More

    ಚಿರು ಸರ್ಜಾ ಆ್ಯಂಡ್​ ಗ್ಯಾಂಗ್​; ಇವು ಬಾಲ್ಯದ ಹಸಿ ಹಸಿ ನೆನಪುಗಳು..

    ಬೆಂಗಳೂರು: ಚಿರಂಜೀವಿ ಸರ್ಜಾ ನಿಧನವಾಗಿ ಇಂದಿಗೆ ಏಳು ದಿನಗಳು ಕಳೆದವು. ಇಂದಿಗೂ ಅವರಿಲ್ಲ ಎಂಬುದನ್ನು ನಂಬಲು ಆಗದಿದ್ದರೂ, ಅವರ ಸಾವು ಮಾತ್ರ ಕಣ್ಣಿಗೆ ಕಟ್ಟಿದಂತಿದೆ. ಇಡೀ ಕುಟುಂಬ ದುಃಖದಲ್ಲಿ ಮುಳುಗಿದರೆ, ಚಿತ್ರರಂಗ ಪ್ರತಿಭಾವಂತ ಯುವನಟನನ್ನು ಕಳೆದುಕೊಂಡಿದೆ. ಕರುನಾಡು, ನೆಚ್ಚಿನ ನಟನನ್ನು ಮಿಸ್​ ಮಾಡಿಕೊಳ್ಳುತ್ತಿದೆ.

    ಇದನ್ನೂ ಓದಿ: ಅಣ್ಣನಿಲ್ಲದ ಮೇಲೆ …; ಚಿರು ನೆನೆದು ಧ್ರುವ ಭಾವುಕ ಪೋಸ್ಟ್!

    ಚಿರು ಸರ್ಜಾ ಆ್ಯಂಡ್​ ಗ್ಯಾಂಗ್​; ಇವು ಬಾಲ್ಯದ ಹಸಿ ಹಸಿ ನೆನಪುಗಳು..
    ಹೀಗಿರುವಾಗಲೇ ಅಣ್ಣನನ್ನು ಕಳೆದುಕೊಂಡಿರುವ ಧ್ರುವ, ನೀನಿಲ್ಲದೆ ಇರಲು ಆಗುತ್ತಿಲ್ಲ. ಬೇಗ ಬಂದು ಬಿಡು’ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹಳೇ ಫೋಟೋ ಶೇರ್​ ಮಾಡಿಕೊಂಡು ಭಾವುಕರಾಗಿದ್ದರು. ಸ್ನೇಹಿತರು, ಆಪ್ತರು ಚಿರುನನ್ನು ನೆನಪು ಮಾಡಿಕೊಂಡಿದ್ದಾರೆ. ಇದೀಗ ಅರ್ಜುನ್​ ಸರ್ಜಾ ಪುತ್ರಿ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದರು. ಅರ್ಜುನ್​ ಸರ್ಜಾ ಹಿರಿಯ ಪುತ್ರಿ ಐಶ್ವರ್ಯಾ ಸರ್ಜಾ, ಚಿರಂಜೀವಿ ಎಂದು ಬರೆದುಕೊಂಡು ಬ್ಲಾಕ್​ ಬಣ್ಣದ ಹಾರ್ಟ್​ ಎಮೋಜಿ ಹಾಕಿ ಹಳೇ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಪತ್ನಿ ಗರ್ಭಿಣಿ ಎಂದು ತಿಳಿದಾಗ ಚಿರು ಕೊಟ್ಟ ಉಡುಗೊರೆ ನೋಡಿ ಭಾವುಕರಾಗಿದ್ರು ಮೇಘನಾ: ಮಗು ವಿಚಾರದಲ್ಲೂ ಚಿರು ಆಸೆ ಹೀಗಿತ್ತು

    ಇನ್ನು ಸಾವಿಗೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ನಟ ಚಿರು ಸರ್ಜಾ, ಸೂರಜ್​ ಸರ್ಜಾ, ಧ್ರುವ ಸರ್ಜಾ ಒಟ್ಟಿಗೆ ಇರುವ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದರು. ಆ ಫೋಟೋ ಎಲ್ಲೆಡೆ ವೈರಲ್​ ಆಗುವುದರ ಜತೆಗೆ ತ್ರಿವಳಿ ಜೋಡಿಯ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದಿದ್ದವು. ಬಳಿಕ ಚಿರು ಸಾವಿನ ನಂತರ ಅದೇ ಫೋಟೋವನ್ನು ಸಂಬಂಧಿ ಸೂರಜ್​ ಸಹ ಹಂಚಿಕೊಂಡು ಚಿರು ಬಗ್ಗೆ ಭಾವುಕವಾಗಿ ಬರೆದುಕೊಂಡಿದ್ದರು. ಇದೀಗ ಐಶ್ವರ್ಯಾ ಸರ್ಜಾ ಏನೂ ಹೇಳದೆ, ಕೇವಲ ಬಾಲ್ಯದ ಫೋಟೋಗಳನ್ನಷ್ಟೇ ಪೋಸ್ಟ್​ ಮಾಡಿದ್ದಾರೆ.

    ಚಿರು ಸಾವಿನ ಬೆನ್ನಲ್ಲೇ ಅರ್ಜುನ್​ ಸರ್ಜಾ ಕಟ್ಟಿಸಿದ ಆಂಜನೇಯ ದೇವಸ್ಥಾನದ ಸ್ಥಿತಿ ಹೀಗಾಗಬಾರದಿತ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts