More

  ನೀರು ಹರಿಸುವ ವ್ಯವಸ್ಥೆ ಮಾಡಿ

  ಗಂಗಾವತಿ: ವಿಜಯನಗರ ಕಾಲುವೆಗಳಿಗೆ ರೈತ ಪಾಲಿನ ನೀರು ಹರಿಸುವ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಆನೆಗೊಂದಿ ಮತ್ತು ಸಣಾಪುರ ರೈತರು ಮತ್ತು ನೀರು ಬಳಕೆದಾರರ ಸಂಘದ ಸದಸ್ಯರು ಶಾಸಕ ಗಾಲಿ ಜನಾರ್ದನರೆಡ್ಡಿಗೆ ಭಾನುವಾರ ಮನವಿ ಮಾಡಿದರು.

  ಇದನ್ನು ಓದಿ:ಭದ್ರಾ ಜಲಾಶಯದಿಂದ ನೀರು ಬಿಡುಗಡೆ

  ಆನೆಗೊಂದಿ ಶ್ರೀರಂಗನಾಥ ದೇವಾಲಯದಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿಯನ್ನು ಭೇಟಿಯಾದ ರೈತರು, ನೀರಿನ ಕೊರತೆ ಬಗ್ಗೆ ಹೇಳಿದರು. ತುಂಗಭದ್ರಾ ಜಲಾಶಯದಿಂದ ವಿಜಯನಗರ ಕಾಲುವೆ ವ್ಯಾಪ್ತಿಯ ರೈತರ ಪಾಲಿನ ನೀರನ್ನು ಕಾಲುವೆಗೆ ಹರಿಸಿದರೂ ಕೊಪ್ಪಳ ತಾಲೂಕಿನ ಬಸಾಪುರದವರೆಗೂ ಮಾತ್ರ ಬರುತ್ತಿವೆ. ಆನೆಗೊಂದಿ, ಸಣಾಪುರ, ಸಂಗಾಪುರ, ಮಲ್ಲಾಪುರ, ಅಯೋಧ್ಯೆವರೆಗಿನ ಕೃಷಿ ಭೂಮಿಗೆ ನೀರಿನ ಕೊರತೆಯಾಗುತ್ತಿದೆ.

  ಎರಡನೇ ಬೆಳೆ ನಂಬಿಕೊಂಡ ರೈತರಿಗೆ ಸಂಕಷ್ಟ ಎದುರಾಗಿದ್ದು, ವಿಎನ್‌ಸಿ ಪಾಲಿನ ನೀರನ್ನು ಒದಗಿಸಬೇಕು. ಅದರಂತೆ ವಿಎನ್‌ಸಿ ವ್ಯಾಪ್ತಿಯ ಹಿರೇಹುದ್ದಿ ಮಡಿಗಾಲುವೆ ದುರಸ್ತಿ ನಡೆಯುತ್ತಿದ್ದು, ನೀರು ಬಳಕೆದಾರರ ಸಹಕಾರ ಸಂಘಕ್ಕೆ ವಹಿಸಲು ರೈತರಾದ ಚಂದ್ರಶೇಖರ್, ಟಿ.ಜಿ.ಬಾಬು, ದೇವೆಂದ್ರಪ್ಪ ಇತರರು ಒತ್ತಾಯಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts