More

    ಪ್ರೀತಿಯಿಂದ ಮಾನನಷ್ಟ ಮೊಕದ್ದಮೆಯವರೆಗೆ: ಅಮೇಜಾನ್​ ಸಂಸ್ಥಾಪಕನ ಡಿಫರೆಂಟ್​ ಲವ್​ ಸ್ಟೋರಿ

    ಸ್ಯಾನ್ ಫ್ರಾನ್ಸಿಸ್ಕೋ: ಪ್ರಸಿದ್ಧ ಅಮೇಜಾನ್​ ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯಸ್ಥ ಜೆಫ್ ಬೆಜೋಸ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹಾಕಲಾಗಿದೆ. ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ನಂಬರ್​ 1 ಸ್ಥಾನದಲ್ಲಿರುವ ಜೆಫ್​ನ ವಿರುದ್ಧ ಹೀಗೊಂದು ಮೊಕದ್ದಮೆಯನ್ನು ಹೂಡಿರುವುದು ಆತನ ಗೆಳತಿಯ ಸ್ವಂತ ಅಣ್ಣನೇ ಎನ್ನುವುದು ವಿಚಿತ್ರ.

    ಜೆಫ್ ಬೆಜೋಸ್, ಲಾರೆನ್​ ಹೆಸರಿನ ಯುವತಿಯೊಂದಿಗೆ ಡೇಟಿಂಗ್​ ಮಾಡುತ್ತಿದ್ದರಂತೆ. ಹಾಗಂತ ಅಮೆರಿಕದ ನ್ಯಾಷನಲ್​ ಎನ್ಕೈರರ್​ (ಎನ್​.ಇ) ಪತ್ರಿಕೆ 2019ರ ಜನವರಿಯಲ್ಲಿ ವಿಶೇಷ ವರದಿಯನ್ನು ಮಾಡಿತ್ತು. ಜೆಫ್ ಬೆಜೋಸ್ ಮತ್ತು ಲಾರೆನ್​ ನಡುವೆ ರವಾನೆಯಾಗಿದ್ದ ಸಂದೇಶಗಳ ಸ್ಕ್ರೀನ್​ಶಾಟ್​ ಹಾಗೂ ಅವರಿಬ್ಬರು ಜತೆಗಿರುವ ಫೋಟೋಗಳನ್ನು ಸಹ ಎನ್​.ಇ. ಬಹಿರಂಗಪಡಿಸಿತ್ತು. ಇದರಿಂದಾಗಿ ನನಗೆ ಸಮಾಜದಲ್ಲಿ ಮಾನ ಹೋಗಿದೆ. ಎಫ್​ಬಿಐ ಕೂಡ ದಾಳಿ ಮಾಡಿದೆ ಎಂದು ಲಾರೆನ್​ನ ಅಣ್ಣ ಮೈಕೆಲ್​ ಸ್ಯಾಂಚೆಸ್​ ದೂರು ದಾಖಲಿಸಿದ್ದಾರೆ.

    ಜೆಫ್​ ಬೆಜೋಸ್​ ಎನ್​.ಇ.ಗೆ ಸಂದೇಶಗಳ ಸ್ಕ್ರೀನ್​ಶಾಟ್​ ಮತ್ತು ಫೋಟೋಗಳನ್ನು ಮಾರಿದ್ದು, ಅವರಿಂದ 2,00,000 ಮಿಲಿಯನ್​ ಡಾಲರ್​ ಹಣ ಪಡೆದಿದ್ದಾನೆ ಎಂದು ಮೈಕೆಲ್​ ದೂರಿದ್ದಾನೆ. ಆದರೆ ಈ ಕುರಿತಾಗಿ ಜೆಫ್​ ಬೆಜೋಸ್​ ಮಾತ್ರ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

    ಒಂದು ವರ್ಷದ ಹಿಂದೆ ಪ್ರಕಟವಾಗಿದ್ದ ಜೆಫ್​ ಬೆಜೋಸ್​ ಲವ್​ ಸ್ಟೋರಿಗೆ ಕಳೆದ ವಾರ ಹೊಸದೊಂದು ಟ್ವಿಸ್ಟ್​ ಸಿಕ್ಕಿದೆ. ಲಾರೆನ್​ ತನ್ನ ಮತ್ತು ಜೆಫ್​ ನಡುವಿನ ಗುಪ್ತ ಸಂದೇಶಗಳನ್ನು ತನ್ನಣ್ಣನಿಗೆ ನೀಡಿದ್ದು, ಆತನೇ ಅದನ್ನು ಎನ್​.ಇ.ಗೆ ಮಾರಿದ್ದಾನೆ ಎಂದು ವಾಲ್​ ಸ್ಟ್ರೀಟ್ ಜರ್ನಲ್​​ ಪತ್ರಿಕೆ ಪ್ರಕಟಿಸಿದೆ. ಅದಕ್ಕೆ ಆತ ಸಾಕಷ್ಟು ಹಣ ಪಡೆದಿದ್ದಾನೆ. ಇದಕ್ಕೆ ಫೆಡರಲ್​ ಪ್ರಾಸಿಕ್ಯೂಟರ್ಗಗಳ ಬಳಿ ಪುರಾವೆಯೂ ಇವೆ ಎಂದು ಸಹ ಹೇಳಲಾಗಿದೆ.

    ಈ ರೀತಿಯ ಸುದ್ದಿಯೊಂದು ಹೊರ ಬೀಳುತ್ತಿದ್ದಂತೆಯೇ ಮೈಕೆಲ್​, ಜೆಫ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದಾನೆ. ಈ ವಿಚಾರವಾಗಿ ಲಾರೆನ್​ ತನ್ನ ಅಣ್ಣನ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾಳೆ ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts