More

    ಜೈಲಿನಿಂದ ಹೊರ ಬಂದ ನಂತರ ಹೆಂಡತಿಯ ಕತ್ತು ಸೀಳಿದ ಗಂಡ…

    ಬೆಂಗಳೂರು: ಪತ್ನಿ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಪತಿಯೊಬ್ಬ ಜೈಲಿನಿಂದ ಜೈಲಿನಿಂದ ಹೊರ ಬಂದ ನಂತರ ಪತ್ನಿ ಜತೆ ಪ್ರೀತಿ-ಪ್ರೇಮದ ನಾಟಕವಾಡಿ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಿರುವ ಭೀಕರ ಘಟನ ಬೆಂಗಳೂರಿನಲ್ಲಿ ನಡೆದಿದೆ.

    ಇದನ್ನೂ ಓದಿ: VIDEO| ಶಾಲಾ ಕಟ್ಟಡದಲ್ಲಿ ಸಿಲುಕಿದ್ದ 730 ವಿದ್ಯಾರ್ಥಿನಿಯರ ರಕ್ಷಣೆ

    ಬಲ್ವೀರ್ ಸಿಂಗ್ ಅಲಿಯಾಸ್ ಬಲ್ಲು ಈ ಕೃತ್ಯ ಎಸಗಿದ ವ್ಯಕ್ತಿಯಾಗಿದ್ದು ಅಗ್ರಹಾರ ದಾಸರಹಳ್ಳಿಯಲ್ಲಿ ವಾಸವಾಗಿದ್ದನು. ಆಗ್ರಾ ಮೂಲದ ಬಲ್ವೀರ್​ ಸಿಂಗ್, ಮದುವೆ ಮಂಟಪಗಳಿಗೆ ಪಾನ್ ಬೀಡಾ ಸರಬರಾಜು ಮಾಡುತ್ತಿದ್ದನು.

    ಘಟನೆ ಹಿನ್ನೆಲೆ:
    ಬಲ್ವೀರ್ ಸಿಂಗ್​​ನಿಗೆ ಕುಡಿತದ ಚಟವಿತ್ತು. ಆತ ಮದ್ಯದ ಅಮಲಿನಲ್ಲಿ ಹೆಂಡತಿ ಮತ್ತು ಮಕ್ಕಳಿಗೆ ಹಿಂಸೆಯನ್ನು ನೀಡುತ್ತಿದ್ದ. ಆತನ ಹಿಂಸೆ ತಾಳಲಾರದೇ ಹೆಂಡತಿ ಮತ್ತು ಮಕ್ಕಳು ಆಗ್ರಾಕ್ಕೆ ಹೋಗಿದ್ದರು. ಆದರೆ ಬಲ್ವೀರ್ ಅವರಿಗೆ ಮನವರಿಕೆ ಮಾಡಿ ಎರಡು ಬಾರಿ ನಗರಕ್ಕೆ ವಾಪಸ್ಸು ಕರೆತಂದಿದ್ದ.
    ಹೀಗೆ ಕರೆತಂದ ಬಳಿಕ ಸ್ವಲ್ಪ ದಿನ ಸುಮ್ಮನಿದ್ದ ಬಲ್ವೀರ್​ ಮತ್ತೇ ಹಳೆ ಚಾಳಿ ಮುಂದುವರೆಸಿದ್ದ. ಕೊನೆಗೆ ಆತನ ಪತ್ನಿ 2013ರಲ್ಲಿ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕ್ರೌರ್ಯ ಮತ್ತು ಕಿರುಕುಳ ಪ್ರಕರಣವನ್ನು ದಾಖಲಿಸಿದ್ದು, ಬಲ್ವೀರ್​ ಕೃತ್ಯ ಸಾಬೀತಾದ ಹಿನ್ನೇಲೆಯಲ್ಲಿ ಆತ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ.

    ಜೈಲಿನಲ್ಲಿದ್ದಾಗಲೇ ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಯೋಜಿಸಿದ್ದ ಬಲ್ವೀರ್​, ಜೈಲಿನಿಂದ ಬಿಡುಗಡೆಯಾದ ಒಂದು ವರ್ಷದ ನಂತರ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆತ, ಪ್ರೀತಿ ಪ್ರೇಮದ ನಾಟಕವಾಡಿ 2015ರಲ್ಲಿ ಪತ್ನಿಯ ಜತೆಗೆ ಮತ್ತೆ ವಾಸವಾಗಿದ್ದ. ಈ ವೇಳೆ ಆತನ ಕಿರುಕುಳ ತಾಳಲಾರದೆ ಆತನ ಕಿರಿಯ ಮಗಳು ತನ್ನ ಸ್ನೇಹಿತೆಯ ಮನೆಯಲ್ಲಿ ವಾಸವಾಗಿದ್ದಳು.

    ಇದನ್ನೂ ಓದಿ: ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ,ಪಿಎಫ್, ಇಎಸ್ಐ ಕಡ್ಡಾಯ;ಡಿಸಿ ನಿತೇಶ ಪಾಟೀಲ ಸೂಚನೆ

    ಕೊನೆಗೆ, 2007ರ ಸೆಪ್ಟೆಂಬರ್ 9ರಂದು ಮಕ್ಕಳು ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡ ಬಲ್ವೀರ್​, ತನ್ನ ಹೆಂಡತಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಟೆಲಿವಿಷನ್ ವಾಲ್ಯೂಮ್ ಹೆಚ್ಚಿಸಿ ಅಡುಗೆ ಮನೆಯಿಂದ ಚಾಕು ತಂದು 11.45ಕ್ಕೆ ಕತ್ತು ಕೊಯ್ದ ನಂತರ ಬಾಗಿಲು ಮುಚ್ಚಿ ಪರಾರಿಯಾಗಿದ್ದ. ಪೊಲೀಸರು ಈತನನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದರು.

    ಈ ಕೊಲೆ ಪ್ರಕರಣ ಕುರಿತು ತೀರ್ಪು ನೀಡಿದ ನ್ಯಾಯಾಲವು, ಬಲ್ವೀರ್​ನ ಕೌಟುಂಬಿಕ ದೌರ್ಜನ್ಯಕ್ಕೆ ಒಂದು ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯವು 2,000 ರೂ. ದಂಡದ ಜತೆಗೆ ಸಂತ್ರಸ್ತ ಪರಿಹಾರ ಯೋಜನೆಯಡಿ ಅವರ ಇಬ್ಬರು ಮಕ್ಕಳಿಗೆ ತಲಾ 1.50 ಲಕ್ಷ ರೂ.ಗಳನ್ನು ಪಾವತಿಸುವಂತೆ ಆದೇಶಿಸಿದೆ.
    ಆರೋಪಿಯು ಸಂತ್ರಸ್ತೆಯ ಪತಿಯಾಗಿದ್ದು, ಅವಳನ್ನು ಅತ್ಯಂತ ಪ್ರೀತಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುವುದು ಅವನ ಕರ್ತವ್ಯವಾಗಿತ್ತು. ಇಲ್ಲಿ, ಆರೋಪಿಯು ಹಿಂದಿನ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ತನ್ನ ಹೆಂಡತಿಯನ್ನು ಕೊಲ್ಲುವ ಉದ್ದೇಶದಿಂದ ಜೈಲಿನಿಂದ ಹೊರಬಂದು, ಆಕೆಯ ಮನಸ್ಥಿತಿ ಬದಲಿಸಿ ಘೋರ ಅಪರಾಧ ಎಸಗಿರುವುದರಿಂದ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.(ಏಜೆನ್ಸೀಸ್​​​​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts