More

    ಡೇಟಾ ಸುರಕ್ಷತೆ : ಸಂಸತ್ ಸಮಿತಿ ವಿಚಾರಣೆ ಹಾಜರಾಗಲ್ಲ ಎಂದ ಅಮೆಜಾನ್​ !

    ನವದೆಹಲಿ: ಡೇಟಾ ಸುರಕ್ಷತೆ ಮಸೂದೆ ವಿಚಾರವಾಗಿ ಸಂಸತ್ ಸಮಿತಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಇ-ಕಾಮರ್ಸ್ ದಿಗ್ಗಜ ಸಂಸ್ಥೆ ಅಮೆಜಾನ್​ ಹೇಳಿದ್ದು, ಹಕ್ಕುಚ್ಯುತಿ ಎದುರಿಸಬೇಕಾದ ಪ್ರಸಂಗವನ್ನು ತಂದಿಟ್ಟುಕೊಂಡಿದೆ. ಅಕ್ಟೋಬರ್ 28ರಂದು ಸಮಿತಿ ಎದುರು ಹಾಜರಾಗುವಂತೆ ಅಮೆಜಾನ್​ಗೆ ಸಮಿತಿ ಸೂಚಿಸಿತ್ತು.

    ಈ ಸಂಬಂಧ ಪ್ರತಿಕ್ರಿಯಿಸಿರುವ ಸಂಸತ್ ಸಮಿತಿ ಮುಖ್ಯಸ್ಥೆ ಸಂಸದೆ ಮೀನಾಕ್ಷಿ ಲೇಖಿ, ಅಮೆಜಾನ್ ಹಕ್ಕುಚ್ಯುತಿ ಎದುರಿಸಬೇಕಾಗಿ ಬರುತ್ತದೆ. ವಿಚಾರಣೆಗೆ ಹಾಜರಾಗಿಲ್ಲ ಎಂದಾದರೆ ಸಮಿತಿ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡು ಕಂಪನಿ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಇದನ್ನೂ ಓದಿ: ಹಸು ಸಾಕಣೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಬೇಡ ಪಶು ಸಂಗೋಪನೆ ಸಚಿವರಿಂದ ಸಿಎಂ ಯಡಿಯೂರಪ್ಪಗೆ ಒತ್ತಾಯ

    ಈ ನಡುವೆ, ಡೇಟಾ ಸುರಕ್ಷತೆಗೆ ಸಂಬಂಧಿಸಿ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್​ಬುಕ್​ ನ ಪಾಲಿಸಿ ಹೆಡ್ ಅನ್​​ಖಿ ದಾಸ್​ ಶುಕ್ರವಾರ ಸಮಿತಿ ಎದುರು ಹಾಜರಾಗಿದ್ದಾರೆ. ಸಮಿತಿ ಸದಸ್ಯರು ಡೇಟಾ ಸುರಕ್ಷತೆಗೆ ಸಂಬಂಧಿಸಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಬಳಕೆದಾರರ ಮಾಹಿತಿಯನ್ನು ವಾಣಿಜ್ಯ ಲಾಭದ ಉದ್ದೇಶಕ್ಕಾಗಿ ಬಳಸಬಾರದು ಎಂಬ ಸಲಹೆಯನ್ನು ನೀಡಿದೆ. ಇದೇ ರೀತಿ, ಟ್ವಿಟರ್ ಗೆ ಅಕ್ಟೋಬರ್ 28ರಂದು, ಗೂಗಲ್ ಮತ್ತು ಪೇಟಿಎಂಗೆ ಅಕ್ಟೋಬರ್ 29ರಂದು ವಿಚಾರಣೆಗೆ ಹಾಜರಾಗುವಂತೆ ಸಮಿತಿ ಸೂಚಿಸಿದೆ. (ಏಜೆನ್ಸೀಸ್)

    ನವಾಜ್ ಷರೀಫ್ ವಿರುದ್ಧ 195 ಕೋಟಿ ರೂಪಾಯಿಯ ಹೊಸ ಭ್ರಷ್ಟಾಚಾರ ಪ್ರಕರಣ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts