More

    ಉದ್ಯಮಿಯಿಂದ ಲಂಚ ಪಡೆದ ಪ್ರಕರಣ; ಸಂಸದೆ ಮಹುವಾ ಮೊಯಿತ್ರಾಗೆ ಮತ್ತೊಮ್ಮೆ ಹಿನ್ನಡೆ

    ನವದೆಹಲಿ: ಸಂಸತ್​ ಕಲಾಪದ ವೇಳೆ ಅದಾನಿ ಸಮೂಹದ ವಿರುದ್ಧ ಪ್ರಶ್ನೆಗಳನ್ನು ಕೇಳಲು ಉದ್ಯಮಿ ಒಬ್ಬರಿಂದ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಂಸತ್​ ಸದಸ್ಯತ್ವದಿಂದ ಅನರ್ಹಗೊಳ್ಳುವ ಭೀತಿಯಲ್ಲಿರುವ ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವ ಮೊಯಿತ್ರಾಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

    ಲೋಕಸಭೆ ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯನ್ನು ಬೆದರಿಸಿ ನನ್ನ ವಿರುದ್ಧ ದೂರು ಕೊಡಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ಈ ಹಿಂದೆ ಆರೋಪಿಸಿದ್ದರು.

    ಸಂಸದೆ ಆರೋಪಕ್ಕೆ ಪ್ರತಿಕ್ರಿಯಿಸಿರುವ ಉದ್ಯಮಿ ದರ್ಶನ್ ಹೀರಾನಂದನಿ ಮಹತ್ವದ ಬೆಳವಣಿಗೆಯಲ್ಲಿ ಸಂಸದೆಗೆ ಲಂಚ ಕೊಟ್ಟಿರುವ ಸಂಬಂಧ ಸದನಕ್ಕೆ ಸಲ್ಲಿಸಲಾಗಿರುವ ಅಫಿಡೆವಿಟ್​ನಲ್ಲಿ ನಾನೇ ಸಹಿ ಮಾಡಿದ್ದು, ಯಾರು ಸಹ ನನ್ನನ್ನು ಬೆದರಿಸಿಲ್ಲ. ನಾನು ಸ್ವಯಂಪ್ರೇರಿತನಾಗಿ ದೂರು ನೀಡಿದ್ದು, ಇದರಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಇದನ್ನೂ ಓದಿ: ಪಾಕ್​ಗೆ ಮಣ್ಣು ಮುಕ್ಕಿಸಿದ ಅಫ್ಘಾನಿಸ್ತಾನ; ಬಾಬರ್ ಪಡೆಗೆ ಹ್ಯಾಟ್ರಿಕ್ ಮುಖಭಂಗ

    ನಾವು ಯಾವುದೇ ಆರೋಪ ಮಾಡಿದ್ದರು ಅಗತ್ಯ ದಅಖಲೆಗಳನ್ನಿಟ್ಟುಕೊಂಡು ಮಾತನಾಡುತ್ತೇವೆ. ಈ ಪ್ರಕರಣದಲ್ಲೂ ಸಹ ನಾವು ಸತ್ಯ ಹೊರಬರಲು ಈ ರೀತಿ ಮಾಡಿದ್ದು, ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ದನಿದ್ದೇನೆ ಎಂದು ಉದ್ಯಮಿ ದರ್ಶನ್​ ಹೀರಾನಂದಿನಿ ತಿಳಿಸಿದ್ದಾರೆ.

    ಪ್ರಕರಣದ ಹಿನ್ನಲೆ

    ಲೋಕಸಭೆ ಅಧಿವೇಶನದಲ್ಲಿ ಮಹುವಾ ಮೊಯಿತ್ರಾ ಹಾಗೂ ತೃಣಮೂಲ ಪಕ್ಷದ ಸಂಸದರು ಪ್ರತಿ ಅಧಿವೇಶನದಲ್ಲೂ ಅದಾನಿ ವಿಚಾರವಾಗಿ ಕೂಗಾಡಿ ಕಲಾಪವನ್ನು ವ್ಯರ್ಥ ಮಾಡುತ್ತಾರೆ. ಪ್ರತಿಬಾರಿಯೂ ಈಗೇಕೆ ಆಗುತ್ತದೆ ಎಂದು ವಿಚಾರಿಸಿದಾಗ ಅವರು ಹೀರಾನಂದನಿ ಸಂಸ್ಥೆಯ ಮಾಲೀಕರಿಂದ ಲಂಚ ಪಡೆದು ಅವರು ಹೇಳಿದ ಹಾಗೆ ಇವರು ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ತಿಳಿದು ಬಂದಿತ್ತು.

    2019-23ರ ವರೆಗಿನ ಅಧಿವೇಶನದಲ್ಲಿ ಸಂಸದೆ ಮಹುವಾ ಅವರು 61 ಪ್ರಶ್ನೆಗಳನ್ನು ಕೇಳಿದ್ದು, ಈ ಪೈಕಿ 50 ಪ್ರಶ್ನೆಗಳು ಹೀರಾನಂದಿನಿ ಹಾಗೂ ಅದಾನಿಗೆ ಸಂಬಂಧಿಸಿದ ಪ್ರಶ್ನೆಗಳಾಗಿವೆ. ಇದಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರು ಈಗಾಗಲೇ ಸಿಬಿಐಗೆ ದೂರು ನೀಡಿದ್ದು, ಲೋಕಸಭೆ ವತಿಯಿಂದ ವಿಶೇಷ ಸಮಿತಿ ಒಂದನ್ನು ರಚಿಸಿ ತನಿಖೆ ನಡೆಸಬೇಕು ಎಂದು ಲೋಸಕಭೆ ಸ್ಪೀಕರ್​ಗೆ ಬರೆದ ಪತ್ರದಲ್ಲಿ ಸಂಸದ ನಿಶಿಕಾಂತ್ ದುಬೆ ಎಂದು ಆಗ್ರಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts