More

    ಮಾಯಾವತಿ ಜತೆಗೆ ಮೈತ್ರೀನಾ… !- ಅಖಿಲೇಶ್ ಯಾದವ್ ನೀಡಿದ ಉತ್ತರ ಹೀಗಿದೆ ನೋಡಿ..

    ಇಟಾವಾ : ನಮೋ ಹವಾ ಎದುರಿಸುವುದಕ್ಕೆ ಮೈತ್ರಿ ಅನಿವಾರ್ಯ ಎಂಬ ಲೆಕ್ಕಾಚಾರದೊಂದಿಗೆ ಉತ್ತರ ಪ್ರದೇಶದ ಮಾಜಿ ಸಿಎಂ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಚುನಾವಣಾಪೂರ್ವ ಮೈತ್ರಿ ಬಗ್ಗೆ ಚಿಂತನೆ ನಡೆಸಿದ್ದಾರೆ. ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ 2022ರಲ್ಲಿ ನಡೆಯಲಿದ್ದು, ಈ ಬಗ್ಗೆ ಸುಳಿವು ನೀಡಿದ್ದಾರೆ. ವಿಶೇಷವಾಗಿ ಶಿವಪಾಲ್ ಯಾದವ್ ಅವರ ಪ್ರಗತಿಶೀಲ್ ಸಮಾಜವಾದಿ ಪಾರ್ಟಿ ಜತೆಗೆ ಮೈತ್ರಿ ಮಾಡಿಕೊಂಡು, ಸರ್ಕಾರ ರಚನೆಯಾದರೆ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ ಪ್ರಸ್ತಾಪವಾಗಿದೆ.

    ಸುದ್ದಿಗಾರರ ಜತೆಗೆ ಮಾತನಾಡಿದ ಅಖಿಲೇಶ್ ಯಾದವ್, ಮುಂದಿನ ಚುನಾವಣೆಯಲ್ಲಿ ಅಂಕಲ್ ಶಿವಪಾಲ್ ಯಾದವ್ ಅವರ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಅವರ ಕ್ಷೇತ್ರ ಜಸವಂತನಗರ್ ಆಗಿದ್ದು, ಅದನ್ನು ಪಕ್ಷ ಅವರಿಗೆ ಬಿಟ್ಟುಕೊಟ್ಟಿದೆ. ಸರ್ಕಾರ ರಚನೆಯಾದರೆ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಮಾಡಿಕೊಳ್ಳಲಾಗುವುದು. ಇದಕ್ಕಿಂತ ಹೆಚ್ಚಿನ ಹೊಂದಾಣಿಕೆಯ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.

    ಇದನ್ನೂ ಓದಿ: ಸಾರಿಗೆ ನೌಕರರಿಗೆ ಸಂಬಳ: ಸಚಿವ ಲಕ್ಷ್ಮಣ್​ ಸವದಿ ಶಾಕಿಂಗ್​ ಹೇಳಿಕೆ..!

    ಮಾಯಾವತಿ ಅವರ ಬಹುಜನ ಸಮಾಜ ಪಕ್ಷದ ಜತೆಗೆ ಮೈತ್ರಿ ಏನಾದರೂ ಮಾಡಿಕೊಳ್ಳುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, ಯಾವುದೇ ಕಾರಣಕ್ಕೂ ದೊಡ್ಡ ಪಕ್ಷಗಳ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲಾಗದು. ಹೊಂದಾಣಿಕೆಗಳೇನಿದ್ದರೂ ಸಣ್ಣಪುಟ್ಟ ಪಕ್ಷಗಳೊಂದಿಗೆ ಮಾತ್ರ ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶದಲ್ಲಿ ಮಹಾಗಟಬಂಧನದೊಳಗೆ ತಾವಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

    ರೈಲ್ವೆ ಟ್ರ್ಯಾಕ್​ ಮೇಲೆ ಕಾರು ಚಲಾಯಿಸುವಾಗ 3 ಚಕ್ರ ಪಂಕ್ಚರ್: ಯುವತಿಗೆ ಕಾದಿತ್ತು ಮತ್ತೊಂದು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts