More

    ಹೊಸದುರ್ಗದಲ್ಲಿ ಮತ್ತೆ ಬಲವಂತದ ಮತಾಂತರ; ಮನೆಯಲ್ಲಿನ ದೇವರ ಫೋಟೋ ಹೊರಹಾಕಿಸಿ, ಚರ್ಚ್​​ಗೆ ಬರಲು ಒತ್ತಾಯ

    ಹೊಸದುರ್ಗ: ವಿಧಾನಸಭೆಯಲ್ಲಿ ತಿಂಗಳ ಹಿಂದೆ ಪ್ರತಿಧ್ವನಿಸಿದ್ದ ಬಲವಂತದ ಮತಾಂತರ ಪ್ರಕರಣ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಮತ್ತೆ ಸದ್ದು ಮಾಡಿದೆ. ಹಿಂದು ಧರ್ಮ ತೊರೆದವರನ್ನು ಮರಳಿ ಕರೆತರಲು ಶಾಸಕ ಗೂಳಿಹಟ್ಟಿ ಶೇಖರ್ ‘ಘರ್ ವಾಪ್ಸಿ’ ಆಯೋಜಿಸಿದ್ದರೂ ಮತಾಂತರ ನಿಂತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

    ಅದಕ್ಕೀಗ ಇಂಬು ಕೊಡುವಂತೆ ಶಾಸಕರ ಕ್ಷೇತ್ರದಲ್ಲಿ ಅವರದೇ ಸಮುದಾಯದ ಪೇಂಟರ್ ಶಾಂತಿನಗರದ ಮಂಜುನಾಥ್ ಎಂಬವರು ನಾನು ಬಲವಂತದ ಮತಾಂತರಕ್ಕೆ ಒಳಗಾಗಿದ್ದಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಹಿರಿಯೂರು ರಸ್ತೆಯಲ್ಲಿರುವ ಕಲವೇರಿ ಬೇತಲ್ ಚರ್ಚ್‌ನವರು ಹಾಗೂ ಮತಾಂತರಕ್ಕೆ ಯತ್ನಿಸಿದ ಮಂಜಮ್ಮ, ಭಾಗ್ಯಮ್ಮ, ರಮೇಶ ಹಾಗೂ ಮೋಹನಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ನನ್ನ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ನಮ್ಮ ಕುಟುಂಬದಿಂದ ಕೈತಪ್ಪಿ ಹೋಗುತ್ತಿದ್ದಾರೆ, ದಯವಿಟ್ಟು ಉಳಿಸಿಕೊಡಿ…

    ಪೇಂಟಿಂಗ್ ಕೆಲಸ ಮಾಡುತ್ತಿದ್ದ ಹೊಸದುರ್ಗ ತಾಲೂಕು ಮಾರಬಘಟ್ಟದ ಮಂಜುನಾಥ್ ತನ್ನ ಪತ್ನಿ, ಮೂವರು ಮಕ್ಕಳ ಜತೆ ಶಾಂತಿನಗರದಲ್ಲಿ ವಾಸವಿದ್ದರು. ‘ಕೆಲ ತಿಂಗಳ ಹಿಂದೆ ಮಕ್ಕಳಿಗೆ ಆರೋಗ್ಯ ಸರಿ ಇರಲಿಲ್ಲ. ಈ ವೇಳೆ ಪಕ್ಕದ ಮನೆಯಲ್ಲಿದ್ದ ಮಂಜಮ್ಮ, ಭಾಗ್ಯಮ್ಮ ಚರ್ಚ್‌ಗೆ ಬಂದರೆ ಆರೋಗ್ಯ ಸರಿಯಾಗುತ್ತದೆ ಎಂದು ನನ್ನ ಪತ್ನಿಗೆ ನಂಬಿಸಿದ್ದರು. ನಾನಿದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಆರೋಗ್ಯ, ಹಣಕಾಸು ಆಮಿಷ ತೋರಿಸಿ ಬಲವಂತದಿಂದ ಕರೆದೊಯ್ದಿದ್ದರು’ ಎಂದು ಮಂಜುನಾಥ್ ದೂರಿನಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮತಾಂತರವಾಗಿದ್ದವರ ಘರ್​ ವಾಪಸಿ; ಶಾಸಕ ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಶಿಲುಬೆ ತೆಗೆದಿಟ್ಟು ಕಂಕಣ ಕಟ್ಟಿಕೊಂಡು ವಾಪಸ್

    ಇದಾದ ಬಳಿಕ ಪ್ರತಿ ಭಾನುವಾರ ಚರ್ಚ್‌ಗೆ ಬರುವಂತೆ ಒತ್ತಾಯಿಸಿದರು. ಬರದಿದ್ದರೆ ತೊಂದರೆ ಆಗುತ್ತದೆ ಎಂದು ಹೆದರಿಸಿದರು. ಕ್ರಮೇಣ ದೇವರ ಪೋಟೋಗಳನ್ನು ಮನೆಯಿಂದ ಹೊರ ಹಾಕಿಸಿ ಚರ್ಚ್‌ನಲ್ಲಿ ಪ್ರಾರ್ಥನೆಗೆ ಒತ್ತಾಯಿಸಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಹಿಂದು ಧರ್ಮ ಬಿಡಲು ಮನಸ್ಸಿಲ್ಲದೆ ಕಡದಿನಕೆರೆ ಭೋವಿಹಟ್ಟಿಯಲ್ಲಿ ಇರುವ ಅತ್ತೆ ಮನೆಗೆ ಹೋಗಿ ವಾಸವಿದ್ದೆನಾದರೂ ಅಲ್ಲಿಗೆ ಬಂದ ರಮೇಶ ಹಾಗೂ ಮೋಹನ್ ಕುಮಾರ್ ಚರ್ಚ್‌ಗೆ ಬರುವಂತೆ ಬಲವಂತ ಮಾಡಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ಹಿಂದು ಧರ್ಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯದವರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಂಜುನಾಥ್ ಒತ್ತಾಯಿಸಿದ್ದಾರೆ.

    ಬೆಡ್​ ಕೇಳಿದ ನಟಿಗೆ ಸಿಕ್ಕಿದ್ದು ಅರ್ಧಮಂಚ; ಒಂದು ಕೊಟ್ಟು ಇನ್ನೊಂದು ಕೊಟ್ಟಿಲ್ಲ ಎಂದು ಬೇಸರ..

    ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts