ಅಪ್ಪನ ಡಿವೋರ್ಸ್ ಬೆನ್ನಲ್ಲೇ ಮಗಳ ಪೋಸ್ಟ್; ನಿಮ್ಮ ಮೂರನೇ ಮಮ್ಮಿ ಯಾರು ಎಂದು ನೆಟ್ಟಿಗರ ಪ್ರಶ್ನೆ

blank

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಎರಡನೇ ಹೆಂಡತಿಗೆ ಕಿರಣ್ ರಾವ್​ಗೆ ಡಿವೋರ್ಸ್ ನೀಡಿದ್ದಾರೆ. ಈ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ ಅವರ ಮಗಳು ಐರಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ನೆಟ್ಟಿಗರು ಸಾವಿರಾರು ಪ್ರಶ್ನೆ ಕೇಳಲಾರಂಭಿಸಿದ್ದಾರೆ.

blank

ಐರಾ ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆ್ಯಕ್ಟಿವ್ ಇರುತ್ತಾರೆ. ತಮ್ಮ ಪರ್ಸನಲ್ ಲೈಫ್ ಬಗ್ಗೆನೂ ಸಾಕಷ್ಟು ಬಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಅಪ್ಪನ ಡಿವೋರ್ಸ್ ಕುರಿತಾಗಿ ಆಕೆ ಒಂದೇ ಒಂದು ಮಾತನ್ನೂ ಆಡಿಲ್ಲ. ಆನ್​ಲೈನ್​ನಲ್ಲಿ ಫುಡ್ ಆರ್ಡರ್ ಮಾಡಿಕೊಂಡು ಅದನ್ನು ಸಂತೋಷದಿಂದ ತಿನ್ನುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಆಕೆ ಹಾಕುತ್ತಿದ್ದಂತೆಯೇ ನೆಟ್ಟಿಗರು ಪ್ರಶ್ನೆಗಳ ಮಳೆಯನ್ನೇ ಸುರಿಸಿದ್ದಾರೆ.

ಐರಾ ನಿಮ್ಮ ಅಪ್ಪ ಮತ್ತು ಚಿಕ್ಕಮ್ಮನಿಗೆ ಡಿವೋರ್ಸ್ ಆಗಿದೆ. ನಿಮ್ಮ ಕುಟುಂಬಕ್ಕೆ ಮದುವೆ ಎನ್ನುವುದು ಏನು ಮಕ್ಕಳಾಟವೇ? ಈಗಾಗಲೇ ಎರಡು ಅಮ್ಮಂದಿರಿರುವ ನಿಮಗೆ ಮೂರನೇ ಅಮ್ಮನಾಗಿ ಬದುವವರು ಯಾರು? ಹೀಗೆ ನಾನಾ ರೀತಿಯ ಪ್ರಶ್ನೆಗಳು ಕಾಮೆಂಟ್ ಬಾಕ್ಸ್​ನಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ನಿಮ್ಮ ಕಣ್ಣಿನಲ್ಲಿ ನೋವು ಕಾಣುತ್ತಿದೆ. ನೀವು ಬ್ರೋಕನ್ ಹಾರ್ಟ್. ಸಮಾಧಾನ ಮಾಡಿಕೊಳ್ಳಿ ಹೀಗೆ ನಾನಾ ರೀತಿಯ ಸಮಾಧಾನದ ಮಾತುಗಳನ್ನೂ ನೆಟ್ಟಿಗರು ಹೇಳಲಾರಂಭಿಸಿದ್ದಾರೆ. (ಏಜೆನ್ಸೀಸ್)

ಕಿರಣ್​ಗೆ ಡಿವೋರ್ಸ್ ನೀಡಿದ ಅಮೀರ್​ಗೆ ಫಾತೀಮಾ 3ನೇ ಹೆಂಡತಿ!? ಟ್ರೆಂಡಿಂಗ್​ನಲ್ಲಿ ದಂಗಲ್ ನಟಿ

ವೇದಿಕೆಯ ಮೇಲೇ ವನಿತಾಗೆ ಅವಮಾನಿಸಿದ ರಮ್ಯಾ ಕೃಷ್ಣ!? ಡ್ಯಾನ್ಸ್ ಶೋನಿಂದ ಹೊರಬಂದ ನಟಿ ಹೇಳಿದ್ದೇನು?

ಐ ಹೇಟ್ ಮೈ ಲೈಫ್ ಎಂದು ನೋಟ್ ಬುಕ್ ತುಂಬ ಬರೆದಿಟ್ಟು ನೇಣಿಗೆ ಶರಣಾದ 9ನೇ ಕ್ಲಾಸ್ ಬಾಲಕಿ!

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank