್​ನ ಚಿತ್ರ. ಥ್ರಿಲ್ಲರ್​ ಎಂದರೆ ರಕ್ತ, ಆಯುಧ ಯಾವುದೂ ಇಲ್ಲ. ಆ ತರಹದ ಯಾವುದೇ ವ್ಯಾಕರಣ ಇಲ್ಲ. ನನ್ನದೇ ಭಾಷೆಯಲ್ಲಿ ಹೊಸದಾಗಿ ತೋರಿಸುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ ಗುರುರಾಜ.

    ಈ ಚಿತ್ರವನ್ನು ಅವರು ಈಗಾಗಲೇ ಕೆಲಸವರಿಗೆ ತೋರಿಸಿದ್ದು, ಎಲ್ಲರಿಂದಲೂ ಒಳ್ಳೆಯ ಪ್ರತಿಕ್ರಿಯೆ ಬಂದಿದೆಯಂತೆ. ಅದೆಲ್ಲದರಿಂದ ಉತ್ತೇಜಿತರಾಗಿರುವ ಅವರು, ಚಿತ್ರವನ್ನು 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನ.26ಕ್ಕೆ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ.

    ಇದನ್ನೂ ಓದಿ: ಅಣ್ಣಾವ್ರ ಕುಟುಂಬದ ಬಗ್ಗೆ ಗೌರವವಿದೆ ಆದ್ರೆ ಪುನೀತ್​ ಸರ್​ 5 ಲಕ್ಷ ರೂ. ಕೊಟ್ಟಿಲ್ಲ: ಬುಲೆಟ್​ ಪ್ರಕಾಶ್​ ಪುತ್ರ ರಕ್ಷಕ್​

    ‘ಅಮೃತ್​ ಅಪಾರ್ಟ್​ಮೆಂಟ್ಸ್​’ ಚಿತ್ರದಲ್ಲಿ ತಾರಕ್​ ಪೊನ್ನಪ್ಪ, ಊರ್ವಶಿ ಗೋವರ್ಧನ, ಬಾಲಾಜಿ ಮನೋಹರ್​, ಸಂಪತ್​ ಕುಮಾರ್​, ಸೀತಾ ಕೋಟೆ, ಮಾನಸ ಜೋಷಿ, ಸಂಪತ್​ಕುಮಾರ್​ ಮುಂತಾದವರು ನಟಿಸಿದ್ದಾರೆ. ಪ್ರತಿಯೊಬ್ಬರೂ ಅದ್ಭುತವಾಗಿ ನಟಿಸಿದ್ದಾರೆ ಎಂದು ಖುಷಿಯಾಗುವ ಗುರುರಾಜ ಕುಲಕರ್ಣಿ, ‘ಇದೊಂದು ಅದ್ಭುತ ಪ್ರಯಾಣವಾಗಿತ್ತು. ಹೊಸದೇನನ್ನೋ ಪ್ರಯತ್ನ ಮಾಡುವಾಗ ಎಲ್ಲರ ಸಹಕಾರ, ಪ್ರೋತ್ಸಾಹ ಮುಖ್ಯ. ನಮ್ಮ ತಂಡದವರು, ಅದರಲ್ಲೂ ಕಲಾವಿದರ ಸಹಕಾರದಿಂದ ನಾನಂದುಕೊಂಡಿದ್ದನ್ನು ತೆರೆಯ ಮೇಲೆ ಸಮರ್ಥವಾಗಿ ತರುವುದಕ್ಕೆ ಸಾಧ್ಯವಾಯಿತು’ ಎನ್ನುತ್ತಾರೆ.

    ಜಿ9 ಕಮ್ಯುನಿಕೇಷನ್ಸ್​ ಮೀಡಿಯಾ ಆಂಡ್​ ಎಂಟರ್​ಟೈನ್​ಮೆಂಟ್ಸ್​ ಬ್ಯಾನರ್​ನಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಅರ್ಜುನ್ ಅಜಿತ್​ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಎಸ್​.ಡಿ. ಅರವಿಂದ್​ ಸಂಗೀತ ಸಂಯೋಜನೆ ಮಾಡಿದ್ದಾರೆ.

    ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್ ರಾಜಕುಮಾರ್​-ಸಂಜಾರಿ ವಿಜಯ್​ಗೆ ಶ್ರದ್ಧಾಂಜಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts