More

    ಕೆಲಸ, ಆದಾಯವಿಲ್ಲದೇ ದೇಶದ ಅರ್ಧದಷ್ಟು ಜನ ತಿಂಗಳಿಗೂ ಹೆಚ್ಚು ಕಾಲ ಬದುಕಲಾರರು: ಸ್ಪೋಟಕ ವರದಿ ಬಹಿರಂಗ

    ನವದೆಹಲಿ: ಯಾವುದೇ ಕೆಲಸ ಹಾಗೂ ಆದಾಯವಿಲ್ಲದೇ ಉಳಿತಾಯ ಹಣ ಹಾಗೂ ಕುಟುಂಬದ ಬೆಂಬಲದಿಂದ ದೇಶದ ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಮಂದಿ ಒಂದು ತಿಂಗಳಿಗೂ ಅಧಿಕ ಕಾಲ ಬದುಕುಳಿಯಲು ಸಾಧ್ಯವಿಲ್ಲ ಎಂದು ವರದಿಯೊಂದು ಬಹಿರಂಗಪಡಿಸಿದೆ.

    ನಿರಂತರ ಲಾಕ್​ಡೌನ್​ನಿಂದಾಗಿ ಆರ್ಥಿಕ ಕುಸಿತ, ಉದ್ಯೋಗ ಕಡಿತಗೊಳ್ಳುತ್ತಿರುವುದು ಬಹುತೇಕ ಕುಟುಂಬಗಳ ಕಳವಳಕ್ಕೆ ಕಾರಣವಾಗಿದ್ದು, ಈ ಕಠಿಣ ಪರಿಸ್ಥಿತಿಯನ್ನು ಎಲ್ಲಿಯವರೆಗೆ ಹಿಡಿದಿಟ್ಟುಕೊಳ್ಳಬಹುದೆಂಬುದು ಹೊಸ ಸವಾಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಆನ್​ಲೈನ್​ ಶಿಕ್ಷಣ ರದ್ದು: ಶಾಲಾ ಶುಲ್ಕ ಹೆಚ್ಚಳಕ್ಕೂ ಬ್ರೇಕ್​ ಹಾಕಿದ ಸರ್ಕಾರ

    ಐಎಎನ್​ಎಸ್​ ಸಿ-ವೋಟರ್​ ಎಕನಾಮಿಕ ಬ್ಯಾಟರಿ ವೇವ್​ ಸರ್ವೇ ಪ್ರಕಾರ ಆದಾಯವಿಲ್ಲದೇ ಒಂದು ತಿಂಗಳಿಗೂ ಕಡಿಮೆ ಅವಧಿ ಬದುಕಿರಬಹುದು ಎಂದು ಶೇ. 28.2 ರಷ್ಟು ಪುರುಷರು ಹೇಳಿದರೆ, 20.7 ರಷ್ಟು ಪುರುಷರು ಒಂದು ತಿಂಗಳಿಗೂ ಅಧಿಕ ಕಾಲ ಉಳಿಯಬಹುದೆಂದು ತಿಳಿಸಿದ್ದಾರೆ. ಗಮನಾರ್ಹವೆಂದರೆ ಶೇ 10.7 ಮಂದಿ ಮಾತ್ರ ಯಾವುದೇ ಆದಾಯವಿಲ್ಲದೇ ಒಂದು ವರ್ಷಕ್ಕಿಂತಲೂ ಅಧಿಕ ಕಾಲ ಬದುಕಿರಬಹುದೆಂದು ಹೇಳಿದ್ದಾರೆ.

    ಶೇ. 10.2 ಮಂದಿ 2 ತಿಂಗಳು, ಶೇ. 8.3 ಮಂದಿ ಮೂರು ತಿಂಗಳು, ಶೇ. 9.7 4 ರಿಂದ 6 ತಿಂಗಳು ಮತ್ತು ಶೇ. 5.7 ಮಂದಿ ವರ್ಷಕ್ಕಿಂತಲೂ ಕಡಿಮೆ ಅವಧಿ ಬದುಕಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅಂಕಿ ಅಂಶಗಳಲ್ಲಿ ಹೆಚ್ಚಿನ ಮಂದಿ ಕೇವಲ 1 ತಿಂಗಳೊಳಗೆ ಮಾತ್ರ ಬದುಕಿರಬಹುದೆಂದು ಹೇಳಿರುವುದು ಚಿಂತೆಗೆ ಕಾರಣವಾಗಿದೆ. ಇದನ್ನೂ ಓದಿ: VIDEO| ವಿಮಾನ ಲ್ಯಾಂಡ್​ ಆಗುವ ಪ್ರಯತ್ನದಲ್ಲಿದ್ದಾಗ ಒಟ್ಟಿಗೆ ಬಡಿಯಿತು 3 ಸಿಡಿಲು: ಮುಂದಾಗಿದ್ದು ಅಚ್ಚರಿ…!

    ಈ ಸರ್ವೆಯು ಜೂನ್​ ಮೊದಲ ವಾರದ ಅಂಕಿಅಂಶ ಒಳಗೊಂಡಿದ್ದು, ಸುಮಾರು 500 ಲೋಕಸಭಾ ಕ್ಷೇತ್ರಗಳ 1,397 ಮಂದಿ ಸರ್ವೆಯಲ್ಲಿ ಒಳಗೊಂಡಿದ್ದಾರೆ. ವಾರಕ್ಕೊಮ್ಮೆ 1000 ಮಂದಿ ಸರ್ವೆಯಲ್ಲಿ ಹೊಸದಾಗಿ ಸೇರಿಕೊಳ್ಳುತ್ತಾರೆ. ಮಹಿಳೆಯರು ಸಹ ಸರ್ವೆಯಲ್ಲಿ ಒಳಗೊಂಡಿದ್ದು, ಪುರುಷರಂತೆಯೇ ಅಧಿಕ ಮಹಿಳೆಯರು ಸಹ ಒಂದು ತಿಂಗಳಿಗೂ ಹೆಚ್ಚು ಕಾಲ ಆದಾಯವಿಲ್ಲದೇ ಬದುಕಲಾರೆವು ಎಂದಿದ್ದಾರೆ.

    ಶೇ. 19.9 ರಷ್ಟು ಮಹಿಳೆಯರು ಉದ್ಯೋಗ ಹಾಗೂ ಆದಾಯವಿಲ್ಲದೇ ಒಂದು ತಿಂಗಳು ಸಹ ಬದುಕಲಾರೆವು ಎಂದರೆ, ಶೇ 28.4 ಮಂದಿ ಒಂದು ತಿಂಗಳಿಗೂ ಅಧಿಕ ಕಾಲ ಬದುಕಬಹುದು ಎಂದಿದ್ದಾರೆ. 11.5 ರಷ್ಟು ಮಂದಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬದುಕುಳಿಯಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೇ ತಿಂಗಳಲ್ಲಿ ಜಾಗತಿಕವಾಗಿ ಹೆಚ್ಚು ಡೌನ್​ಲೋಡ್​ ಆದ ಆ್ಯಪ್​ ಯಾವುದು? ಭಾರತವೇ ಮೊದಲು…!

    ಹಿರಿಯ ನಾಗರಿಕರು ತಮ್ಮ ಉಳಿತಾಯ ಹಣದಿಂದಾಗಿ ಆದಾಯವಿಲ್ಲದೆಯೂ ಹೆಚ್ಚು ಕಾಲ ಬದುಕಲಿದ್ದಾರೆ ಎಂದು ತಿಳಿದುಬಂದಿದೆ. 60 ವರ್ಷ ವಯೋಮಾನದವರಲ್ಲಿ ಶೇ. 19.2 ರಷ್ಟು ಮಂದಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬದುಕಬಹುದು ಎಂದಿದ್ದಾರೆ. ಬದುಕುಳಿಯುವಿಕೆಯ ಪ್ರಮಾಣ 25-40 ವಯೋಮಾನದವರಲ್ಲಿ ಕಡಿಮೆ ಇದ್ದು, ಶೇ 28.6 ಮಂದಿ ಆದಾಯವಿಲ್ಲದೇ ಒಂದು ತಿಂಗಳು ಸಹ ಉಳಿಯಲು ಸಾಧ್ಯವಿಲ್ಲ ಎಂದಿದ್ದಾರೆ.

    ಉನ್ನತ ಶಿಕ್ಷಣ ಮತ್ತು ಹೆಚ್ಚು ಆದಾಯ ಹೊಂದಿರುವ ಜನರ ಬದುಕುಳಿಯುವಿಕೆಯ ಪ್ರಮಾಣ ಅಧಿಕವಾಗಿದೆ. ಶೇ. 31.6 ಮಂದಿ ಒಂದು ವರ್ಷಕ್ಕೂ ಅಧಿಕ ಕಾಲ ಬದುಕಲಿದ್ದೇವೆ ಎಂದಿದ್ದಾರೆ. (ಏಜೆನ್ಸೀಸ್​)

    24 ಗಂಟೆಯಲ್ಲಿ ಬೆಂಗಳೂರು ನಗರದಲ್ಲೇ ಹೆಚ್ಚು ಕರೊನಾ ಪ್ರಕರಣ ದಾಖಲು; ರಾಮನಗರದಲ್ಲೂ 2 ಕೇಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts