More

    ಸೌಹಾರ್ದತೆ ಮೌಲ್ಯವನ್ನು ಕ್ರೀಡೆ ಕಲಿಸುತ್ತದೆ


    ಕೊಡಗು : ಸಮಗ್ರತೆ ಮತ್ತು ಸೌಹಾರ್ದತೆಯ ಮೌಲ್ಯಗಳನ್ನು ಕ್ರೀಡೆ ಕಲಿಸುತ್ತದೆ ಎಂದು ಕೂಡಿಗೆ ಸೈನಿಕ ಶಾಲೆಯ ಪ್ರಭಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್ ಎಂದರು.


    ಕೊಡಗಿನ ಕೂಡಿಗೆ ಸೈನಿಕ ಶಾಲೆಯಲ್ಲಿ ಶನಿವಾರ 2024-25 ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ ಫುಟ್‌ಬಾಲ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


    ಕ್ರೀಡಾಕೂಟದ ಅಂತಿಮ ಘಟ್ಟದವರೆಗೂ ಕೌಶಲ, ಸಾಂಘಿಕ ಹೋರಾಟ ಮತ್ತು ಕ್ರೀಡಾ ಮನೋಭಾವವನ್ನು ಉತ್ಸಾಹದಿಂದ ಪ್ರದರ್ಶನ ಮಾಡಿದ ಎಲ್ಲ ತಂಡಗಳಿಗೆ ಅಭಿನಂದನೆ ಸಲ್ಲಿಸಿದರು. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಶರಣ ಬಸು ನೇತೃತ್ವದಲ್ಲಿ ಪಥಸಂಚಲನ ನಡೆಸಿಕೊಟ್ಟರು.


    ಸೈನಿಕ ಶಾಲೆ ಕಲಿಕಿರಿ, ಕಜಕೂಟಂ ಮತ್ತು ಅಮರಾವತಿ ನಗರ ತಂಡಗಳು ಚಾಂಪಿಯನ್ ತಂಡಗಳಾಗಿ ಹೊರಹೊಮ್ಮಿದವು. ವಿದ್ಯಾರ್ಥಿನಿಯರ ತಂಡದಿಂದ ಸೈನಿಕ ಶಾಲೆ ಕಲಿಕಿರಿಯ ಕೆಡೆಟ್ ಎಂ.ಜಿ.ದೀಕ್ಷಿತಾ, ಕಿರಿಯರ ವಿಭಾಗದಿಂದ ಸೈನಿಕ ಶಾಲೆ ಕಜಕೂಟಂನ ಕೆಡೆಟ್ ಕೃಷ್ಣಕಾಂತ್ ಹಾಗೂ ಉಪ ಕಿರಿಯರ ತಂಡದಿಂದ ಸೈನಿಕ ಶಾಲೆ ಅಮರಾವತಿ ನಗರದ ಕಡೆಟ್ ಎಂ.ಪಿ.ದೀಪಕ್ ಅತ್ಯುತ್ತಮ ಆಟಗಾರರಾಗಿ ಆಯ್ಕೆಯಾದರು. ಕೂಡಿಗೆ ಸೈನಿಕ ಶಾಲೆಯ ಹಿರಿಯ ಶಿಕ್ಷಕ ವಿಬಿನ್ ಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts