More

    ಎಇಪಿಎಸ್ ಮೂಲಕ ಮನೆಗೆ ದುಡ್ಡು

    ಪ್ರಕಾಶ್ ಮಂಜೇಶ್ವರ, ಮಂಗಳೂರು

    ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಮನೆಗೇ ತರಿಸಿಕೊಳ್ಳಬಹುದು!
    ಆಧಾರ್ ಜೋಡಣೆಗೊಂಡಿರುವ ಯಾವುದೇ ಬ್ಯಾಂಕ್ ಖಾತೆಯಿಂದ ಆಧಾರ್ ಆಧರಿತ ಪಾವತಿ ವ್ಯವಸ್ಥೆ (ಎಇಪಿಎಸ್) ಮೂಲಕ ಗ್ರಾಹಕರು ಹಣ ಪಡೆಯಬಹುದಾಗಿದೆ.
    ಏ.1ರಿಂದ 23 ತನಕ ದಕ್ಷಿಣ ಕನ್ನಡ ಜಿಲ್ಲೆಯ 1,542 ಜನರು ಒಟ್ಟು 43,52,918 ರೂ. ಮೊತ್ತವನ್ನು ಎಇಪಿಎಸ್ ಮೂಲಕ ಪಡೆದಿದ್ದಾರೆ. ಉಡುಪಿ ವ್ಯಾಪ್ತಿಯಲ್ಲಿ 646 ಮಂದಿ 19,63,700 ರೂ. ಪಡೆದಿದ್ದಾರೆ. ರಾಜ್ಯದಲ್ಲಿ 4500 ಮಂದಿ ಯೋಜನೆ ಸೌಲಭ್ಯ ಪಡೆದ ಬಾಗಲಕೋಟೆ ಪ್ರಥಮ ಸ್ಥಾನದಲ್ಲಿದೆ. 3,700 ಮಂದಿ ಸೌಲಭ್ಯ ಪಡೆದ ಬೆಳಗಾವಿಗೆ ನಂತರದ ಸ್ಥಾನ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಬ್ಯಾಂಕ್ ಶಾಖೆಯಿರುವುದು ಹಾಗೂ ಯೋಜನೆ ಕುರಿತು ಅರಿವಿನ ಕೊರತೆಯಿಂದ ಅವಿಭಜಿತ ಜಿಲ್ಲೆಗಳಲ್ಲಿ ಯೋಜನೆ ಪರಿಣಾಮಕಾರಿಯಾಗಿಲ್ಲ.

    ಎಇಪಿಎಸ್ ಅಂದರೆ ಏನು?
    ಓರ್ವ ವ್ಯಕ್ತಿ ಆಧಾರ್ ಜೋಡಣೆಯಾಗಿರುವ ತನ್ನ ಬ್ಯಾಂಕ್ ಖಾತೆಯಿಂದ ಮನೆಯಲ್ಲಿ ಇದ್ದುಕೊಂಡೇ ಒಂದು ಬಾರಿಗೆ 5000 ರೂ. ತನಕ ಹಣ ಪಡೆಯಬಹುದು. ಈ ಯೋಜನೆಯಲ್ಲಿ ಸಮೀಪದ ಅಂಚೆ ಕಚೇರಿಗೆ ತೆರಳಿಯೂ ವ್ಯವಹಾರ ಮಾಡಬಹುದು. ಬೆರಳಚ್ಚು ಈಗ ಅನಕ್ಷರತೆಯ ಸಂಕೇತವಲ್ಲ. ಅಂಚೆಯಣ್ಣ ಈಗ ಸಂಚಾರಿ ಎಟಿಎಂ ಕೂಡ ಆಗಿದ್ದಾನೆ. ಅಂಚೆ ಕಚೇರಿ ಅಥವಾ ತಮ್ಮ ಪ್ರದೇಶದ ಅಂಚೆಯಣ್ಣನಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರೆ ಸಾಕು. ಹಣ ಮನೆ ತಲುಪುತ್ತದೆ. ಸೌಲಭ್ಯ ಪಡೆಯುವವರು ಯಾವುದೇ ದಾಖಲೆ ಪತ್ರಗಳಿಗೆ ಸಹಿ ಹಾಕಬೇಕಾಗಿಲ್ಲ. ಎಟಿಎಂ ಕೂಡ ಅಗತ್ಯವಿಲ್ಲ. ಬೆರಳಚ್ಚಿನ ಮೂಲಕ ದೃಢೀಕರಣ ಒದಗಿಸಿದರೆ ಸಾಕು. ನಗದು ಸ್ವೀಕಾರ ಮಾತ್ರವಲ್ಲ, ಖಾತೆಯಲ್ಲಿ ಉಳಿಕೆ, ಹಣ ವ್ಯವಹಾರದ ಮಾಹಿತಿಯನ್ನೂ ಈ ವ್ಯವಸ್ಥೆಯಲ್ಲಿ ಪಡೆಯಬಹುದು. ಕೇರಳದಲ್ಲಿ ಈ ವ್ಯವಸ್ಥೆ ಜನಪ್ರಿಯವಾಗಿದೆ.

    ಹೆಚ್ಚು ಉಪಯುಕ್ತ
    ಲಾಕ್‌ಡೌನ್‌ನಂತಹ ಸಂದರ್ಭ ಹೊರಗೆ ಓಡಾಟ ನಡೆಸಲು ನಿರ್ಬಂಧಗಳಿರುತ್ತವೆ. ಇಂತಹ ಸಂದರ್ಭ ಯೋಜನೆ ಹೆಚ್ಚಿನ ಅನುಕೂಲ ಒದಗಿಸಲಿದೆ. ವೃದ್ಧರು, ಅಂಗವಿಕಲರು, ಅಸ್ವಸ್ಥರು ಇತರರ ನೆರವಿಗೆ ಕಾಯದೆ ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಪಡೆಯಬಹುದು.

    ಎಇಪಿಎಸ್ ಯೋಜನೆ ಸೌಲಭ್ಯ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರಸ್ತುತ ವಿವಿಧ ಪಿಂಚಣಿ ಮನಿ ಆರ್ಡರ್‌ಗಳಿಗೆ ಆದ್ಯತೆ ನೀಡಿ, ಜತೆಗೆ ಎಇಪಿಎಸ್ ಮೂಲಕ ಹಣ ಬಟವಾಡೆ ಆಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಅಂಚೆ ಕಚೇರಿ ಹಾಗೂ ಬ್ಯಾಂಕ್ ಶಾಖೆಗಳು ಗರಿಷ್ಠ ಪ್ರಮಾಣದಲ್ಲಿ ಇರುವುದು ಸಾರ್ವಜನಿಕರಿಗೆ ಅನುಕೂಲ.
    ಶ್ರೀಹರ್ಷ
    ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts