More

    I.N.D.I.A. ಹೆಸರಿನ ಬೆನ್ನಲ್ಲೇ ಜೀತೇಗಾ ಭಾರತ​ ಎಂಬ ಟ್ಯಾಗ್​ಲೈನ್​ ಅಂತಿಮಗೊಳಿಸಿದ ವಿಪಕ್ಷಗಳು

    ನವದೆಹಲಿ: ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್​ಡಿಎ ಒಕ್ಕೂಟದ ವಿರುದ್ಧ ತೊಡೆ ತಟ್ಟಿರುವ 26 ವಿಪಕ್ಷಗಳು ನಿನ್ನೆಯಷ್ಟೇ (ಜು. 18) ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸಭೆ ನಡೆಸಿ, ಈ ಹಿಂದೆ ಯುಪಿಎ ಎಂದಿದ್ದ ಮಹಾಮೈತ್ರಿಯ ಹೆಸರನ್ನು ಇದೀಗ INDIA (Indian National Developmental Inclusive Alliance) ಎಂದು ಮರುನಾಮಕರಣ ಮಾಡಿದ್ದು, ಇದರ ಬೆನ್ನಲ್ಲೇ “ಜೀತೇಗ ಭಾರತ” (ಭಾರತ ಗೆಲ್ಲಲಿದೆ) ಎಂಬ ಅಡಿಬರಹವನ್ನು ಅಂತಿಮಗೊಳಿಸಿದೆ.

    2024ರಲ್ಲಿ ಎದರಾಗಲಿರುವ ಲೋಕಸಭಾ ಚುನಾವಣೆಗೆ ನಿನ್ನೆ ಬೆಂಗಳೂರಿನಿಂದ ರಣಕಹಳೆ ಊದಿರುವ ಇಂಡಿಯಾ ಒಕ್ಕೂಟ, ಎನ್​ಡಿಎ ಮೈತ್ರಿಕೂಟವನ್ನು ಮಣಿಸುವುದೇ ಅದರ ಉದ್ದೇಶವಾಗಿದೆ.

    ಇದನ್ನೂ ಓದಿ: ಟೊಮ್ಯಾಟೊ ಬೆಳೆ ಕಾಯುತ್ತಿದ್ದ ರೈತನ ಹತ್ಯೆ! ಒಂದೇ ವಾರದಲ್ಲಿ ಎರಡನೇ ಪ್ರಕರಣ

    ಜುಲೈ 17 ರಿಂದ ಆರಂಭವಾದ ಎರಡು ದಿನಗಳ ಮಹಾಸಭೆಯಲ್ಲಿ I.N.D.I.A (ಇಂಡಿಯನ್​ ನ್ಯಾಷನಲ್​ ಡೆವೆಲಪ್​ಮೆಂಟ್​ ಇನ್​ಕ್ಲೂಸಿವ್​ ಅಲೈಯನ್ಸ್)​ ಹೆಸರನ್ನು ಅಂತಿಮಗೊಳಿಸಿದೆ. ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ 2024ರ ಲೋಕಸಭಾ ಚುನಾವಣೆ ಮೋದಿ ಹಾಗೂ ಇಂಡಿಯಾ ನಡುವಿನ ಯುದ್ಧ. ಈ ಸಮರ ಎನ್​ಡಿಎ ಮತ್ತು ಇಂಡಿಯಾ, ನರೇಂದ್ರ ಮೋದಿ ಮತ್ತು ಇಂಡಿಯಾ, ಮೋದಿ ಸಿದ್ಧಾಂತ ಮತ್ತು ಇಂಡಿಯಾ ನಡುವಿನ ಹೋರಾಟವಾಗಿದೆ. ಎಲ್ಲ ಯುದ್ಧಗಳಲ್ಲೂ ಭಾರತ ಯಾವಾಗಲೂ ಗೆಲುವು ಸಾಧಿಸಿದೆ ಎಂದರು.

    ಇತ್ತ ಬೆಂಗಳೂರಿನಲ್ಲಿ ವಿಪಕ್ಷಗಳು ಎನ್​ಡಿಎ ಒಕ್ಕೂಟದ ಬಗ್ಗೆ ರಣಕಹಳೆ ಮೊಳಗಿಸುತ್ತಿದ್ದರೆ, ಅತ್ತ ಬಿಜೆಪಿಯು ತನ್ನ 39 ಮೈತ್ರಿ ಪಕ್ಷಗಳ ಪ್ರತಿನಿಧಿಗಳೊಂದಿಗೆ ದೆಹಲಿಯಲ್ಲಿ ಶಕ್ತಿ ಪ್ರದರ್ಶನ ನಡೆಸಿತು. ಈ ಎರಡು ಮಹಾ ಸಭೆಗಳ ಮೂಲಕ ನಿನ್ನೆಯಿಂದಲೇ ಲೋಕಸಭಾ ಚುನಾವಣೆಯ ಮಹಾಯುದ್ಧಕ್ಕೆ ಮುನ್ನಡಿಯನ್ನು ಬರೆದಂತಾಗಿದೆ.

    ವಿಪಕ್ಷಗಳು ಸಭೆ ಸೇರಿದ ಬೆನ್ನಲ್ಲೇ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ನಕಾರಾತ್ಮಕತೆಯ ಮೇಲೆ ನಿರ್ಮಿಸಲಾದ ಮೈತ್ರಿಗಳು ಎಂದಿಗೂ ಗೆದ್ದಿಲ್ಲ ಎಂದರು. ಮೈತ್ರಿಯು ಕುಟುಂಬ ರಾಜಕಾರಣ ಮತ್ತು ಭ್ರಷ್ಟವಾದಾಗ ದೇಶವು ಸೋಲುತ್ತದೆ ಎಂದು ಹೇಳಿದರು. I.N.D.I.A ಹೆಸರನ್ನು ಎದುರಿಸಲು ಪ್ರಧಾನಿ ಮೋದಿ “ಭಾರತ್” ಕುರಿತು ಮಾತನಾಡಿದರು ಮತ್ತು NDA ಬಡವರು ಮತ್ತು ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.

    ಇದನ್ನೂ ಓದಿ: ಇಂಡಿಯಾ ಮೈತ್ರಿಗೆ ರಾಹುಲ್ ಸಮರ್ಥನೆ: ಒಗ್ಗಟ್ಟನ್ನು ಸಾಧ್ಯವಾದರೆ ತಡೆಯಿರಿ ಎಂದು ಮಮತಾ ಸವಾಲು

    ಇದೀಗ ಇಂಡಿಯಾ ಒಕ್ಕೂಟವೂ ಭಾರತ್​ ಎಂಬ ಅಡಿಬರಹ ಅಂತಿಮಗೊಳಿಸಿದ್ದು, ಭಾರತ vs ಇಂಡಿಯಾ ಎಂದು ಬಿಂಬಿಸುತ್ತಿರುವ ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರವನ್ನು ನೀಡಿದೆ. (ಏಜೆನ್ಸೀಸ್​)

    I.N.D.I.A ಆಗಿ ಬದಲಾದ UPA; ಕಾನೂನು ಪ್ರಕಾರ ಸರಿಯೇ? ಮಾಜಿ ಕಾನೂನು ಸಚಿವರು ಹೇಳಿದ್ದಿಷ್ಟು…

    LOVE BITES | ಪ್ರಿಯಕರನ ಕಥೆ ಮುಗಿಸಲು ಹಾವಾಡಿಗನಿಗೆ ಸುಪಾರಿ ಕೊಟ್ಟ ಮಹಿಳೆ!

    ಈ 4 ಗ್ರಾಮಗಳಲ್ಲಿ ಜನರೇ ಇಲ್ಲದಿದ್ದರೂ ಭೂಮಿಯ ದರ ಮಾತ್ರ ಕಡಿಮೆಯಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts