More

    ಮಗಳು ಗಂಡನನ್ನು ಬಿಟ್ಟು ಒಬ್ಬಂಟಿಯಾಗಿ ಬಂದ ಐಶ್ವರ್ಯಾ ರೈ; ಡಿವೋರ್ಸ್​​​ ಕೊಡಲಿದ್ದಾರೆ ಅಭಿಷೇಕ್​ ಬಚ್ಚನ್​-ಐಸ್ವರ್ಯ ರೈ..!

    ಅಭಿಷೇಕ್-ಐಶ್ವರ್ಯಾ ವಿಚ್ಛೇದನದ ಸುದ್ದಿ ಮತ್ತೊಮ್ಮೆ ಬಾಲಿವುಡ್​ನಲ್ಲಿ ಮತ್ತೆ ಹರಿದಾಡುತ್ತಿದೆ. ಈ ಹಿಂದೆಯೂ ಕೂಡಾ ಇವರಿಬ್ಬರೂ ವಿಚ್ಛೇದನ ನೀಡುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು. ಇದೀಗ ಮತ್ತೊಮ್ಮೆ ವಿಚ್ಛೇದನದ ಸುದ್ದಿ ವೈರಲ್ ಆಗಿದೆ. ಆದರೆ ಈ ವಿಚ್ಛೇದನದ ಸುದ್ದಿಗೆ ಕಾರಣವಿದೆ.


    ಇತ್ತೀಚೆಗೆ ಐಶ್ವರ್ಯಾ ಮತ್ತು ಅಭಿಷೇಕ್ ಯಾವುದೇ ಹೊರಗಿನ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಹೋದಲ್ಲೆಲ್ಲಾ ಜೋಡಿಯಾಗಿ ಕಾಣಿಸಿಕೊಳ್ಳುವ ಈ ಇಬ್ಬರು ಒಟ್ಟಿಗೆ ಕಾಣುತ್ತಿಲ್ಲ. ಮನೀಶ್ ಮಲ್ಹೋತ್ರಾ ನೀಡಿದ ದೀಪಾವಳಿ ಪಾರ್ಟಿಯಲ್ಲಿ ಐಶ್ವರ್ಯಾ ಮಿಂಚಿದ್ದರು.

    ವಿಷಯ ಏನೆಂದರೆ ಈ ಪಾರ್ಟಿಯಲ್ಲಿ ಅಭಿಷೇಕ್ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ಕಾಣಿಸಿಕೊಂಡಿರಲಿಲ್ಲ. ಐಶ್ವರ್ಯಾ ಸೋಲೋ ಎಂಟ್ರಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪಾರ್ಟಿಗೆ ಅಭಿಷೇಕ್ ಬಚ್ಚನ್ ಗೈರುಹಾಜರಾಗಿದ್ದಕ್ಕೆ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.


    ಜತೆಗೆ ಇವರಿಬ್ಬರೂ ಡಿವೋರ್ಸ್​​ ಕೊಡಲಿದ್ದಾರೆ ಎಂಬ ವದಂತಿಗಳೂ ಕೇಳಿ ಬರುತ್ತಿದ್ದು, ಇಬ್ಬರೂ ಒಟ್ಟಾಗಿ ಮನೀಶ್​​​ ಪಾರ್ಟಿಗೂ ಬಂದಿಲ್ಲ. ಬಾಲಿವುಡ್‌ನ ಅತ್ಯಂತ ಸುಂದರ ತಾರಾ ಜೋಡಿ ಎಂದು ಅಭಿಷೇಕ್-ಐಶ್ವರ್ಯಾ ಅವರನ್ನು ಪರಿಗಣಿಸಲಾಗಿದೆ.


    ಇತ್ತೀಚೆಗೆ ಇವರಿಬ್ಬರೂ ಒಟ್ಟಿಗೇ ಕಾಣಿಸಿಕೊಳ್ಳದೇ ಇರೋದು ಇವರಿಬ್ಬರ ಡಿವೋರ್ಸ್​​ ವಿಚಾರ ಮುನ್ನೆಲೆಗೆ ಬರೋಕೆ ಕಾರಣವಾಗಿದೆ.
    ಇವರಿಬ್ಬರು ಯಾವತ್ತೂ ಒಂಟಿಯಾಗಿ ಕಾಣಿಸಿಕೊಂಡಿಲ್ಲ.. ಹಾಗಾಗಿ ಇಬ್ಬರೂ ಡಿವೋರ್ಸ್​​ ನೀಡಲಿದ್ದಾರೆ ಎನ್ನಲಾಗುತ್ತಿದೆ.


    ಸದ್ಯ ಐಶ್ವರ್ಯ ಒಬ್ಬರೇ ಮನೀಶ್​​ ಪಾರ್ಟಿಗೆ ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಇದಕ್ಕೆ ನಾನಾ ಕಾಮೆಂಟ್​​ಗಳನ್ನು ಹಾಕುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts