More

    ಚಿತ್ರ ವಿಮರ್ಶೆ| ತಾತ್ಸಾರ ತಾಕಲಾಟಗಳ ಬಂಧದೊಳಗೆ ಅಮೃತವಾಹಿನಿ…

    ಚಿತ್ರ: ಅಮೃತವಾಹಿನಿ
    ನಿರ್ಮಾಣ: ಸಂಪತ್​ ಕುಮಾರ್, ಅಕ್ಷಯ್ ರಾವ್
    ನಿರ್ದೇಶನ: ನರೇಂದ್ರ ಬಾಬು
    ತಾರಾಗಣ: ಎಚ್​.ಎಸ್​. ವೆಂಕಟೇಶ್​ಮೂರ್ತಿ, ವತ್ಸಲಾ ಮೋಹನ್, ಸಂತೋಷ್​, ಸುಪ್ರಿಯಾ, ಬೇಬಿ ಋತ್ವಿ ಇತರರು

    | ಮಂಜು ಕೊಟಗುಣಸಿ ಬೆಂಗಳೂರು
    ವಯಸ್ಸಾಯ್ತು ಎಂದ ಕೂಡಲೇ ಆ ಮನುಷ್ಯನನ್ನು ನೋಡುವ ದೃಷ್ಟಿಯೇ ಬೇರೆಯಾಗುತ್ತದೆ. ಎಲ್ಲರಿಂದ ಕಡೆಗಣಿಸಲ್ಪಟ್ಟು, ತಾತ್ಸಾರಕ್ಕೊಳಗಾಗಿ ತಾವಾಯ್ತು ತಮ್ಮ ತಲೆಮಾರಿನವರಾಯ್ತು ಎಂದು ಅವರೊಂದಿಗೆ ಬದುಕಿನ ಕೊನೇ ಪಯಣವನ್ನು ಜೀಕುತ್ತ ಸಾಗುತ್ತಾರೆ. ಅಂಥ ಜೀವಗಳ ಬವಣೆವನ್ನು ‘ಅಮೃತ ವಾಹಿನಿ’ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನರೇಂದ್ರ ಬಾಬು.

    ಹಿರಿ ತಲೆಮಾರು ಮತ್ತು ಪ್ರಸ್ತುತ ತಲೆಮಾರು ಈ ಎರಡರ ಸಂಬಂಧವನ್ನು ಅಮೃತ ವಾಹಿನಿಯೊಳಗೆ ಬೆಸೆದು, ಅದರ ಮೂಲಕ ಸಾಮಾಜಿಕ ಸಂದೇಶದ ಜತೆಗೆ ನವ ಪೀಳಿಗೆಗೆ ಒಂದಷ್ಟು ಬೋಧನೆ ಮಾಡುವ ಕೆಲಸವೂ ಅಮೃತವಾಹಿನಿಯಲ್ಲಾಗಿದೆ. ನಿಜ ಜೀವನದಲ್ಲಿ ಸಾಹಿತಿಯಾಗಿರುವ ಎಚ್.ಎಸ್ ವೆಂಕಟೇಶಮೂರ್ತಿ ಇಲ್ಲಿಯೂ ಸಾಹಿತಿಯೇ.

    ಇದನ್ನೂ ಓದಿ: ಜೀ ಕನ್ನಡದಲ್ಲಿ ಸಂಕ್ರಾಂತಿ ಸಂಗಮ; ಸೋಮವಾರ ದಿಂದ ಶುಕ್ರವಾರ ರಾತ್ರಿ 7ರಿಂದ 8ವರೆಗೆ…

    ಗೋಪಾಲ ಕೃಷ್ಣ (ಎಚ್ಎಸ್ವಿ) ಓರ್ವ ಸಾಹಿತಿ. ವಯಸ್ಸು 60ರ ಮೇಲಾದರೂ, ಸಂಬಂಧಗಳ ಬಗ್ಗೆ ಅಪಾರ ಗೌರವ ಮತ್ತು ಅದನ್ನು ಕಾಪಾಡಿಕೊಂಡು ಹೋಗಬೇಕೆನ್ನುವ ಮನಸ್ಥಿತಿಯ ವ್ಯಕ್ತಿತ್ವದವನು. ಸಮಾಜದಲ್ಲಿ ಒಳ್ಳೇ ಸ್ಥಾನ, ಜನರಿಂದ ಗೌರವ ಎಲ್ಲವೂ ಇದ್ದರೂ, ಮತ್ತೊಂದೆಡೆ ಸೊಸೆಯ ತಾತ್ಸಾರ, ಮಗ ಜತೆಗಿಲ್ಲ ಎಂಬ ಕೊರಗು. ಹೀಗೆ ಒಂದಷ್ಟು ಮುರಿದ ಸಂಬಂಧ ಮತ್ತು ಮನಸ್ಥಿತಿಗಳನ್ನು ಜೋಡಿಸುವ ಕೈಂಕರ್ಯವನ್ನು ಎಚ್ಎಸ್ವಿ ಅವರಿಂದ ಪಾತ್ರದ ಮೂಲಕ ಹೊರ ತೆಗೆಸಿದ್ದಾರೆ ನಿರ್ದೇಶಕರು.

    ಮಗ ಪ್ರೇಮ ವಿವಾಹವಾದ ಎಂಬ ಕಾರಣಕ್ಕೆ ಮನೆ ಒಳಗೆ ಸೇರಿಸದ ಅಪ್ಪ, ಆತನನ್ನು ಹೊರಹಾಕುತ್ತಾರೆ. ಇತ್ತ ಮಗ ಜತೆಗಿಲ್ಲ ಎಂಬ ನೋವಿನಲ್ಲಿ ತಾಯಿ ಕಣ್ಣೀರಿನಲ್ಲಿಯೇ ದಿನದೂಡುತ್ತಾಳೆ. ಒಂದಿನ ಶಾಶ್ವತವಾಗಿ ಕಣ್ಣು ಮುಚ್ಚುತ್ತಾಳೆ. ಒಂಟಿ ಬದುಕಿಗೆ ಅಂತ್ಯ ಹಾಡಬೇಕೆಂದು ಮಗನ ಮನೆಯತ್ತ ಹೆಜ್ಜೆ ಹಾಕುತ್ತಾನೆ ಸಾಹಿತಿ ಜೆಕೆ. ಆದರೆ, ಅಲ್ಲಿನ ಸ್ಥಿತಿಯೇ ಬೇರೆ.

    ಇದನ್ನೂ ಓದಿ: ಅರ್ಧಕ್ಕೆ ಬಂತು ‘ಆ ಒಂದು ಕನಸು’!

    ಇಡೀ ಸಿನಿಮಾದಲ್ಲಿ ಸಂಬಂಧಗಳ ಏರಿಳಿತವನ್ನೇ ಪ್ರತಿಬಿಂಬಿಸಲಾಗಿದೆ. ಪ್ರೀತಿ ಬಯಸುವ ಜೀವಕೆ, ಅದನ್ನೇ ನೀಡದಿದ್ದಾಗ ಆ ಜೀವ ಅನುಭವಿಸುವ ಯಾತನೆ ಎಂಥದ್ದು ಎಂಬುದನ್ನು ಎಚ್ಎಸ್ವಿ ತಮ್ಮ ಪಾತ್ರದ ಮೂಲಕ ತೋರಿಸಿದ್ದಾರೆ. ವಯಸ್ಸಹಜ ಕಾಯಿಲೆಯನ್ನು ಹೊದ್ದಿಕೊಂಡು ಆ ವಯಸ್ಸಿನ ತವಕ ತಲ್ಲಣವನ್ನು ಅಷ್ಟೇ ಸೊಗಸಾಗಿ ತೋರ್ಪಡಿಸಿದ್ದಾರೆ. ಸಂಬಂಧಗಳ ಸರಪಳಿಯಲ್ಲಿ ಸಿಲುಕಿ ನಲುಗುವ ಅವರ ಭಾವ ಆಪ್ತ ಎನಿಸುತ್ತದೆ.

    ಇನ್ನು ಚಿತ್ರದಲ್ಲಿನ ಹಾಡುಗಳಿಗೆ ಸ್ವತಃ ಎಚ್​ಎಸ್​ವಿ ಅವರೇ ಸಾಹಿತ್ಯ ಬರೆದಿದ್ದಾರೆ. ವೇಣು ಪಾತ್ರಧಾರಿ ಸಂತೋಷ್ ಕರ್ಕಿ, ಕಿರುತೆರೆ ನಟಿ ಸುಪ್ರಿಯಾ ಪಾತ್ರಗಳಿಗೆ ಸಹಜ ಅಭಿನಯ ನೀಡಿದ್ದಾರೆ. ಪುಟಾಣಿ ಋತ್ವಿ ಸಹ ಗಮನ ಸೆಳೆಯುತ್ತಾಳೆ.

    ‘ಪುಷ್ಪ’ ಚಿತ್ರದ ನಿರ್ದೇಶಕ ಸುಕುಮಾರ್ ಜತೆ ಸಿನಿಮಾ ಮಾಡ್ತಾರಾ ದರ್ಶನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts