More

    ಬ್ರಾಹ್ಮಣರಿಗಾಗಿ ಅಭಿಯಾನ ಆರಂಭಿಸಲಿದೆ ಬಿಎಸ್​ಪಿ! ಬಿಜೆಪಿಗೆ ಬೇಡ, ನಮಗೇ ಮತ ನೀಡಿ ಎಂದ ಮಾಯಾವತಿ!

    ಲಖನೌ: ಉತ್ತರ ಪ್ರದೇಶದಲ್ಲಿ 2022ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ಬ್ರಾಹ್ಮಣರೊಂದಿಗೆ ಸಂಪರ್ಕ ಸಾಧಿಸಲು ಬಹುಜನ ಸಮಾಜವಾದಿ ಪಕ್ಷ (ಬಿಎಸ್​ಪಿ) ಮುಂದಾಗಿದೆ. ಅದಕ್ಕಾಗಿ ಅಯೋಧ್ಯೆಯಿಂದ ಅಭಿಯಾನ ಆರಂಭಿಸುವುದಾಗಿ ಪಕ್ಷದ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.

    ಅಯೋಧ್ಯೆಯಲ್ಲಿ ಜುಲೈ 23ರಂದು ಅಭಿಯಾನ ಆರಂಭಿಸಲಾಗುವುದು. ಈಗ ಆಡಳಿತದಲ್ಲಿರುವ ಬಿಜೆಪಿಗೆ ಮುಂದಿನ ವರ್ಷ ಬ್ರಾಹ್ಮಣರು ಮತ ನೀಡುವುದಿಲ್ಲ ಎಂದು ನಾನು ನಂಬಿದ್ದೇನೆ. ಬ್ರಾಹ್ಮಣ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ಹಿತಾಸಕ್ತಿಗಳನ್ನು ಉಳಿಸುವ ಭರವಸೆ ನೀಡಲು ಜುಲೈ 23 ರಂದು ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಎಸ್ಸಿ ಮಿಶ್ರಾ ಅವರ ನಾಯಕತ್ವದಲ್ಲಿ ಅಭಿಯಾನವನ್ನು ಅಯೋಧ್ಯೆಯಿಂದ ಪ್ರಾರಂಭಿಸಲಾಗುವುದು. ಬಿಎಸ್​ಪಿ ಆಳ್ವಿಕೆಯಲ್ಲಿ ಮಾತ್ರ ಅವರ ಹಿತಾಸಕ್ತಿಗಳು ಸುರಕ್ಷಿತವಾಗಿವೆ ಎಂದು ಮಾಯಾವತಿ ಹೇಳಿದ್ದಾರೆ.

    ಈ ತಿಂಗಳ ಆರಂಭದಲ್ಲಿ, ರಾಜ್ಯದಲ್ಲಿ ಗ್ರಾಮೀಣ ಚುನಾವಣೆಗೆ ಮುಂಚಿತವಾಗಿ ಹಿಂಸಾಚಾರದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಮಾಯಾವತಿ ವಾಗ್ದಾಳಿ ನಡೆಸಿದ್ದರು. ಚಂದೌಲಿ ಜಿಲ್ಲೆಯಲ್ಲಿ ದಲಿತರಿಗೆ ಸೇರಿದ ಮನೆಗಳು ನಾಶವಾಗುತ್ತಿವೆ ಎಂದು ಆರೋಪಿಸಿದ್ದರು. ರಾಜ್ಯದಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ, ಜಂಗಲ್ ರಾಜ್ ಅನ್ನು ಹೊರತುಪಡಿಸಿ ಯಾವುದೇ ಕಾನೂನು ಇಲ್ಲ. ಪಂಚಾಯತ್ ಚುನಾವಣೆಗಳಲ್ಲಿ ಅಸಂಖ್ಯಾತ ಜನರ ಮೇಲೆ ಹಿಂಸಾಚಾರ ಮತ್ತು ಲಖಿಂಪುರ್ ಖೇರಿಯ ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿರುವುದು ಬಹಳ ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಅವರ ಕಾನೂನು ಮತ್ತು ಪ್ರಜಾಪ್ರಭುತ್ವದ ನಿಯಮವೇ? ಇದು ಯೋಚಿಸಬೇಕಾದ ಸಂಗತಿಯಾಗಿದೆ ಎಂದು ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು. (ಏಜೆನ್ಸೀಸ್)

    ಬೆವರು ಬರಬಾರದೆಂದು ಆಪರೇಷನ್ ಮಾಡಿಸಿಕೊಂಡ ಮಾಡೆಲ್! 23 ವರ್ಷಕ್ಕೇ ಅಂತ್ಯವಾಯಿತು ಬದುಕು!

    ಕರೊನಾ ಗೆದ್ದ ಚೀನಾದಲ್ಲಿ ಮಂಕಿ ಬಿ ವೈರಸ್ ಪತ್ತೆ! ಶೇ. 70ಕ್ಕೂ ಹೆಚ್ಚಿದೆ ಈ ಸೋಂಕಿನ ಮರಣ ಪ್ರಮಾಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts