More

    ಅಫ್ಘಾನಿಸ್ತಾನದಲ್ಲಿ ಎರಡು ಬಾರಿ ಕಂಪಿಸಿದ ಭೂಮಿ; ಭಾರತದಲ್ಲೂ ನಡುಗಿದ ಭೂಮಿ

    ನವದೆಹಲಿ: ಜಪಾನ್​ನಲ್ಲಿ ಭೂಕಂಪ ಸಂಭವಿಸಿದ ಎರಡು ದಿನಗಳ ನಂತರ ಅಫ್ಘಾನಿಸ್ತಾನದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಅರ್ಧ ಘಂಟೆ ಅವಧಿಯಲ್ಲಿ ಎರಡು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.

    ಅಫ್ಗಾನಿಸ್ತಾನದ ಫೈಜಾಬಾದ್‌ನಲ್ಲಿ ಅರ್ಧ ಘಂಟೆ ಅವಧಿಯಲ್ಲಿ ಎರಡು ಭೂಕಂಪ ಸಂಭವಿಸಿದ್ದು, ಮೊದಲ ಭೂಕಂಪವು 4.4 ರ ತೀವ್ರತೆಯನ್ನು ಹೊಂದಿದ್ದು, ಎರಡನೇಯದ್ದು 4.8 ತೀವ್ರತೆ ಹೊಂದಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

    ಮೊದಲ ಕಂಪನವು ಮಧ್ಯರಾತ್ರಿ 12.28ಕ್ಕೆ ಫೈಜಾಬಾದ್‌ನಿಂದ 126 ಕಿ.ಮೀ ದೂರದಲ್ಲಿ ಭೂಮಿಯಿಂದ 80 ಕಿಮೀ ಆಳದಲ್ಲಿ ಸಂಭವಿಸಿದೆ. ಎರಡನೆಯದು ಫೈಜಾಬಾದ್‌ನಿಂದ 100 ಕಿ.ಮೀ ದೂರದಲ್ಲಿ ಮಧ್ಯರಾತ್ರಿ 12.55ಕ್ಕೆ ಭೂಮಿಯಿಂದ 100 ಕಿ.ಮೀ ಆಳದಲ್ಲಿ ಸಂಭವಿಸಿದೆ. ಈವರೆಗೆ ಯಾವುದೇ ಸಾವು, ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

    ಇದನ್ನೂ ಓದಿ: ಆರ್​ಸಿಬಿ ನಾಯಕತ್ವದಲ್ಲಿ ಬದಲಾವಣೆ; ಮತ್ತೊಮ್ಮೆ ಕ್ಯಾಪ್ಟನ್​ ಆಗ್ತಾರ ಕಿಂಗ್​ ಕೊಹ್ಲಿ?

    ಪಶ್ಚಿಮ ಬಂಗಾಳ, ಮಣಿಪುರದಲ್ಲಿ ಕಂಪಿಸಿದ ಭೂಮಿ

    ಮಂಗಳವಾರ (ಜನವರಿ 02) ರಾತ್ರಿ 10.35ರ ಸುಮಾರಿಗೆ ಪಶ್ಚಿಮ ಬಂಗಾಳದ ಅಲಿಪುರ್ದೂರ್ ಜಿಲ್ಲೆಯಲ್ಲಿ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್​ಎಸ್​ಸಿ) ತಿಳಿಸಿದೆ. ಭೂಕಂಪವು ರಾತ್ರಿ ವೇಳೆ ಆಗಿದ್ದು, 5 ಕಿಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿವೆ. ಯಾವುದೇ ದೊಡ್ಡ ಪ್ರಮಾಣದಲ್ಲಿ ಸಂಭವಿಸಿಲ್ಲ. ಭೂಮಿ ನಡುಗಿದಾಗ ಜನರು ಮನೆಯಿಂದ ಹೊರಬಂದಿದ್ದಾರೆ.

    ಇತ್ತ ಮಣಿಪುರದಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಭೂಕಂಪವು ಉಖ್ರುಲ್‌ ಪ್ರದೇಶದಲ್ಲಿ ಮಧ್ಯರಾತ್ರಿ 12.01 ನಿಮಿಷಕ್ಕೆ ಸಂಭವಿಸಿದೆ. ಜನರು ನಿದ್ರೆಯಲ್ಲಿದ್ದಾಗ ದಿಢೀರ್​ ಭೂಮಿ ಅಲುಗಾಡಿದೆ. ಇದರಿಂದ ಗಾಬರಿಯಾದ ಜನರು ಕೆಲಕಾಲ ಆತಂಕಕ್ಕೀಡಾಗಿದ್ದರು. ಮನೆಯಲ್ಲಿ ಪಾತ್ರೆಗಳು ನೆಲಕ್ಕುರುಳಿ ಬಿದ್ದಿವೆ. ಹಠಾತ್​ ನಡುಕದಿಂದ ಜನರು ನಿದ್ದೆಗೆಡುವಂತಾಗಿದೆ. ಉಕ್ರುಲ್​ ಪ್ರದೇಶದ ಸುತ್ತಲ್ಲೂ ಬುಧವಾರ ಮಧ್ಯರಾತ್ರಿ 26 ಕಿ.ಮೀ ಆಳದಲ್ಲಿ ಕಂಪನದ ಅಲೆಗಳು ಕಂಡುಬಂದಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts