More

    ಈತನ ಕೈಗೆ ಬೇರೆಯವರ ಮೊಬೈಲ್ ಫೋನ್ ಸಿಕ್ಕರೆ ಮುಗೀತು; ಮೋಸ ಹೋಗಿದ್ದು ಗೊತ್ತಾಗೋದು ತಿಂಗಳುಗಳ ಬಳಿಕವೇ…

    ಬೆಂಗಳೂರು: ಅಮೆಜಾನ್ ಕಂಪನಿ ಗೋದಾಮಿಗೆ ಅಂಗಡಿ ಜಾಗವನ್ನು ಬಾಡಿಗೆಗೆ ಕೊಡಿಸುವುದಾಗಿ 49 ಸಾವಿರ ರೂ. ವಂಚಿಸಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ (ಸೈಬರ್ ಕ್ರೈಂ) ಪೊಲೀಸರು ಬಂಧಿಸಿದ್ದಾರೆ. ವಿದ್ಯಾರಣ್ಯಪುರದ ನಿವಾಸಿ ಪ್ರದೀಪ್ (32) ಬಂಧಿತ. ಆರೋಪಿಯಿಂದ 1 ಮೊಬೈಲ್​ಫೋನ್​ ಹಾಗೂ 30 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ.

    ವಿದ್ಯಾರಣ್ಯಪುರ ನಿವಾಸಿಯೊಬ್ಬರು ತಮ್ಮ ಮನೆ ಸಮೀಪದಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ. ಕಳೆದ 3 ತಿಂಗಳ ಹಿಂದೆ ಆರೋಪಿ ಪ್ರದೀಪ್ ಇವರ ಅಂಗಡಿಗೆ ಬಂದು ತಾನು ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. ಅಂಗಡಿಯ ಒಂದು ಭಾಗವನ್ನು ಬಾಡಿಗೆಗೆ ಕೊಟ್ಟರೆ ಅಮೆಜಾನ್ ಕಂಪನಿಯವರ ಹತ್ತಿರದಲ್ಲಿ ಡೆಲಿವರಿ ಕೊಡಬೇಕಾದ ಎಲ್ಲ ವಸ್ತುಗಳನ್ನು ಅಲ್ಲಿ ಇಟ್ಟುಕೊಳ್ಳುತ್ತೇವೆ. ಇದಕ್ಕೆ ಒಳ್ಳೆಯ ಬಾಡಿಗೆ ಕೊಡುತ್ತೇವೆ ಎಂದು ನಂಬಿಸಿದ್ದ.

    ಇದನ್ನೂ ಓದಿ: ಹ್ಯಾಕರ್​ ಶ್ರೀಕಿ ಬಂಧನ ಆಗುವವರೆಗೂ ಇಷ್ಟು ಬುದ್ಧಿವಂತರಿದ್ದಾರೆ ಅನ್ನೋದೇ ಗೊತ್ತಿರಲಿಲ್ಲ: ಗೃಹಸಚಿವ

    ಅಮೆಜಾನ್ ಕಂಪನಿಗೆ ಅಂಗಡಿ ಜಾಗ ಬಾಡಿಗೆಗೆ ನೀಡಲು ಅಂಗಡಿ ಮಾಲೀಕರು ಒಪ್ಪಿದ್ದರು. ಇದಕ್ಕಾಗಿ ಅಂಗಡಿಯ ರಿಜಿಸ್ಟ್ರೇಷನ್ ದಾಖಲೆ, ಅಂಗಡಿಯ ಮಾಲಿಕರ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡನ್ನು ಕೊಡುವಂತೆ ಆರೋಪಿ ಕೇಳಿದ್ದ. ಅಂಗಡಿ ಮಾಲೀಕರು ಆತನನ್ನು ನಂಬಿ ಎಲ್ಲ ದಾಖಲೆಗಳನ್ನೂ ನೀಡಿದ್ದರು. ಮೊಬೈಲ್ ಫೋನ್‌ನಲ್ಲಿ ಅಮೆಜಾನ್ ಆ್ಯಪ್​ ಇನ್‌ಸ್ಟಾಲ್ ಮಾಡಿ, ಇವುಗಳನ್ನೆಲ್ಲ ಅಪ್‌ಲೋಡ್ ಮಾಡಿ ಬಾಡಿಗೆ ಬರುವ ಹಾಗೆ ಮಾಡುತ್ತೇನೆ ಎಂದು ಹೇಳಿ ಮೊಬೈಲ್​ಫೋನ್​ ಪಡೆದಿದ್ದ.

    ಇದನ್ನೂ ಓದಿ: ಕಾರೊಳಗೇ ಯುವತಿ ಮೇಲೆ ಅತ್ಯಾಚಾರವೆಸಗಿದ ಶೋಕಿವಾಲಾ..!?

    ಆರೋಪಿ ಪ್ರದೀಪ್ ಮೊಬೈಲ್​​ಫೋನ್​ನಲ್ಲಿ ಪೋಸ್ಟ್ ಪೇ ಎಂಬ ಆ್ಯಪ್​ ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿ ಅಂಗಡಿ ಮಾಲೀಕರ ಹೆಸರು ರಿಜಿಸ್ಟರ್ ಮಾಡಿದ್ದ. ಅವರ ಹೆಸರಿನಲ್ಲೇ ಲೋನ್‌ಗೆ ಅಪ್ಲೈ ಮಾಡಿ 40 ಸಾವಿರ ರೂಪಾಯಿಯನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದ. ಇಷ್ಟಕ್ಕೆ ಸುಮ್ಮನಾಗದೆ, ಅವರ ಮೊಬೈಲ್​ಫೋನ್​ನಲ್ಲಿ ಪೇಟಿಎಮ್ ಆ್ಯಪ್​ ಇರುವುದನ್ನು ಕಂಡು, ಅದರಿಂದಲೂ 9 ಸಾವಿರ ರೂ.ನ್ನು ಸಾಲವಾಗಿ ಪಡೆದು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ನಂತರ ತಾನು ಇನ್‌ಸ್ಟಾಲ್ ಮಾಡಿದ್ದ ಪೋಸ್ಟ್ ಪೇ ಆ್ಯಪ್​ ಡಿಲೀಟ್ ಮಾಡಿ ಅಂಗಡಿ ಮಾಲೀಕರಿಗೆ ಮೊಬೈಲ್​ಫೋನ್​ ಹಿಂದಿರುಗಿಸಿ ಪರಾರಿಯಾಗಿದ್ದ.

    ಇದನ್ನೂ ಓದಿ: ವಿದೇಶದಲ್ಲಿ ಸದ್ ಮಾಡ್ತಿದಾರೆ ಸಿದ್: ಆಸ್ಟ್ರೇಲಿಯನ್​ ಸಿನಿಮಾಗೆ ಕನ್ನಡಿಗನ ಸಂಗೀತ ನಿರ್ದೇಶನ

    ಸಾಲ ಪಾವತಿಸುವಂತೆ ಒತ್ತಾಯ: 2 ತಿಂಗಳ ನಂತರ ಅಂಗಡಿ ಮಾಲೀಕರಿಗೆ ಪೋಸ್ಟ್ ಪೇ ಅಪ್ಲಿಕೇಷನ್ ಹಾಗೂ ಪೇಟಿಎಮ್ ಅಪ್ಲಿಕೇಷನ್ ಕಡೆಯಿಂದ ಸಾಲ ಮರು ಪಾವತಿಸುವಂತೆ ಕರೆ ಬಂದಿತ್ತು. ನಾನು ಯಾವ ಸಾಲವನ್ನೂ ಮಾಡಿಲ್ಲವೆಂದು ತಿಳಿಸಿದರೂ, ಅಂಗಡಿ ಮಾಲೀಕರ ಮನೆಗೆ ಹಣ ಪಾವತಿಸುವಂತೆ ನೊಟೀಸ್ ಬಂದಿತ್ತು. ಆಗ ಎಚ್ಚೆತ್ತುಕೊಂಡ ಅಂಗಡಿ ಮಾಲೀಕರು ಈ 2 ಅಪ್ಲಿಕೇಷನ್‌ನವರಿಂದ ಮಾಹಿತಿ ಪಡೆದಾಗ, ಆರೋಪಿ ಪ್ರದೀಪ್ ಮೋಸ ಮಾಡಿರುವ ಸಂಗತಿ ಇವರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಅಂಗಡಿ ಮಾಲೀಕರು ಡಿ.21ರಂದು ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಾಂತ್ರಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಪ್ರದೀಪ್​ನನ್ನು ವಿದ್ಯಾರಣ್ಯಪುರದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.

    ‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts