More

    ಕಿವೀಸ್‌ಗೆ ಇಂದು ಆಫ್ಘನ್ ಸವಾಲು: ಅಜೇಯ ಓಟ ಮುಂದುವರಿಸುವ ತವಕದಲ್ಲಿ ನ್ಯೂಜಿಲೆಂಡ್

    ಚೆನ್ನೈ: ಸರ್ವಾಂಗೀಣ ನಿರ್ವಹಣೆಯೊಂದಿಗೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿ ಬೀಗುತ್ತಿರುವ ಹಾಲಿ ರನ್ನರ್ ಅಪ್ ನ್ಯೂಜಿಲೆಂಡ್ ತಂಡ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ನರಿಗೆ ಶಾಕ್ ನೀಡಿದ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಅ್ಘಾನಿಸ್ತಾನ ತಂಡದ ಸವಾಲು ಎದುರಿಸಲಿದೆ. ಅಜೇಯ ಓಟ ಮುಂದುವರಿಸುವ ತವಕದಲ್ಲಿರುವ ಕಿವೀಸ್, ನಾಯಕ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದ್ದು, ಟಾಮ್ ಲಾಥಮ್ ತಂಡವನ್ನು ಮುನ್ನಡೆಸಲಿದ್ದಾರೆ.
    ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಅದ್ಭುತ ನಿರ್ವಹಣೆಯೊಂದಿಗೆ ಅಭಿಯಾನ ಆರಂಭಿಸಿದ ಕಿವೀಸ್, ವಿಲಿಯಮ್ಸನ್ ಗೈರು, ಟಿಮ್ ಸೌಥಿ ಅನುಪಸ್ಥಿತಿಯಲ್ಲೂ ಸವಾಲನ್ನು ಹಿಮ್ಮೆಟ್ಟಿಸಿದೆ.
    ಟಾಮ್ ಲಾಥಮ್ ನೇತೃತ್ವದಲ್ಲಿ ಆಡಿದ ಮೊದಲ 2 ಪಂದ್ಯಗಳಲ್ಲಿ ನಿರಾಯಾಸ ಗೆಲುವು ಒಲಿಸಿಕೊಂಡಿದ್ದ ಕಿವೀಸ್ ಭರ್ಜರಿ ರನ್‌ರೇಟ್ ಸಂಪಾದಿಸಿದೆ. ಅನುಭವಿ ವೇಗಿ ಟಿಮ್ ಸೌಥಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.
    ಇನ್ನೂ ಆಂಗ್ಲರನ್ನು ಮಣಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಅ್ಘಾನಿಸ್ತಾನ, ಕಿವೀಸ್‌ಗೆ ಸವಾಲೊಡ್ಡುವ ತವಕದಲ್ಲಿದೆ. ಎರಡು ತಂಡಗಳು ಉತ್ತಮ ಸ್ಪಿನ್ನರ್‌ಗಳನ್ನು ಹೊಂದಿವೆ. ಚೆಪಾಕ್‌ನ ಚಿದಂಬರಂ ಕ್ರೀಡಾಂಗಣದ ಸ್ಪಿನ್-ಸ್ನೇಹಿ ಪಿಚ್‌ನ ಲಾಭವನ್ನು ಸಮರ್ಥವಾಗಿ ಬಳಸಿಕೊಳ್ಳಲು ಉಭಯ ತಂಡಗಳೂ ಪೈಪೋಟಿ ನಡೆಸಲಿವೆ. ಮಿಚೆಲ್ ಸ್ಯಾಂಟ್ನರ್‌ಗೆ ಚೆಪಾಕ್ ಅಂಗಳದ ಪರಿಚಯ ಕಿವೀಸ್‌ಗೆ ಹೆಚ್ಚಿನ ನೆರವು ನೀಡಿದೆ. ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ, ಲಾಕಿ ಗ್ಯುರ್ಸನ್ ವೇಗದ ಬೌಲಿಂಗ್ ಆ್ಘನ್‌ಗೆ ಕಂಟಕವಾಗಲಿದೆ. ಭರ್ಜರಿ ಾರ್ಮ್‌ನಲ್ಲಿರುವ ಕಿವೀಸ್ ಅಗ್ರ ಕ್ರಮಾಂಕದಲ್ಲಿ ಕೇನ್ ಬದಲಿಗೆ ವಿಲ್ ಯಂಗ್ ಅವಕಾಶ ಪಡೆಯುವ ನಿರೀಕ್ಷೆ ಇದೆ. ಹಿಂದಿನ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಬೆಂಗಳೂರು ಮೂಲದ ರಚಿನ್ ರವಿಂದ್ರ ಮೂರನೇ ಕ್ರಮಾಂಕಕ್ಕೆ ಮರಳಲಿದ್ದಾರೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆಂಗ್ಲರನ್ನು ಕಟ್ಟಿಹಾಕಿದ ಮುಜೀಬ್ ಉರ್ ರೆಹಮಾನ್, ಮೊಹಮದ್ ನಬಿ ಹಾಗೂ ರಶೀದ್ ಖಾನ್ ಮತ್ತೋಮ್ಮೆ ಪಿಚ್ ನೆರವಿನ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಬ್ಯಾಟಿಂಗ್‌ನಲ್ಲಿ ಆರಂಭಿಕ ರಹಮಾನುಲ್ಲ ಗುರ್ಬಜ್ 2 ಅರ್ಧಶತಕ ಸಿಡಿಸಿ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ಶಾಹಿದಿ ಹಶ್ಮತ್ ಉಲ್ಲಾ, ಅಜ್ಮತ್ ಉಲ್ಲಾ ಒರ್ಮಜಾಯಿ ಹಾಗೂ ಇಕ್ರಾಂ ಅಲಿಖಿಲ್ ಕೊಡುಗೆ ತಂಡಕ್ಕೆ ಬಲ ತುಂಬಲಿದೆ. ಟೂರ್ನಿಯ ಕಪ್ಪು ಕುದುರೆ ಎಂದು ಬಿಂಬಿಸಲಾಗಿರುವ ಆ್ಘನ್ ಮತ್ತೊಂದು ಅಚ್ಚರಿಯ ಲಿತಾಂಶದ ಕಾತರದಲ್ಲಿದೆ. ಎರಡೂ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಮಾತ್ರ ಪರಸ್ಪರ ಎದುರಾಗಿವೆ.

    ವಿಶ್ವಕಪ್ ಮುಖಾಮುಖಿ-2
    ನ್ಯೂಜಿಲೆಂಡ್-2
    ಅ್ಘಾನಿಸ್ತಾನ-0

    ಆರಂಭ: ಮಧ್ಯಾಹ್ನ 2
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts