More

    ಮನಸು-ಕಾಯ ಸದೃಢಗೊಳಿಸುವ ಕ್ರೀಡೆ ಆದ್ಯತೆಯಾಗಲಿ

    ಅಳವಂಡಿ: ಯುವಕರು ಓದಿನ ಜತೆಗೆ ಮನಸು ಮತ್ತು ಕಾಯವನ್ನು ಸದೃಢಗೊಳಿಸುವ ಕ್ರೀಡೆಗೂ ಆದ್ಯತೆ ನೀಡಬೇಕು ಎಂದು ಸಿದ್ದೇಶ್ವರ ಮಠದ ಶ್ರೀ ಶ್ರಮರುಳಾರಾಧ್ಯ ಶಿವಾಚಾರ್ಯರು ತಿಳಿಸಿದರು.

    ಗ್ರಾಮದಲ್ಲಿ 2010ನೇ ಸಾಲಿನ ಎಸ್ಸೆಸ್ಸೆಲ್ಸಿ ಗೆಳೆಯರ ಬಳಗದಿಂದ ನಡೆದ ಅಳವಂಡಿ ಪ್ರಿಮಿಯರ್ (ಎಪಿಎಲ್) ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಗುರುವಾರ ಮಾತನಾಡಿದರು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಎರಡನ್ನೂ ಸಮನಾಗಿ ಸ್ವಕರಿಸಬೇಕೆಂದು ಸಲಹೆ ನೀಡಿದರು.

    ಪಂದ್ಯಾವಳಿಯಲ್ಲಿ ಅಳವಂಡಿ ಕೇಸರಿ ಬಾಯ್ಸ ತಂಡ ಪ್ರಥಮ ಸ್ಥಾನ, ಅಳವಂಡಿ ಲಯನ್ಸ್ ತಂಡ ದ್ವಿತೀಯ, ಡೆವಿಲ್ಸ್ ಅಳವಂಡಿ ತಂಡ ತೃತೀಯ ಸ್ಥಾನ ಪಡೆದುಕೊಂಡವು.

    ಇದನ್ನೂ ಓದಿ: ಚುನಾವಣೆ ಮುಗಿಯುವವರೆಗೂ ರಾಜಕೀಯ ಪ್ರೇರಿತ ಕ್ರಿಕೆಟ್​ ಟೂರ್ನಮೆಂಟ್​​ಗಳಿಗೆ ನಿಷೇಧ; ಪಂದ್ಯಾವಳಿ ನಡೆಸಿದ್ರೆ ಕೇಸ್​!

    ಪ್ರಮುಖರಾದ ಬಸವರಾಜ ತಳಕಲ್, ಉಮೇಶಗೌಡ, ಕಾಂತು ಸರ್, ವಸಂತರಡ್ಡಿ, ಬಿ.ಎಸ್.ತೊಂಡಿಹಾಳ, ಶ್ರೀಶೈಲಪ್ಪ, ದಾದು, ಅಶೋಕ, ಸುಭಾಷ್‌ರಡ್ಡಿ, ಹನುಮರಡ್ಡಿ, ದೇವಪ್ಪ, ಮೈಲಾರಪ್ಪ, ಮಾರುತಿ, ಸತೀಶ, ಜಗದೀಶ, ನೀಲಪ್ಪ, ವಿರೂಪಾಕ್ಷಗೌಡ, ಸಂತೋಷ, ಸುಭಾಷ, ಪರಶು, ಇಸ್ಮಾಯಿಲ್, ನಾಗು, ಸಚಿನರಡ್ಡಿ, ಮೈಲಾರಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts