ಯಾರೋ ರಾಬಿನ್ ಹುಡ್ ಇಟ್ಟಿರಬೇಕು … ಅಮೀರ್ ಖಾನ್ ಹೀಗೆ ಹೇಳಿದ್ದೇಕೆ?

blank

ಗೋಧಿ ಹಿಟ್ಟಿನ ಪ್ಯಾಕೆಟ್‌ಗಳಲ್ಲಿ ಅಮೀರ್ ಖಾನ್ ದುಡ್ಡು ಇಟ್ಟಿದ್ದಾರೆ, ಪ್ರತಿಯೊಬ್ಬರಿಗೂ 15 ಸಾವಿರ ತಲುಪಿಸುತ್ತಿದ್ದಾರೆ … ಎಂಬಂತಹ ಸುದ್ದಿಗಳು ಕಳೆದ ವಾರ ವಿಪರೀತ ಹಬ್ಬಿತ್ತು. ಅಗತ್ಯವಿರುವವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಮೀರ್, ಈ ರೀತಿ ಮಾಡುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಪ್ರಚಾರ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಂತೂ ಅಮೀರ್ ಖಾನ್ ಅವರನ್ನು ಎಲ್ಲರೂ ಹೊಗಳಿದ್ದೇ ಹೊಗಳಿದ್ದು. ಇಷ್ಟೆಲ್ಲಾ ಆಗುತ್ತಿದ್ದರೂ ಅಮೀರ್ ಮಾತ್ರ ತುಟಿಕ್ ಪಿಟಿಕ್ ಎಂದಿರಲಿಲ್ಲ.

blank

ಇದನ್ನೂ ಓದಿ: ಮೇ 11ರಿಂದ ಧಾರಾವಾಹಿ ಶೂಟಿಂಗ್ ಪ್ರಾರಂಭ?

ಈಗ ಇಡೀ ಪ್ರಕರಣದ ಬಗ್ಗೆ ಅಮೀರ್ ಖಾನ್ ಮೊದಲ ಬಾರಿಗೆ ಮಾತನಾಡಿದ್ದಾರೆ. ದೆಹಲಿಯಲ್ಲಿ ಗೋಧಿ ಪ್ಯಾಕೆಟ್‌ಗಳಲ್ಲಿ 15 ಸಾವಿರ ಇಟ್ಟ ಪ್ರಕರಣಕ್ಕೂ, ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ರಿಷಿ ಕಪೂರ್​ಗೆ ನಮನ ಸಲ್ಲಿಸಿದ ನೀತೂ ಮತ್ತು ರಣಬೀರ್​ ಕಪೂರ್​

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಗೋಧಿ ಪ್ಯಾಕೆಟ್‌ಗಳಲ್ಲಿ ದುಡ್ಡಿಟ್ಟು ಅಗತ್ಯವಿರುವವರಿಗೆ ಕಳಿಸಿದ್ದು ನಾನಲ್ಲ. ಒಂದೋ ಇದು ಸುಳ್ಳು ಸುದ್ದಿ ಇರಬೇಕು, ಇಲ್ಲ ಹೆಸರು ಬಹಿರಂಗಪಡಿಸದ ಯಾರೋ ರಾಬಿನ್ ಹುಡ್ ಈ ತರಹ ಕೆಲಸ ಮಾಡಿರಬೇಕು. ಇದಕ್ಕೂ ನನಗೂ ಸಂಬಂಧವೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ, ಗೋಧಿ ಪ್ಯಾಕೆಟ್‌ಗಳಲ್ಲಿ ದುಡ್ಡಿಟ್ಟು, ಬಡವರಿಗೆ ಹಂಚಿದ್ದು ಯಾರು? ಈ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಅಮೀರ್ ಖಾನ್ ದುಡ್ಡು ಹಂಚಿದರೋ ಇಲ್ಲವೋ ಗೊತ್ತಿಲ್ಲ. ಆದರೆ, ಕೋವಿಡ್-19 ವಿರುದ್ಧ ಸಮರಕ್ಕೆ ತಮ್ಮದೇ ರೀತಿಯಲ್ಲಿ ಪಿಎಂ ಕೇರ್ಸ್ ಸೇರಿದಂತೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲ, ಯಾರಿಗೆ, ಎಷ್ಟು ಕೊಟ್ಟೆ ಎಂಬ ವಿಷಯವನ್ನು ರಹಸ್ಯವಾಗಿಯೇ ಇಟ್ಟಿದ್ದಾರೆ ಎನ್ನುವುದು ವಿಶೇಷ.

10 ದಿನಗಳಲ್ಲಿ ಸದ್ದಿಲ್ಲದೆ ಶೂಟ್ ಆಯ್ತು ‘ದಿ ಪೈಂಟರ್’

Share This Article
blank

ಮಳೆಗಾಲದಲ್ಲಿ ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು! rainy season

rainy season: ಈಗಾಗಲೇ ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ಈ ಹವಾಮಾನ  ಅನೇಕ ರೋಗಗಳು ಮತ್ತು ಸೋಂಕುಗಳ…

ಈ ವಿಷಯಗಳಲ್ಲಿ ಪುರುಷರು ಮಹಿಳೆಯರ ಮುಂದೆ ನಿಲ್ಲಲು ಸಾಧ್ಯವಿಲ್ಲ! Chanakya Niti

Chanakya Niti : ಆಚಾರ್ಯ ಚಾಣಕ್ಯ ರಾಜಕೀಯ, ಸಮಾಜ, ಸಂಬಂಧಗಳು ಮತ್ತು ಜೀವನದ ಸೂಕ್ಷ್ಮ ವ್ಯತ್ಯಾಸಗಳನ್ನು…

blank