More

    ಇಂಥಾ ಪಾತ್ರ ಯಾಕೆ ಕೊಡ್ತೀರಾ ಅಂತ ನಾನ್ಯಾವತ್ತೂ ಕೇಳಿಲ್ಲ …

    ಅಮಿತಾಭ್ ಬಚ್ಚನ್ ಅಭಿನಯದ ‘ಗುಲಾಬೋ ಸೀತಾಬೋ’, ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುವುದಕ್ಕೆ ದಿನಗಣನೆ ಪ್ರಾರಂಭವಾಗುತ್ತಿದೆ. ಚಿತ್ರಮಂದಿರದ ಹೊರತಾಗಿ ಓವರ್ ದಿ ಟಾಪ್ (ಓಟಿಟಿ)ಯಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ದೊಡ್ಡ ಚಿತ್ರ ಇದು. ಹಾಗಾಗಿ ಈ ಚಿತ್ರದ ಬಗ್ಗೆ ಅಮಿತಾಭ್ ಅಭಿಮಾನಿಗಳಲ್ಲಿ ಕುತೂಹಲ, ನಿರೀಕ್ಷೆಗಳು ಸ್ವಲ್ಪ ಹೆಚ್ಚೇ ಇದೆ ಎಂದರೆ ತಪ್ಪಿಲ್ಲ.

    ಇದನ್ನೂ ಓದಿ: ಟಿಕ್‌ಟಾಕ್‌ನಲ್ಲಿ ನಕಲಿ ಕರಿಷ್ಮಾ ಕಪೂರ್ ಹವಾ!

    ಈ ಮಧ್ಯೆ, ಹಲವರಿಗೆ ಒಂದು ಪ್ರಶ್ನೆ ಎದುರಾಗಿದೆ. ಈ ಹಿಂದೆ ನಿರ್ದೇಶಕ ಶೂಜಿತ್ ಸರ್ಕಾರ್, ‘ಪೀಕು’ ಚಿತ್ರದಲ್ಲಿ ಅಮಿತಾಭ್ ಅವರಿಗೆ ಮುಂಗೋಪಿ ಮುದುಕನ ಪಾತ್ರ ನೀಡಿದ್ದರು. ಇದೀಗ ‘ಗುಲಾಬೋ ಸೀತಾಬೋ’ ಚಿತ್ರದಲ್ಲೂ ಅಮಿತಾಭ್ ಅವರಿಗೆ ಮತ್ತೆ ಅಂಥದ್ದೇ ಇನ್ನೊಂದು ಪಾತ್ರವನ್ನು ಕೊಟ್ಟಿರುವ ಹಾಗಿದೆ. ಅಮಿತಾಭ್ ಅವರೇನೋ, ಆ ಪಾತ್ರವನ್ನು ಬಹಳ ಪ್ರೀತಿಯಿಂದ ಒಪ್ಪಿಕೊಂಡು ಮಾಡಿದ್ದಾರೆ. ಆದರೆ, ಶೂಜಿತ್ ನಿಮಗೆ ಅಂಥದ್ದೇ ಒಂದು ಪಾತ್ರ ಕೊಡ್ತಾರಲ್ಲ, ಯಾಕೆ ಎಂಬ ಪ್ರಶ್ನೆಗೆ, ಅಮಿತಾಭ್ ಬಹಳ ವಿವರವಾಗಿಯೇ ಮಾತಾಡಿದ್ದಾರೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಒಂದಿಪ್ಪತ್ತು ವರ್ಷಗಳ ಕಾಲ ನಾನು ಹೀರೋ ಪಾತ್ರಗಳನ್ನ ಮಾಡಿದೆ. ವಿಲನ್‌ಗಳ ಜತೆಗೆ ಕೊನೆಯವರೆಗೂ ಹೊಡೆದಾಡಿ, ಹೀರೋಯಿನ್ ಕೈ ಹಿಡಿದುಕೊಂಡು ಹೋಗುವ ಪಾತ್ರಗಳಲ್ಲಿ ನಟಿಸಿದೆ. ನಾನ್ಯಾವತ್ತು ನನ್ನ ನಿರ್ದೇಶಕರನ್ನ, ನನಗೆ ಇಂಥ ಪಾತ್ರಗಳನ್ನ ಯಾಕೆ ಕೊಡ್ತೀರಾ ಎಂದು ಕೇಳಿಲ್ಲ. ಅದು ಹೃಷಿಕೇಶ್ ಮುಖರ್ಜಿ ಇರಬಹುದು, ಮನಮೋಹನ್ ದೇಸಾಯಿ, ಪ್ರಕಾಶ್ ಮೆಹ್ರಾ, ಬಾಲ್ಕಿ, ಕರಣ್ ಜೋಹಾರ್, ಶೂಜಿತ್ ಸರ್ಕಾರ್ … ಯಾರು ಬೇಕಾದರೂ ಇರಬಹುದು. ಬಹುಶಃ ಅವರು ನನ್ನನ್ನು ಅಂತಹ ಪಾತ್ರಗಳಲ್ಲಿ ಇಟ್ಟು ನೋಡಬಹುದು. ಅಂತಹ ಪಾತ್ರಗಳಿಗೆ ನಾನೇ ಸರಿ ಅಂತ ಅವರಿಗೆ ಅನಿಸಬಹುದು. ನನ್ನನ್ನ ಒಬ್ಬ ಮುಂಗೋಪಿ ಮುದುಕನಾಗಿ ಶೂಜಿತ್ ನೋಡುತ್ತಾರೆಂದರೆ, ಅದು ಅವರ ಕಲ್ಪನೆ. ಅವರ ಕಲ್ಪನೆಗೆ ನ್ಯಾಯ ಒದಗಿಸುವುದಷ್ಟೇ ನನ್ನ ಕೆಲಸ’ ಎನ್ನುತ್ತಾರೆ ಅಮಿತಾಭ್.

    ಇದನ್ನೂ ಓದಿ: ರಾಣಾ ದಗ್ಗುಬಾಟಿ ಮದುವೆ ಡೇಟ್ ಕೊನೆಗೂ ಗೊತ್ತಾಯ್ತು!

    ಇನ್ನು ಚಿತ್ರಕ್ಕೆ ಬಳಸಲಾಗಿರುವ ಪ್ರಾಸ್ಥೆಟಿಕ್ಸ್ (ಮೇಕಪ್) ಬಗ್ಗೆ ಮಾತನಾಡಿರುವ ಅಮಿತಾಭ್, ‘ಹಿಂದೊಮ್ಮೆ ‘ಖುದಾ ಗವಾ’ ಚಿತ್ರದಲ್ಲಿ ನನಗೆ ಗಡ್ಡ ಅಂಟಿಸಿಕೊಳ್ಳೋಕೆ ಬಹಳ ಕಷ್ಟವಾಗುತಿತ್ತು. ಆದರೆ, ‘ಪಾ’ ಚಿತ್ರವು ನನಗೆ ಮೇಕಪ್ ಹಾಕಿಕೊಂಡಾಗ ಹೇಗಿರಬೇಕು ಎಂದು ಸಾಕಷ್ಟು ಕಲಿಸಿಕೊಟ್ಟಿತು. ಹಾಗಾಗಿ, ಈ ಚಿತ್ರಕ್ಕೆ ಪ್ರಾಸ್ಥೆಟಿಕ್ಸ್ ಬಳಸಿದ್ದು ಹೆಚ್ಚು ಕಷ್ಟವಾಗಲಿಲ್ಲ. ದಿನಾ ನಾಲ್ಕೈದು ಗಂಟೆ ಮೇಕಪ್‌ಗೆ ಖರ್ಚಾಗುತಿತ್ತು. ಇನ್ನು ಲಕ್ನೋ ಬಿಸಿಲಿನಲ್ಲಿ ಶೂಟಿಂಗ್ ಮಾಡಿದ ಕಿರಿಕಿರಿ ಇನ್ನೊಂದು ತರಹ. ಆದರೆ, ಒಬ್ಬ ನಟನಾದವನು ಯಾವತ್ತೂ ದೂರಬಾರದು’ ಎನ್ನುತ್ತಾರೆ ಅಮಿತಾಭ್ ಬಚ್ಚನ್.

    ಅಮೆರಿಕದಲ್ಲಿ ಸನ್ನಿ ಲಿಯೋನ್​ ಕೃಷಿ ಹೇಗಿದೆ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts