More

    ಇಲ್ಲಿ ಪುನಃ ಭೂಕಂಪ; ಭಾರಿ ಸದ್ದಿಗೆ ಶಾಲೆಯಿಂದ ಹೊರಗೆ ಓಡೋಡಿ ಬಂದ ಮಕ್ಕಳು-ಶಿಕ್ಷಕರು!

    ವಿಜಯಪುರ: ಮೂರ್ನಾಲ್ಕು ದಿನಗಳ ಹಿಂದಷ್ಟೇ ಭೂಕಂಪವಾಗಿದ್ದ ಈ ಪ್ರದೇಶದಲ್ಲಿ ಇಂದು ಮತ್ತೆ ಭೂಕಂಪನವಾಗಿದ್ದು, ಭೂಮಿಯಿಂದ ಭಾರಿ ಸದ್ದು ಕೂಡ ಕೇಳಿಬಂದಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಹಲವೆಡೆ ಜನರಿಗೆ ಭೂಕಂಪನದ ಅನುಭವವಾಗಿದೆ.

    ಬಸವನ ಬಾಗೇವಾಡಿ ತಾಲೂಕಿನ ಮಸೂತಿ, ಮುಳವಾಡ ಸೇರಿ ಹಲವೆಡೆ ಇಂದು ಮಧ್ಯಾಹ್ನ 3.09 ನಿಮಿಷಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ಜತೆಗೆ ಭಾರಿ ಪ್ರಮಾಣದ ಸದ್ದು ಕೂಡ ಕೇಳಿಸಿದ್ದರಿಂದ ಜನರು ತಾವಿದ್ದ ಸ್ಥಳದಿಂದ ಹೊರಗೋಡಿ ಬಂದಿದ್ದಾರೆ.

    ಇದನ್ನೂ ಓದಿ: ಫೇಸ್​​ಬುಕ್​, ವಾಟ್ಸ್​​ಆ್ಯಪ್​, ಇನ್​ಸ್ಟಾಗ್ರಾಮ್​ ಸರ್ವರ್​ ಡೌನ್​​ನಿಂದ ಜಗತ್ತಿನ ಆರ್ಥಿಕತೆಗೆ ಒಂದು ಗಂಟೆಯಲ್ಲಾದ ನಷ್ಟವೆಷ್ಟು ಗೊತ್ತೇ?

    ಅದರಲ್ಲೂ ಮಸೂತಿಯಲ್ಲಿ ಭಾರಿ ಶಬ್ದಕ್ಕೆ ಬೆದರಿದ ಮಕ್ಕಳು ಹಾಗೂ ಶಿಕ್ಷಕರು ಒಂದೇ ಸಮನೆ ಶಾಲೆಯಿಂದ ಹೊರಗೆ ಓಡಿ ಬಂದಿದ್ದಾರೆ. ಮೊನ್ನೆ ಅಕ್ಟೋಬರ್ 1ರಂದು ಮಧ್ಯಾಹ್ನದ ವೇಳೆ ಮಸೂತಿ ಕೇಂದ್ರ ಬಿಂದುವಾಗಿ ಭೂಕಂಪವಾಗಿತ್ತು.

    ಇದನ್ನೂ ಓದಿ: ಐನೂರು ವರ್ಷದ ಸೊಸೆಯಂದಿರ ಬಾವಿಯಲ್ಲಿ ಈಜಲು ಹೋಗಿ ಸಾವಿಗೀಡಾದ ಬಾಲಕ!

    ಅಕ್ಟೋಬರ್ 1 ಮತ್ತು 2ರಂದು ಇದೇ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ, ಬಾಬಾನಗರ, ಕಳ್ಳಕವಟಗಿ, ಸೋಮದೇವರಹಟ್ಟಿ, ಘೊಣಸಗಿ, ಮಲಕನದೇವರಹಟ್ಟಿ, ಹುಬನೂರ, ಸಿದ್ದಾಪುರ ಕೆ. ಟಕ್ಕಳಕಿ ಭಾಗದಲ್ಲಿ ಭೂಮಿ ಕಂಪಿಸಿತ್ತು. ಸೆಪ್ಟೆಂಬರ್ 4ರಂದು ಕೂಡ ಇದೇ ಜಿಲ್ಲೆಯ ಕೆಲವೆಡೆ ಭೂಕಂಪ ಉಂಟಾಗಿತ್ತು.

    ‘ಮದ್ವೆಯಾಗಿ 2 ಮಕ್ಕಳಿರುವ ವ್ಯಕ್ತಿಯನ್ನು ನಾನು ವಿವಾಹವಾಗಿದ್ದೇ ತಪ್ಪು’ ಎಂದು ಬರೆದಿಟ್ಟು ಆತ್ಮಹತ್ಯೆ!

    ನಟ ಶಾರುಖ್​ ಖಾನ್​ ಪುತ್ರನ ಜತೆ ಮತ್ತಲ್ಲಿ ಸಿಕ್ಕಿಬಿದ್ದ ಆಕೆ ಯಾರು, ಎಲ್ಲಿಯವಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts