More

    ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಕೈಪಿಡಿ ಬಿಡುಗಡೆ ಮಾಡಲು ಸೂಚನೆ

    ಬೆಂಗಳೂರು ವಿಶ್ವವಿದ್ಯಾಲಯಗಳ ಆಡಳಿತ, ಶೈಕ್ಷಣಿಕ ಚಟುವಟಿಕೆಗಳು, ಸಂಶೋಧನೆ ಮತ್ತು ಸೌಲಭ್ಯಗಳನ್ನು ಒಳಗೊಂಡ ನಿಖರ ಮತ್ತು ಸ್ಪಷ್ಟ ಮಾಹಿತಿಯನ್ನು ‘ಕೈಪಿಡಿ’ಯಾಗಿ ಮುದ್ರಿಸಿ ಕಳುಹಿಸುವಂತೆ ರಾಜ್ಯದ ಎಲ್ಲ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಪರಿಷತ್ತು ಸೂಚನೆ ನೀಡಿದೆ.

    ವಿಶ್ವವಿದ್ಯಾಲಯಗಳು ಈ ಕೈಪಿಡಿಯನ್ನು ಸರ್ಕಾರಕ್ಕೆ ಕಳುಹಿಸುವ ಜತೆಗೆ ತಮ್ಮ ವೆಬ್‌ಸೈಟ್‌ನಲ್ಲಿಯೂ ಅಪ್‌ಲೋಡ್ ಮಾಡಬೇಕು. ಇದರಿಂದ ವಿದ್ಯಾರ್ಥಿಗಳು, ಪಾಲಕರು ಮತ್ತು ಸರ್ಕಾರಕ್ಕೆ ಸರಿಯಾದ ಮಾಹಿತಿ ಲಭ್ಯವಾಗಲಿದೆ. ವಿದ್ಯಾರ್ಥಿಗಳ ಪ್ರವೇಶಕ್ಕೂ ಅನುಕೂಲವಾಗಲಿದೆ. ರಾಜ್ಯದಲ್ಲಿ 27 ಸಾರ್ವಜನಿಕ ವಿಶ್ವವಿದ್ಯಾಲಯಗಳಿದ್ದು, ಈ ಪೈಕಿ ಮೈಸೂಡು, ಕಲಬುರಗಿ ಸೇರಿ ಕೆಲವೇ ವಿವಿಗಳು ಮಾತ್ರ ಈ ಕೆಲಸ ಮಾಡುತ್ತಿವೆ. ಉಳಿದ ವಿವಿಗಳು ಕೂಡ ಈ ನಿಯಮವನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಸೂಚನೆ ನೀಡಿದೆ.

    ಇದರಿಂದಾಗುವ ಲಾಭಗಳೇನು?

    ವಿಶ್ವವಿದ್ಯಾಲಯದ ಮಾಹಿತಿಯನ್ನು ಕೈಪಿಡಿ ರೂಪದಲ್ಲಿ ಒಂದೇ ಕಡೆ ಮಾಹಿತಿ ನೀಡುವುದರಿಂದ ವಿಶ್ವವಿದ್ಯಾಲಯದ ಸಂಪೂರ್ಣ ಮಾಹಿತಿಯು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ತಿಳಿಯಬಹುದು.

    ವಿಶ್ವವಿದ್ಯಾಲಯದಲ್ಲಿ ಯಾವೆಲ್ಲ ಕೋರ್ಸ್‌ಗಳಿಗೆ, ವಿಷಯ ತಜ್ಞರು ಎಷ್ಟಿದ್ದಾರೆ, ಕಾಯಂ/ಅತಿಥಿ ಉಪನ್ಯಾಸಕರರು ಎಷ್ಟಿದ್ದಾರೆ, ಪುರುಷ/ಮಹಿಳಾ ಸಿಬ್ಬಂದಿ ಮಾಹಿತಿ, ಸಂಶೋಧನಾ ಕಾರ್ಯಗಳು, ನ್ಯಾಕ್‌ನಲ್ಲಿ ಪಡೆದಿರುವ ಗ್ರೇಡ್, ವಿದ್ಯಾರ್ಥಿಗಳ ಸಂಖ್ಯೆ, ತಾಂತ್ರಿಕವಾಗಿ ವಿವಿ ಯಲ್ಲಿರುವ ಸೌಲಭ್ಯಗಳು, ಆರ್ಥಿಕವಾಗಿ ವಿವಿ ಸ್ಥಿತಿಗತಿಗಳೇನು? ಎಂಬ ಸಂಪೂರ್ಣ ಮಾಹಿತಿ ಸಿಗಲಿದೆ. ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯಗಳಿಗೆ ದಾಖಲಾಗುವುದರಿಂದ ಏನೆಲ್ಲ ಲಾಭಗಳಿವೆ ಎಂಬ ಮಾಹಿತಿ ದೊರೆಯಲಿದೆ.

    ತಮ್ಮ ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದರಿಂದ ಗುಣಮಟ್ಟಕ್ಕೆ ಆದ್ಯತೆ ಕೂಡ ನೀಡಬಹುದಾಗಿದೆ. ಸಂಕ್ಷಿಪ್ತವಾಗಿ ಸರ್ಕಾರಕ್ಕೆ ಮಾಹಿತಿ ನೀಡುವುದರಿಂದ ವಿವಿಗಳ ಅಭಿವೃದ್ಧಿಯಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕೆಂಬುದು ಕೂಡ ಥಟ್ ಅಂತ ತಿಳಿಯಲಿದೆ ಎಂಬುದು ಪರಿಷತ್ತಿನ ಉದ್ದೇಶವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts