More

    ಕೂಡ್ಲಿಗಿ ಪೊಲೀಸ್ ವಸತಿಗೃಹಕ್ಕೆ ಠಾಣೆ ಸ್ಥಳಾಂತರ

    ಕೂಡ್ಲಿಗಿ: ಪಟ್ಟಣದ ಅತಿ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಠಾಣೆಯನ್ನು ಪೊಲೀಸ್ ಕ್ವಾಟ್ರರ್ಸ್‌ನಲ್ಲಿರುವ ಸಿಪಿಐ ವಸತಿ ಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.


    ಸಂಪೂರ್ಣವಾಗಿ ಶಿಥಿಲಗೊಂಡ ಕಟ್ಟಡದಲ್ಲಿಯೇ ಠಾಣೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ ಕಟ್ಟಡ ಸ್ಥಳಾಂತರಕ್ಕೆ ಸಿಬ್ಬಂದಿ ವಿಜಯನಗರ ಎಸ್ಪಿ ಶ್ರೀಹರಿಬಾಬು ಗಮನಕ್ಕೆ ತಂದಿದ್ದರು. ತಕ್ಷಣವೇ ಸ್ಪಂದಿಸಿರುವ ಎಸ್ಪಿ, ಠಾಣೆಯನ್ನು ಸ್ಥಳಾಂತರಿಸಿದ್ದಾರೆ. ಮಳೆಗಾಲದಲ್ಲಿ ಹಳೇ ಕಟ್ಟಡ ಸೋರುತ್ತಿತ್ತು. ಛಾವಣಿ ಕೂಡ ಹಾಳಾಗಿತ್ತು. ಹೀಗಾಗಿ ಖುದ್ದು ಎಸ್ಪಿಯವರೇ ಭೇಟಿ ನೀಡಿ ಪರಿಶೀಲಿಸಿ, ಸಿಪಿಐ ವಸತಿ ಗೃಹದಲ್ಲಿ ಕಚೇರಿ ಆರಂಭಿಸಲು ಸೂಚಿಸಿದ್ದರು.

    ಇದನ್ನೂ ಓದಿ: ಉದ್ಘಾಟನೆಯಾದರೂ ಪೊಲೀಸ್ ವಸತಿಗೃಹಕ್ಕೆ ಬೀಗ

    ಈಗಿರುವ ಹಳೇ ಕಟ್ಟಡವನ್ನು ಕೆಡವಿ ಇಲಾಖೆಯ 30 ಸೆಂಟ್ಸ್ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು 4 ಕೋಟಿ ರೂ.ಗೂ ಹೆಚ್ಚಿನ ಅನುದಾನ ನೀಡಲು ಮನವಿ ಮಾಡಿದ್ದು, ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸಂಬಂಧಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಅನುದಾನ ನೀಡಲು ಸಮ್ಮತಿಸಿದ್ದಾರೆ. ಸ್ಥಳಾಂತರಗೊಂಡ ಈಗಿನ ಪೊಲೀಸ್ ಠಾಣೆಯನ್ನು 2 ಲಕ್ಷ ರೂ. ವೆಚ್ಚದಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯ ನಡೆಸಲಾಗಿದೆ ಎಂದು ಪಿಎಸ್‌ಐ ಧನಂಜಯ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts