More

    2026ಕ್ಕೆ ಬುಲೆಟ್​ ಟ್ರೇನ್ ಸಂಚಾರ ಆರಂಭ: ಮುಂಬೈ- ಅಹಮದಾಬಾದ್​ ನಡುವಿನ ಪಯಣ ಕೇವಲ 2 ಗಂಟೆ

    ಅಹಮದಾಬಾದ್: ಭಾರತದ ಮೊದಲ ಬುಲೆಟ್​ ಟ್ರೇನ್​ 2006ರಲ್ಲಿ ಸಂಚಾರ ಆರಂಭಿಸಲಿದೆ. ಮುಂಬೈ-ಅಹಮದಾಬಾದ್ ನಡುವಿನ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯ ನಿರ್ಮಾಣವು ಈಗ ತ್ವರಿತಗತಿಯಲ್ಲಿ ಸಾಗಿದೆ. ಈ ಯೋಜನೆಯ ಆರಂಭಿಕ ಹಂತವು 2026ರ ವೇಳೆಗೆ ಕಾರ್ಯಗತಗೊಳ್ಳುವ ನಿರೀಕ್ಷೆಯಿದೆ. ಒಟ್ಟಾರೆ ಈ ಯೋಜನೆಯನ್ನು 2028 ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

    ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಅಹಮದಾಬಾದ್‌ನ ಸಾಬರಮತಿ ಮಲ್ಟಿಮೋಡಲ್ ಸಾರಿಗೆ ಕೇಂದ್ರದಲ್ಲಿ ಭಾರತದ ಮೊದಲ ಬುಲೆಟ್ ರೈಲು ನಿಲ್ದಾಣದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 43 ಸೆಕೆಂಡ್‌ಗಳ ಕ್ಲಿಪ್ ಅನ್ನು ಕೆಲವು ದಿನಗಳ ಹಿಂದೆ ಎಕ್ಸ್‌ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

    ಭಾರತದ ಮೊದಲ ಬುಲೆಟ್ ರೈಲು ನಿಲ್ದಾಣವು ಆಧುನಿಕ ಇಂಜಿನಿಯರಿಂಗ್‌ನ ಅದ್ಭುತವಾಗಿದ್ದು, ಹೈಸ್ಪೀಡ್ ರೈಲು ಮೂಲಸೌಕರ್ಯದಲ್ಲಿ ದೇಶದ ಪ್ರಗತಿಯ ಸಂಕೇತವಾಗಿದೆ. ಅಹಮದಾಬಾದ್‌ನಲ್ಲಿರುವ ಈ ನಿಲ್ದಾಣವು ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್‌ಗೆ ಟರ್ಮಿನಲ್ ಆಗಿ ಕಾರ್ಯನಿರ್ವಹಿಸುತ್ತದೆ.

    ಈ ಹೈಸ್ಪೀಡ್ ರೈಲು ಟರ್ಮಿನಲ್ ನಿರ್ಮಿಸಲು ಅಹಮದಾಬಾದ್‌ನ ಸಾಬರಮತಿ ನಿಲ್ದಾಣವನ್ನು ಆಯ್ಕೆ ಮಾಡಲಾಗಿದೆ, ಇದು ಅಸ್ತಿತ್ವದಲ್ಲಿರುವ ಪ್ಲಾಟ್‌ಫಾರ್ಮ್‌ಗಳಾದ 10, 11 ಮತ್ತು 12 ರ ಮೇಲೆ ಪೂರ್ವ ಭಾಗದಲ್ಲಿ ನಿರ್ಮಿಸಲಾಗುತ್ತಿದೆ.

    ದೇಶದ ಮೊಟ್ಟಮೊದಲ ಬುಲೆಟ್ ಟ್ರೇನ್​ ಬಗ್ಗೆ ಕೆಲ ಪ್ರಮುಖ ಸಂಗತಿಗಳು ಇಲ್ಲಿವೆ.
    1) ಮುಂಬೈ ಮತ್ತು ಅಹಮದಾಬಾದ್‌ನ ನಡುವಿನ ಅಂತರವು 508 ಕಿಲೋ ಮೀಟರ್‌ ಆಗಿದೆ.
    2) ಈ ಯೋಜನೆಯು ಪೂರ್ಣಗೊಂಡ ನಂತರ ಸರಿಸುಮಾರು 2.07 ಗಂಟೆಗಳಲ್ಲಿ ಮುಂಬೈ ಮತ್ತು ಅಹಮದಾಬಾದ್​ ಈ ಎರಡು ಮೆಟ್ರೋಪಾಲಿಟನ್ ನಗರಗಳನ್ನು ಸಂಪರ್ಕಿಸುತ್ತದೆ,
    3) ಈ ರೈಲಿನ ಗರಿಷ್ಠ ವೇಗ ಪ್ರತಿ ಗಂಟೆಗೆ 350 ಕಿ.ಮೀ. ಇರಲಿದೆ.
    4). ನ್ಯಾಶನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಈ ಯೋಜನೆಯ ಜವಾಬ್ದಾರಿ ವಹಿಸಿಕೊಂಡಿದೆ,
    5) ಕಳೆದ ತಿಂಗಳವರೆಗೆ 230 ಕಿಮೀ ಅಂತರದ ಕಾಮಗಾರಿ ಪೂರ್ಣಗೊಂಡಿದೆ.
    6) ಈ ಯೋಜನೆಯನ್ನು 1.08 ಲಕ್ಷ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ
    7). ಇದನ್ನು ಸೆಪ್ಟೆಂಬರ್ 2017 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಂದಿನ ಜಪಾನ್​ ಪ್ರಧಾನಿ ಶಿಂಜೊ ಅಬೆ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು
    8) ಈ ಯೋಜನೆಗೆ ಕೇಂದ್ರ ಸರ್ಕಾರವು ಎನ್​ಎಚ್​ಎಸ್​ಆರ್​ಸಿಎಲ್​ಗೆ 10,000 ಕೋಟಿ ರೂ., ಗುಜರಾತ್ ಮತ್ತು ಮಹಾರಾಷ್ಟ್ರ ಸರ್ಕಾರಳು ತಲಾ 5,000 ಕೋಟಿ ರೂ. ವಂತಿಗೆ ನೀಡಿವೆ.
    9) ಉಳಿದ ವೆಚ್ಚವನ್ನು ಜಪಾನ್​ನಿಂದ .0.1 ಪ್ರತಿಶತ ಬಡ್ಡಿ ದರದೊಂದಿಗೆ ಸಾಲದ ಮೂಲಕ ಭರಿಸಲಾಗುತ್ತಿದೆ.
    10) ಈ ಯೋಜನೆಯ ಸಮಗ್ರವಾಗಿ 2028 ರ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

    ಹಳೆಯ ಪಿಂಚಣಿ ಯೋಜನೆ ಮರುಜಾರಿ ಮಾಡಿದರೆ ರಾಜ್ಯಗಳ ಗತಿ ಏನು?: ಆರ್​ಬಿಐ ವರದಿಯಲ್ಲಿ ಆತಂಕಕಾರಿ ಸಂಗತಿ

    ‘ಅಮಿತ್ ಶಾಗೆ ಇತಿಹಾಸ ತಿಳಿಯುತ್ತದೆ ಎಂದು ನಿರೀಕ್ಷಿಸಲಾಗದು: ನೆಹರು ವಿರುದ್ಧದ ವಾಗ್ದಾಳಿಗೆ ರಾಹುಲ್ ತಿರುಗೇಟು

    ಛತ್ತೀಸ್​ಗಢ, ಮಧ್ಯಪ್ರದೇಶದಂತೆ ರಾಜಸ್ಥಾನದಲ್ಲೂ ಕಾದಿದೆ ಅಚ್ಚರಿ: ಸಿಎಂ ಘೋಷಣೆಗೂ ಮುನ್ನ ಕುತೂಹಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts