More

    ರೈತರ ವಿರುದ್ಧದ ಎಲ್ಲಾ ಕೇಸುಗಳು ರದ್ದು! ಚುನಾವಣೆ ಸಮಯಕ್ಕೆ ಮಹತ್ವದ ನಿರ್ಧಾರ!

    ಚಂಡೀಗಡ: ಪಕ್ಕದ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್​ಸಿಆರ್​)ನಲ್ಲಿ ವಾಯು ಗುಣಮಟ್ಟ ಕುಸಿತದಿಂದಾಗಿ ನಾಗರೀಕರು ಸಂಕಷ್ಟಕ್ಕೀಡಾಗಿರುವ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ಪಂಜಾಬ್​ ಸಿಎಂ ಚರಣಜಿತ್​ ಚನ್ನಿ ಅವರು, ರೈತರ ವಿಶ್ವಾಸ ಗೆಲ್ಲಲು ಪರಿಸ್ಥಿತಿಗೆ ವಿಪರೀತವಾದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಹೊಲದಲ್ಲಿ ಕೋಲುಗಳನ್ನು ಸುಟ್ಟ ಅಥವಾ ಕೃಷಿ ತ್ಯಾಜ್ಯಗಳನ್ನು ಸುಟ್ಟ ಆರೋಪದ ಮೇಲೆ ರಾಜ್ಯದ ರೈತರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್​ಐಆರ್​ಗಳನ್ನೂ ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ.

    ಇಂದು ಚಂಡೀಗಡದಲ್ಲಿ 32 ರೈತ ಸಂಘಟನೆಗಳ ಮುಖಂಡರೊಂದಿಗೆ ನಡೆಸಿದ ಸಭೆಯ ಬಳಿಕ ರೈತರ 18 ಬೇಡಿಕೆಗಳಲ್ಲಿ 17 ಬೇಡಿಕೆಗಳನ್ನು ಒಪ್ಪಿಕೊಂಡಿರುವುದಾಗಿ ಸಿಎಂ ಚನ್ನಿ ತಿಳಿಸಿದರು. “ರೈತರು ಹೊಲದಲ್ಲಿ ಕೋಲುಗಳನ್ನು ಸುಡುವುದನ್ನು ತಡೆಯಲು ನಾವು ಇಚ್ಛಿಸುತ್ತೇವೆ ಮತ್ತು ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಈವರೆಗೆ ಕೋಲು ಸುಡುವ ಸಂಬಂಧವಾಗಿ ಹಾಕಿರುವ ಎಫ್​ಐಆರ್​ಗಳನ್ನು ರದ್ದು ಮಾಡುತ್ತಿದ್ದೇವೆ. ಹೊಲದಲ್ಲಿ ಕೋಲು ಸುಡುಬಾರದೆಂದು ನಾನು ರೈತರಲ್ಲಿ ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರವೂ ರೈತರು ಈ ಕೆಲಸ ಮಾಡದಂತೆ ಕ್ರಮ ತೆಗೆದುಕೊಳ್ಳಬೇಕು” ಎಂದು ಅವರು ಹೇಳಿದರು.

    ಕೇಂದ್ರದ ಮೂರು ವಿವಾದಿತ ಕೃಷಿ ಕಾನೂನುಗಳ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈವರೆಗೂ ದಾಖಲಿಸಿರುವ ಅಪರಾಧ ಪ್ರಕರಣಗಳನ್ನೂ ಕೈಬಿಡುವುದಾಗಿ ಸಿಎಂ ಚನ್ನಿ ಘೋಷಿಸಿದ್ದಾರೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರದ ಈ ಘೋಷಣೆ ಮತದಾರರ ಓಲೈಕೆಗಾಗಿ ತೆಗೆದುಕೊಂಡ ಕ್ರಮ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)

    ಭಾರತದ ಬಗ್ಗೆ ಅಮೆರಿಕದಲ್ಲಿ ‘ವಿಡಂಬನೆ’ ಮಾಡಿದ ಕಾಮೆಡಿಯನ್​​! ತರಾಟೆಗೆ ತೆಗೆದುಕೊಂಡ ನೆಟ್ಟಿಗರು

    ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್​! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts