More

    ಏಲಿಯನ್​ಗಳು ಮಾನವ ಸಂಪರ್ಕಕ್ಕೆ ಯತ್ನಿಸುತ್ತಿವೆ: ಖಗೋಳ ಭೌತಶಾಸ್ತ್ರಜ್ಞ ಕೊಟ್ಟ ಸ್ಫೋಟಕ ಕಾರಣ ಹೀಗಿದೆ…

    ನವದೆಹಲಿ: ನಾಸಾದಂತಹ ಅನೇಕ ಬಾಹ್ಯಾಕಾಶ ಸಂಸ್ಥೆಗಳು ಭೂಮಿಯಿಂದಾಚೆಗಿನ ಜೀವ ಜಗತ್ತಿನ ಕುರುಹು ಪತ್ತೆ ಮಾಡುವಲ್ಲಿ ಪ್ರಯತ್ನ ಮಾಡುತ್ತಿವೆ. ವಿಶ್ವದಲ್ಲಿ ಮಾನವರ ಇರುವಿಕೆಯನ್ನು ತಿಳಿಸಲು ಅನೇಕ ರೆಡಿಯೋ ಸಿಗ್ನಲ್​ಗಳನ್ನು ಮನುಷ್ಯ ಪ್ರಸಾರ ಮಾಡಿದರೂ ಸಹ, ಅನ್ಯಗ್ರಹ ಜೀವಿಗಳಾದ ಏಲಿಯನ್​ಗಳು ಇವೆ ಎಂದು ದೃಢೀಕರಿಸುವ ಯಾವುದೇ ಪುರಾವೆಯನ್ನು ಪತ್ತೆಹಚ್ಚುವಲ್ಲಿ ವಿಜ್ಞಾನಿಗಳು ಇನ್ನು ಯಶಸ್ಸು ಸಾಧಿಸಿಲ್ಲ.

    ಏಲಿಯನ್​ಗಳು ವಿಶ್ವದಲ್ಲಿ ಅಸ್ತಿತ್ವದಲ್ಲಿವೆ
    ಏಲಿಯನ್​ ಸಂಪರ್ಕ ಸಾಧಿಸಲು ಮಾನವ ಪ್ರಯತ್ನಿಸುತ್ತಿದ್ದು, ಅನ್ಯಗ್ರಹ ಜೀವಿಗಳು ಇರುವ ಬಗ್ಗೆ ಅನೇಕ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳಲ್ಲಿ ಬಲವಾದ ನಂಬಿಕೆ ಇದೆ. ಅಲ್ಲದೆ, ಏಲಿಯನ್​ಗಳು ಸಹ ನಮ್ಮನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿರಬಹುದು ಎಂದು ಖಗೋಳ ಭೌತಶಾಸ್ತ್ರಜ್ಞ ಮತ್ತು ಕೀಲೆ ವಿಶ್ವವಿದ್ಯಾಲಯದ ಕೀಲೆ ವೀಕ್ಷಣಾಲಯದ ನಿರ್ದೇಶಕ ಜಾಕೋ ವ್ಯಾನ್​ ಲೂನ್​ ಅವರು ಬರೆದ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿರಿ: ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

    ವ್ಯಾನ್​ ಲೂನ್​ ಪ್ರಕಾರ ಏಲಿಯನ್​ಗಳ ಅಸ್ತಿತ್ವವನ್ನು ತಳ್ಳಿಹಾಕುವಂತಿಲ್ಲ. ಭೂಮಿಯ ಮೇಲಿನ ಮಾನವರ ಉಪಸ್ಥಿತಿಯು, ಈ ದೈತ್ಯ ಬ್ರಹ್ಮಾಂಡದಲ್ಲಿ ಹೆಚ್ಚು ಸುಧಾರಿತ ಜೀವ ರೂಪಗಳು ಇರಬಹುದೆಂಬ ಬಲವಾದ ಸೂಚನೆಯಾಗಿದೆ ಎಂದಿದ್ದಾರೆ. ಭೂಮಿಯಲ್ಲಿರುವ ಜೀವರಾಶಿಯಂತೆ ಅನ್ಯಗ್ರಹಗಳಲ್ಲೂ ನಮಗಿಂತ ಹೆಚ್ಚು ಸುಧಾರಿತ ಜೀವಿಗಳು ಇವೆ ಎಂಬುದು ವ್ಯಾನ್​ ಲೂನ್​ ಅವರ ಅಭಿಪ್ರಾಯವಾಗಿದೆ.

    ಏಲಿಯನ್​ಗಳು ಅಸ್ತಿತ್ವದಲ್ಲಿ ಇವೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಏಕೆಂದರೆ ಈವರೆಗೂ ಅವುಗಳನ್ನು ನಾವು ನೋಡಿಲ್ಲ ಮತ್ತು ಪತ್ತೆಹಚ್ಚಿಲ್ಲ. ಅವು ಇವೆ ಎಂಬುದರ ಬಗ್ಗೆಯೂ ನಮಗೆ ತಿಳಿದಿಲ್ಲ. ಆದರೆ, ಒಂದು ಸರಳ ಕಾರಣದಿಂದ ಏಲಿಯನ್​ಗಳು ಇರಬಹುದೆಂದು ಹೇಳಬಹುದು. ಆ ಕಾರಣವೇ ನಮ್ಮ ಅಸ್ತಿತ್ವ.

    ಬ್ಯಾಕ್ಟೀರಿಯಾಗಳು ಭೂಮಿಯ ಮೇಲೆ ಬುದ್ಧಿವಂತ ಮಿದುಳುಗಳನ್ನು ಹೊಂದಿರುವ ಸಂಕೀರ್ಣ ದೇಹಗಳಾಗಿ ವಿಕಸನಗೊಂಡಿರುವಂತೆಯೇ ಮತ್ತೊಂದು ಗ್ರಹದಲ್ಲಿಯೂ ಸಂಭವಿಸಿರಬಹುದು ಎಂದು ವ್ಯಾನ್ ಲೂನ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

    ಇದನ್ನೂ ಓದಿರಿ: ಇದಪ್ಪಾ ಅದೃಷ್ಟ ಅಂದ್ರೆ! ರಾತ್ರೋರಾತ್ರಿ 7 ಕೋಟಿ ರೂ. ಒಡೆಯನಾದ ಕೇರಳಿಗ..!

    ಏಲಿಯನ್​ಗಳು ನಮ್ಮನ್ನು ಸಂಪರ್ಕಿಸುಲು ಪ್ರಯತ್ನಿಸುತ್ತಿವೆಯೇ?
    ಏಲಿಯನ್​ಗಳು ಉಪಸ್ಥಿತಿ ನಿಜವೇ ಆದರೆ, ಅವುಗಳು ಸಹ ಕುತೂಹಲಕ್ಕಾಗಿ ನಮ್ಮನ್ನು ಸಂಪರ್ಕಿಸಲು ಯತ್ನಿಸುತ್ತಿರುತ್ತವೆ. ನಮ್ಮಲ್ಲಿರುವ ಅದೇ ಮನಸ್ಸಿನ ಕುತೂಹಲವೇ ಅನ್ಯಗ್ರಹ ಜೀವಿಗಳ ಹುಡುಕಾಟದ ಫಲಿತಾಂಶವಾಗಿದೆ. ಏಲಿಯನಗಳಿದ್ದರೆ, ಅವು ಸಹ ನಮ್ಮಂತೆಯೇ ಸಂಪರ್ಕ ಸಾಧಿಸಲು ಬಯಸುತ್ತವೆ. ಭೂಮಿಯ ಮೇಲಿನ ವಿಜ್ಞಾನಿಗಳು ಅನ್ಯಗ್ರಹ ಜೀವಿಗಳನ್ನು ಹುಡುಕಲು ಒಂದು ಕಾರಣವೆಂದರೆ ನಮ್ಮಲ್ಲಿರುವ ಕುತೂಹಲ. ಆದರೆ, ನಾವು ಇತರರನ್ನು ಸಂಪರ್ಕಿಸಲು ಬಯಸುವ ಇತರ ಕಾರಣಗಳಿವೆ. ನಮಗೆ ಕೆಲವೊಮ್ಮೆ ಇತರರಿಂದ ಸಹಾಯ ಬೇಕಾಗುತ್ತದೆ, ಅಥವಾ ಒಡನಾಟ ಬೇಕಾಗುತ್ತದೆ. ಬಹುಶಃ ಅನ್ಯಗ್ರಹ ಜೀವಿಗಳು ಸಹ ಸಹಾಯ ಅಥವಾ ಸ್ನೇಹಕ್ಕಾಗಿ ನಮ್ಮನ್ನು ಎದುರು ನೋಡುತ್ತಾರೆ ಎಂದು ವ್ಯಾನ್​ ಲೂನ್​ ಹೇಳಿದ್ದಾರೆ.

    ನಮ್ಮ ನೀಲಿ ಗ್ರಹವು ಜೀವನ ನಡೆಸಲು ಪರಿಪೂರ್ಣ ಪರಿಸ್ಥಿತಿಗಳನ್ನು ಹೊಂದಿರುವುದರಿಂದ ಅನ್ಯಗ್ರಹ ಜೀವಿಗಳು ಭೂಮಿಯ ಬಗ್ಗೆ ಆಸಕ್ತಿ ಹೊಂದಿರಬಹುದು ಎಂದು ವ್ಯಾನ್ ಲೂನ್ ಸೂಚಿಸಿದ್ದಾರೆ. ಅವರ ಪ್ರಕಾರ, ಏಲಿಯನ್​ಗಳು ತಮ್ಮ ಗ್ರಹವು ವಾಸಯೋಗ್ಯವಾಗದಿದ್ದರೆ ಭೂಮಿಗೆ ಭೇಟಿ ನೀಡಬಹುದು ಎಂದಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿರಿ: ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

    ಗಂಡನನ್ನು ಬಿಡಲು ಇಷ್ಟವಿಲ್ಲ ಆದ್ರೆ ಬೇರೆಯವರ ಜತೆ ಮಲಗಲು ಮನಸ್ಸು ಬಯಸುತ್ತಿದೆ ಏನು ಮಾಡಲಿ?

    ಈ ಹುಡುಗನಿಗಾಗಿ ಲಂಡನ್​ ತೊರೆದು ಕಾಡಿನಲ್ಲಿರುವ ಬೆತ್ತಲೆ ಯೋಗ ಶಿಕ್ಷಕಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    15ರ ವಿದ್ಯಾರ್ಥಿ ಜತೆ 35ರ ಶಿಕ್ಷಕಿಯ ಸರಸ: ಇಬ್ಬರ ನಡುವಿನ ಸೆಕ್ಸ್​ ಚಾಟ್​ ಬಹಿರಂಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts