More

    ಸೌಹಾರ್ದತೆಯಿಂದ ಬದುಕುವ ವ್ಯವಸ್ಥೆ ಕಲ್ಪಿಸಿ

    ಸಿಂಧನೂರು: ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಸಿಐಟಿಯು, ಕೆಪಿಆರ್‌ಎಸ್, ಎಐಎಡಬ್ಲ್ಯು ಸಂಘಟನೆಗಳಿಂದ ತಾಲೂಕು ಆಡಳಿತ ಸೌಧದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

    ಅತ್ಯಾಚಾರ

    ಎರಡು ತಿಂಗಳ ಹಿಂದೆ ಗುಂಪು ಘರ್ಷಣೆ, ಮಹಿಳೆಯರನ್ನು ನಗ್ನ ಮಾಡಿ, ಅವರ ಮೇಲೆ ಅತ್ಯಾಚಾರ ಮಾಡಿದ ಘಟನೆಗಳನ್ನು ಖಂಡಿಸಲಾಗುವುದು. ಘಟನೆ ನಡೆದು ಎರಡು ತಿಂಗಳು ಗತಿಸಿದೆ. ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ. ಸುಪ್ರೀಂಕೊರ್ಟ್ ಮಧ್ಯ ಪ್ರವೇಶದ ನಂತರ ಪ್ರಧಾನಿಗಳು ಮೌನ ಮುರಿದು ಮಾತನಾಡಿ, ಮಾತಿನಲ್ಲೂ ರಾಜಕೀಯ ಬೆರೆಸಿದ್ದಾರೆ.

    ಇದನ್ನೂ ಓದಿ:ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ: ಟ್ವಿಟರ್​ ವಿರುದ್ಧ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

    ರಕ್ಷಿಸಿಬೇಕಾದ ಮಣಿಪುರದ ಸರ್ಕಾರ ಅಗತ್ಯ ಕ್ರಮ ಜರುಗಿಸುತ್ತಿಲ್ಲ. ಸ್ವತಃ ಅಲ್ಲಿನ ಮುಖ್ಯಮಂತ್ರಿ ಇಂಥಹ ನೂರಾರು ಘಟನೆಗಳು ನಡೆದಿವೆ ಎಂದು ಹಾಗೂ ಅಲ್ಲಿಯ ರಾಜ್ಯಪಾಲರು ಮಾಧ್ಯಮ ಜೊತೆ ಮಾತನಾಡುವಾಗ ಅವರು ಆಡಿದ ಅಸಹಾಯಕತೆ ಮಾತುಗಳು ಅಲ್ಲಿ ಕಾನೂನು ವ್ಯವಸ್ಥೆಯ ಕುರಿತು ಅನುಮಾನ ಮೂಡಿಸುತ್ತದೆ. ಕೂಡಲೇ ಮಣಿಪುರದಲ್ಲಿ ಮುಂದೆ ಇಂಥ ಘಟನೆಗಳು ನಡೆಯದಂತೆ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಮಣಿಪುರದ ಜನತೆ ಶಾಂತಿ, ಸೌಹಾರ್ದತೆಯಿಂದ ಬದುಕುವ ವ್ಯವಸ್ಥೆ ಕಲ್ಲಿಸಬೇಕೆಂದು ಒತ್ತಾಯಿಸಲಾಯಿತು.

    ಸಂಘಟನೆಯ ಬಿ.ಲಿಂಗಪ್ಪ, ಬಸವಂತರಾಯಗೌಡ ಕಲ್ಲೂರು, ವಿರೂಪಾಕ್ಷಗೌಡ, ಅನ್ವರ್‌ಪಾಷಾ, ಮರಿಸ್ವಾಮಿ, ರೇಣುಕಮ್ಮ, ಶರಣಮ್ಮ ಪಾಟೀಲ್, ಶಕುಂತಲಾ ಪಾಟೀಲ್, ಎಂ.ಗೋಪಾಲಕೃಷ್ಣ, ಶರಬಣ್ಣ ನಾಗಲಾಪುರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts