More

    ಆ 38 ವರ್ಷಗಳು… ಒಮ್ಮೆ ಶಿಕ್ಷೆ… 2 ಬಾರಿ ಖುಲಾಸೆ… 6 ಸಿಜೆಐಗಳು…

    ನವದೆಹಲಿ: ಪರವಾನಗಿ ಇಲ್ಲದೆ ಅರಿಷಿಣ ಮಾರಾಟ ಮಾಡಿದ್ದಲ್ಲದೆ, ಮಾರಾಟ ಮಾಡುತ್ತಿದ್ದ ಅರಿಷಿಣ ಹುಳು ಹಿಡಿದಿತ್ತು ಎಂದು 38 ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂಕೋರ್ಟ್​ ಇತ್ತೀಚೆಗೆ ಇತ್ಯರ್ಥಪಡಿಸಿದ್ದು, ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿದೆ.

    1982ರ ಆಗಸ್ಟ್​ 18ರಂದು ಸೋನೆಪತ್​ ನಿವಾಸಿ ಪ್ರೇಮ್​ಚಂದ್​ ಅವರ ಅಂಗಡಿ ಮೇಲೆ ದಾಳಿ ಮಾಡಿದ್ದ ಆಹಾರ ನಿರೀಕ್ಷಕರೊಬ್ಬರು ಪರವಾನಗಿ ಇಲ್ಲದೆ ಅರಿಷಿಣ ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದರು. 10 ಕೆ.ಜಿ. ಅರಿಷಿಣ ಇದ್ದ ಚೀಲವನ್ನು ವಶಪಡಿಸಿಕೊಂಡಿದ್ದಲ್ಲದೆ, 600 ಗ್ರಾಂ ಅರಿಷಿಣದ ಮಾದರಿಯನ್ನು ಸಂಗ್ರಹಿಸಿದ್ದರು. ಆದರೆ 18 ದಿನಗಳ ಬಳಿಕ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದ್ದರು.

    ಪ್ರಯೋಗಾಲಯದಲ್ಲಿ ಇದನ್ನು ಪರೀಕ್ಷಿಸಿದ್ದ ಪ್ರಯೋಗಾಲಯದ ತಜ್ಞ ಪುಡಿಯಲ್ಲಿ ಹುಳುಗಳು ಇರುವುದಾಗಿಯೂ, ಅವು ಆರೋಗ್ಯಕ್ಕೆ ಮಾರಕವಾಗಿರುವುದಾಗಿಯೂ ವರದಿ ಕೊಟ್ಟಿದ್ದರು. ಇದನ್ನು ಆಧರಿಸಿ ಆಹಾರ ಕಲಬೆರಕೆ ತಡೆ ಕಾಯ್ದೆ, 1954ರ 16ನೇ ವಿಧಿ ಪ್ರಕಾರ ಪ್ರೇಮ್​ಚಂದ್​ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

    ಇದನ್ನೂ ಓದಿ: 5 ವರ್ಷದೊಳಗಿನ ಮಕ್ಕಳಲ್ಲಿ ಅತಿಹೆಚ್ಚು ಕರೊನಾ ವೈರಾಣು; ಸೂಪರ್​ಸ್ಪ್ರೆಡರ್​ಗಳಾಗುತ್ತಾರಾ ಈ ಮಕ್ಕಳು?

    ಅಂದಾಜು 13 ವರ್ಷ ಈ ಪ್ರಕರಣದ ವಿಚಾರಣೆ ನಡೆಸಿದ ಅಧೀನ ನ್ಯಾಯಾಲಯ, ಪ್ರೇಮ್​ ಚಂದ್​ ಅವರನ್ನು ಖುಲಾಸೆಗೊಳಿಸಿತ್ತು. ಪಂಜಾಬ್​ ಮತ್ತು ಹರಿಯಾಣ ಹೈಕೋರ್ಟ್​ಗೆ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. 14 ವರ್ಷ ವಿಚಾರಣೆ ನಡೆಸಿದ ನ್ಯಾಯಾಲಯ, 2009ರಲ್ಲಿ ಕಲಬೆರಕೆ ಮತ್ತು ಹುಳು ಹಿಡಿದ ವಸ್ತುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಒಂದು ತಿಂಗಳು ಜೈಲುಶಿಕ್ಷೆ ಮತ್ತು 500 ರೂ. ದಂಡ ವಿಧಿಸಿ ಪ್ರಕರಣವನ್ನು ಇತ್ಯರ್ಥಪಡಿಸಿತ್ತು.

    ಹೈಕೋರ್ಟ್​ನ ಈ ಆದೇಶದ ವಿರುದ್ಧ ಪ್ರೇಮ್​ ಚಂದ್​ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. 2010ರಲ್ಲಿ ಆಗಿನ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಪಿ. ಸತಾಶಿವಂ ಅವರ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ಆನಂತರದಲ್ಲಿ 6 ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿ ಹೊಂದಿದ್ದಾರೆ. ಅಂದಿನಿಂದಲೂ ಆಮೆಯಂತೆ ತೆವಳುತ್ತಿದ್ದ ವಿಚಾರಣೆಯನ್ನು 2020ರ ಮಾರ್ಚ್​ನಲ್ಲಿ ತ್ವರಿತವಾಗಿ ಮುಗಿಸಲು ಸುಪ್ರೀಂಕೋರ್ಟ್​ ನಿರ್ಧರಿಸಿತ್ತು. ಅದರಂತೆ ನ್ಯಾಯಮೂರ್ತಿಗಳಾದ ಎನ್​.ವಿ. ರಮಣ, ಸೂರ್ಯಕಾಂತ್​ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿ, ಮಾದರಿ ಸಂಗ್ರಹಿಸಿದ ತಕ್ಷಣವೇ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸದೆ ಅನಗತ್ಯವಾಗಿ ವಿಳಂಬಿಸಲಾಗಿದೆ. ಈ ಅವಧಿಯಲ್ಲಿ ಅರಿಷಿಣವನ್ನು ಕಲಬೆರಕೆ ಮಾಡುವ ಸಾಧ್ಯತೆ ಇದ್ದೇ ಇದೆ ಎಂಬ ಅಭಿಪ್ರಾಯಕ್ಕೆ ಬಂದಿತು.

    ಪ್ರಯೋಗಾಲಯದಲ್ಲಿ ಮಾದರಿಯನ್ನು ಪರೀಕ್ಷಿಸಿದ್ದ ತಜ್ಞರು ಕೂಡ ಈ ಅಂಶವನ್ನು ಒಪ್ಪಿಕೊಂಡಿದ್ದಲ್ಲದೆ, ಬರಿಗಣ್ಣಿಗೆ ಕಾರಣದ ಹುಳುಗಳು ಅದರಲ್ಲಿ ಇದ್ದುದಾಗಿ ಹೇಳಿದರು. ಇವರ ಈ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಪೀಠ ಪ್ರೇಮ್​ ಚಂದ್​ ಅವರನ್ನು ಖುಲಾಸೆಗೊಳಿಸಿ ಪ್ರಕರಣವನ್ನು ಇತ್ಯರ್ಥಪಡಿಸಿ, 38 ವರ್ಷಗಳ ಅವರ ನ್ಯಾಯಾಲಯಗಳ ಸುತ್ತಾಟಕ್ಕೆ ಮಂಗಳ ಹಾಡಿತು.

    ಐಪಿಎಲ್​ ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಟೂರ್ನಮೆಂಟ್​ ಎಂದ ಪಾಕ್​ ಆಟಗಾರನ್ಯಾರು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts